30 C
Mumbai
April 24, 2026
Mumbai News Kannada
ಪ್ರಕಟಣೆ

ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿ: ಡಿ. 9 ರಂದು 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ





ವಸಾಯಿ ಪರಿಸರದ ತುಳು- ಕನ್ನಡಿಗರ ಸುಪರಿಚಿತ ಮಣಿಕಂಠ ಸೇವಾ ಸಮಿತಿ ವಸಾಯಿ ಇವರ 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಡಿ.9 ರಂದು ಮಂಗಳವಾರ, ವಸಾಯಿ ಪಶ್ಚಿಮದ ದತ್ತಾನಿ ಸ್ಕ್ವೇರ್ ಬಳಿಯ ಯುನಿಟಿ ಮಾಲ್ ನ ಅರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ನ 3ನೇ ಮಹಡಿಯಲ್ಲಿ ಜರಗಲಿದೆ.
ಅಂದು ಬೆಳಗ್ಗೆ ಗಂಟೆ 6.30ಕ್ಕೆ ಶ್ರೀಕ್ರಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಗಣ ಹೋಮ, ಗಂಟೆ 9.30ಕ್ಕೆ ಸ್ಥಳೀಯ ಮಹಿಳೆಯರಿಂದ ಭಜನೆ, 11ಕ್ಕೆ ಶ್ರೀ ನಾರಾಯಣ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ ಬಳಿಕ ಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಿಯುಗದ ವರದ ಶ್ರೀ ಅಯ್ಯಪ್ಪ ಸ್ವಾಮಿ ಪ್ರಸಾದವನ್ನು ಸ್ವೀಕರಿಸಬೇಕೆಂದು ಮಣಿಕಂಠ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಕರ್ನೂರು ಶಂಕರ ಆಳ್ವ, ಅಧ್ಯಕ್ಷರಾದ ಯಶೋಧರ ವಿ. ಕೋಟ್ಯಾನ್ ಕಾಪು, ಉಪಾಧ್ಯಕ್ಷರಾದ ಎಕ್ಕಾರು ದಿನೇಶ್ ಹೆಗ್ಡೆ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿಗಳಾದ ರಾಧಾಕ್ರಷ್ಣ ಶೆಟ್ಟಿ, ಜತೆ ಕೋಶಾಧಿಕಾರಿ ಸುಧೀರ್ ಸಾಲ್ಯಾನ್, ಪೂಜಾ ಸಮಿತಿ ಸಲಹೆಗಾರರಾದ ಜಗದೀಶ್ ಎಸ್ ಶೆಟ್ಟಿ, ಮತ್ತು ಉಮೇಶ್ ಕಾಂತಾವರ, ಮುಖ್ಯ ಸಲಹೆಗಾರರಾದ ನಾಗರಾಜ ಶೆಟ್ಟಿ, ಅಶೋಕ್ ಶೆಟ್ಟಿ, ಪಾಂಡು ಎಲ್. ಶೆಟ್ಟಿ, ಸುರೇಂದ್ರ ಶೆಟ್ಟಿ, ಮಂಜುನಾಥ ಶೆಟ್ಟಿ, ಕರುಣಾಕರ ಅಮೀನ್, ದಯಾನಂದ ಪೂಜಾರಿ, ಗಣೇಶ ಕುಲಾಲ್, ರಾಜೇಶ್ ರೈ, ತಾರಾನಾಥ್ ಶೆಟ್ಟಿ ವಸಾಯಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮಲಾಡ್ ಸ್ಥಳೀಯ ಕಚೇರಿ ,ಜು 21 ರಂದು ಗುರುಪೂರ್ಣಿಮೆ, ಆಟಿಡೊಂಜಿ ದಿನ, ಕಾರ್ಯಕ್ರಮ.

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಜ. 27ಕ್ಕೆ ವಾರ್ಷಿಕ ಮಹೋತ್ಸವದ ಸಂಭ್ರಮ:

Mumbai News Desk

ದೊಡ್ಡಣ್ಣ ಗುಡ್ಡೆಯ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಮೇ 9 ರಿಂದ ಮೇ 13 ಪ್ರತಿಷ್ಠಾ ವರ್ಧಂತಿ ಮಹೋತ್ಸವ

Mumbai News Desk

ನಾಳೆ (ಫೆ. 23) ಶ್ರೀಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ ಹಾಗೂ 23ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಮೇ 18ರಂದು ಸಾಮೂಹಿಕ ಅಶ್ಲೇಷ ಬಲಿ ಪೂಜೆ

Mumbai News Desk