32 C
Mumbai
March 7, 2026
Mumbai News Kannada
ಪ್ರಕಟಣೆ

ಮುಂಬಯಿ ಕನ್ನಡ ಸಂಘ: ಡಿ. 20ರಂದು ಎರಡು ದತ್ತಿ ಉಪನ್ಯಾಸಗಳ ಕಾರ್ಯಕ್ರಮ






​ಕಳೆದ ಒಂಭತ್ತು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ ನಾಡು ಸುಡಿಯ ಸೇವೆಯಲ್ಲಿ ನಿರತವಾಗಿದ್ದು ಇದೀಗ ಶತಮಾನದತ್ತ ಸಾಗುತ್ತಿರುವ ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಎರಡು ದತ್ತಿ ಉಪನ್ಯಾಸಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
​ಖಾಲ್ಸಾ ಕಾಲೇಜು ಕನ್ನಡ ಪ್ರೇಮಿ ಮಂಡಳಿ ದತ್ತಿ ನಿಧಿಯ ಪರವಾಗಿ ಮುಂಬಯಿಯ ಉದಯೋನ್ಮುಖ ಕವಯಿತ್ರಿ, ಲೇಖಕಿ ದೀಪಾ ಹರೀಶ್‌ ಶೆಟ್ಟಿಯವರು “ಇಂದಿನ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
​ದಿ. ಜಿ. ವಿ. ರಂಗಸ್ವಾಮಿ ದತ್ತಿ ನಿಧಿಯ ಪರವಾಗಿ ಮಹಾಪೌರ ಆದರ್ಶ ಶಿಕ್ಷಕ ಪುರಸ್ಕಾರ ಪಡೆದಿರುವ ಶಿಕ್ಷಕ ಮಹದೇವ ಸಿದಮಲ್ಲಾ ಜಾವೀರರು “ನವಭಾರತದ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
​ಮುಂಬಯಿಯ ಹಿರಿಯ ಸಾಹಿತಿ ಡಾ. ಸುಮಾ ದ್ವಾರಕಾನಾಥ್‌ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್‌ ಎಸ್‌. ನಾಯಕ್‌ ಅಧ್ಯಕ್ಷತೆ ವಹಿಸಲಿದ್ದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್‌. ಕಕೇರರರು ಕಾರ್ಯಕ್ರಮದ ನಿರ್ವಹಣೆ ಮಾಡುತ್ತಾರೆ.
​ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲದಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಲಾದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿಕ್ರಂ ಜೋಶಿಯವರನ್ನು ಸಂಘದ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
​ಶನಿವಾರ ದಿನಾಂಕ 20-12-2025 ರಂದು ಸಂಜೆ ಗಂಟೆ 5-00ಕ್ಕೆ ಮೈಸೂರು ಅಸೋಸಿಯೇನ್‌ನ ತಳಮಹಡಿ ಸಭಾಗೃಹದಲ್ಲಿ ಈ ಕಾರ್ಯಕ್ರಮವು ಜರುಗಲಿದೆ. ಕಾರ್ಯಕ್ರಮದಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಹಾಜರಿರಬೇಕಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್‌. ಕರ್ಕೇರರು ಹಾಗೂ ಗೌರವ ಜೊತೆ ಕಾರ್ಯದರ್ಶಿ ರಾಮಚಂದ್ರ ಭಟ್‌ ವಿನಂತಿಸಿಕೊಂಡಿದ್ದಾರೆ.

​ಸೋಮನಾಥ ಎಸ್‌. ಕರ್ಕೇರ, ಫೋನ್‌: 9819321186



Related posts

ಡೊಂಬಿವಲಿ: ಜ. 17ರಂದು ಶ್ರೀ ಮಹಾವಿಷ್ಣು ಮಂದಿರದ 49ನೇ ವಾರ್ಷಿಕ ಸತ್ಯನಾರಾಯಣ ಪೂಜೆ, ಶನಿ ಪೂಜೆ

Mumbai News Desk

ಫೆ.25 : ಗೋರೆಗಾಂವ್ ಕರ್ನಾಟಕ ಸಂಘ 63ನೇ ನಾಡಹಬ್ಬ, ವಿಚಾರ ಗೋಷ್ಠಿ.

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 34ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ: ನವೆಂಬರ್ 30ರಂದು ವಿಜೃಂಭಣೆಯ ಆಚರಣೆ

Mumbai News Desk

  ಜು 14; ಗೋರೆಗಾಂವ್ ಪೂರ್ವ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ  ಉಚಿತ ಆರೋಗ್ಯ, ಮತ್ತು ಕಣ್ಣಿನ ಪರೀಕ್ಷೆ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ವತಿಯಿಂದ ನಾಡಹಬ್ಬ ಸಂಭ್ರಮಕ್ಕೆ ಅದ್ಧೂರಿ ಸಿದ್ಧತೆ: ನ. 9ರಂದು ಸಮೂಹ ಗಾಯನ, ನೃತ್ಯ ವೈಭವ ಮತ್ತು ಹಾಸ್ಯ ಕವಿಗೋಷ್ಠಿ

Mumbai News Desk

ಜು. 20 : ಸಯಾನ್ ನ ಶ್ರೀ ನಿತ್ಯಾನಂದ ಸಭಾಗ್ರಹದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗೆ ಗುರುವಂದನೆ.

Mumbai News Desk