32 C
Mumbai
September 29, 2026
Mumbai News Kannada
ಪ್ರಕಟಣೆ

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆ.17ರಂದು ಸಂಕ್ರಮಣ ಹಾಗೂ ನಾಗ ಪಂಚಮಿ ಪೂಜೆ



ಥಾಣೆ ಪಶ್ಚಿಮ ವೀರ್ ಸಾವರ್ಕರ್ ನಗರದ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಸ್ಟ್ 17ರಂದು ಸೋಮವಾರ ಮಾಸಿಕ ಸಂಕ್ರಮಣ ಪೂಜೆ ಹಾಗೂ ನಾಗ ಪಂಚಮಿ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಗಣಪತಿ ಹವನ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸಂಕ್ರಮಣ ಪೂಜೆ, ಮಹಾ ಆರತಿ ಹಾಗೂ ಅನ್ನದಾನ ನೆರವೇರಲಿದೆ. ಸಂಜೆ 6 ಗಂಟೆಗೆ ಆಶ್ಲೇಷ ನಾಗಬಲಿ ಪೂಜೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ ಜರುಗಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸುವಂತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶಿವಪ್ರಸಾದ್ ಪೂಜಾರಿ ಹಾಗೂ ಭಕ್ತ ಮಂಡಳಿ ಆತ್ಮೀಯವಾಗಿ ವಿನಂತಿಸಿದೆ.
ಭಕ್ತರ ಆಧ್ಯಾತ್ಮಿಕ ನೆಮ್ಮದಿ, ಕುಟುಂಬದ ಸುಖ-ಶಾಂತಿ ಹಾಗೂ ಸಮೃದ್ಧಿಗಾಗಿ ನಡೆಯಲಿರುವ ಈ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳಿಗೂ ಆದರದ ಸ್ವಾಗತ ಕೋರಲಾಗಿದೆ.



Related posts

ಚಿತ್ರಕಲಾವಿದ ಜಯ್ ಸಾಲಿಯನ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗೌರವ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮಲಾಡ್ ಸ್ಥಳೀಯ ಕಚೇರಿ ,ಜು 21 ರಂದು ಗುರುಪೂರ್ಣಿಮೆ, ಆಟಿಡೊಂಜಿ ದಿನ, ಕಾರ್ಯಕ್ರಮ.

Mumbai News Desk

ಮುಂಬಯಿ ಬಂಟರ ಸಂಘ ವಸಯಿ ದಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ,

Mumbai News Desk

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಮಂಜೇಶ್ವರ : ಡಿ. 14ರಿಂದ 17ರ ತನಕ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವ

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ವತಿಯಿಂದ (ನಾಳೆ) ಫೆ.26 ರಂದು ಪಾನಕ ಸೇವೆ

Mumbai News Desk