ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿ, ಪ್ರಖ್ಯಾತ ಸಾಹಿತಿ, ಸಂಶೋಧಕ ಡಾ. ವಿಶ್ವನಾಥ್ ಕಾರ್ನಾಡ್ ಅವರು ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪ್ರಶಸ್ತಿ 2025ರಿಂದ ಪುರಸ್ಕೃತರಾದ ಪ್ರಯುಕ್ತ ಅವರನ್ನು ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ವತಿಯಿಂದ ಕಾರ್ನಾಡ್ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಫೌಂಡೇಶನ್ ನ ಅಧ್ಯಕ್ಷ ಸುರೇಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್, ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಕೋಶಾಧಿಕಾರಿ ಟಿ. ವಿ. ಪೂಜಾರಿ, ಜತೆ ಕಾರ್ಯದರ್ಶಿ ಅಶೋಕ್ ಸುವರ್ಣ, ಧನ ಸಂಗ್ರಹ ಸಮಿತಿಯ ಕಾರ್ಯಧ್ಯಕ್ಷ ಮುಂಜುನಾಥ್ ಪೂಜಾರಿ ಅವರು ಉಪಸ್ಥಿತರಿದ್ದರು.
ಅಧ್ಯಕ್ಷರು ಮಾತಾಡುತ್ತಾ ಮುಂಬಾಯಿಯ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿ ಯೋರ್ವರಿಗೆ ಈ ಪ್ರಶಸ್ತಿ ದೊರಕಿರುವುದು ರಾತ್ರಿ ಶಾಲೆಗಳ ಹಳೆ ವಿದ್ಯಾರ್ಥಿ ಗಳಿಗೆ ಅಭಿಮಾನದ ಸಂಗತಿಯಾಗಿದೆ ಎಂದು ತಮ್ಮ ಪ್ರಶಂಸೆ ವ್ಯಕ್ತಪಡಿಸಿದರು.
ಡಾ. ಕಾರ್ನಾಡ್ ಅವರು ಈ ಪ್ರಶಸ್ತಿ ಯನ್ನು ತನ್ನ ಬದುಕಿ ಗೆ ದಾರಿ ಮಾಡಿಸಿದ ಮದರ್ ಇಂಡಿಯಕ್ಕೆ ಅರ್ಪಿಸುತ್ತೇನೆ ಎಂದು ಹೇಳಿದರು.
ಕಥೆಗಾರರಾಗಿ, ಕವಿಯಾಗಿ, ನಾಟಕ ಕಲಾವಿದರಾಗಿ, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆಗಳ ಉಪನ್ಯಾಸಕರಾಗಿ, ಫುಟ್ಬಾಲ್ ಕ್ರೀಡಾ ಪಟು ವಾಗಿ, ವಕೀಲರಾಗಿ, ಸಂಪಾದಕರಾಗಿ, ಬ್ಯಾಂಕ್ ರ್ ಆಗಿ, ಉತ್ತಮ ವಾಗ್ಮಿ ಯಾಗಿ, ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಹಿಂದಿ ಭಾಷಾ ಪ್ರಚಾರಕರಾಗಿ ಬಹುಮುಖ ವ್ಯಕ್ತಿತ್ವದ ಡಾ. ಕಾರ್ನಾಡ್ 30 ಕ್ಕಿಂತಲೂ ಹೆಚ್ಚು ಕೃತಿ ಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಮದರ್ ಇಂಡಿಯಾದ ಹೆಮ್ಮೆ ಯ ಹಳೆ ವಿದ್ಯಾರ್ಥಿ ಎಂದು ಅಶೋಕ್ ಸುವರ್ಣ ಪರಿಚಯ ಮಾಡಿದರು.




