32.3 C
Mumbai
June 7, 2026
Mumbai News Kannada
ಮುಂಬಯಿ

ಬಿ. ಎಸ್. ಕೆ.ಬಿ. ಎಸೋಸಿಯೇಶನ್, ಸಾಯನ್ ಶತಮಾನೋತ್ಸವಾಚರಣೆ ಸಮಾರೋಪ, ಡಾ. ಸುರೇಶ್ ಎಸ್ ರಾವ್ ಅವರಿಗೆ “ಗೋಕುಲ ರತ್ನ” ಪ್ರಶಸ್ತಿ ಪ್ರದಾನ





 

ಕಳೆದ ಒಂದು ವರ್ಷದಲ್ಲಿ ಅನೇಕ ಧಾರ್ಮಿಕ/ಸಾಂಸ್ಕೃತಿಕ, ಸಾಹಿತ್ಯಿಕ, ಪ್ರವಾಸ,  ಕ್ರೀಡಾ ಮಹೋತ್ಸವ, ಮುಂತಾದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಬಿ.ಎಸ್.ಕೆ.ಬಿ. ಎಸೋಸಿಯೇಶನ್, ರವಿವಾರ ದಿನಾಂಕ ೨೮.೧೨.೨೦೨೫ ರಂದು ಷಣ್ಮುಖಾನಂದ ಸಭಾಗೃಹ, ಕಿಂಗ್ಸ್ ಸರ್ಕಲ್ ನಲ್ಲಿ ಸಮಾರೋಪ ಸಮಾರಂಭವನ್ನು ಆಚರಿಸುವುದರೊಂದಿಗೆ ಶತಮಾನೋತ್ಸವಾಚರಣೆಗೆ ತೆರೆ ಎಳೆಯಿತು. 

ಸಂಜೆ ಏಳು ಗಂಟೆಗೆ   ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ಗೈದರು. ಸಂಘದ ಉಪಾಧ್ಯಕ್ಷೆ ಚಿತ್ರಾ ಮೇಲ್ಮನೆ ನೆರೆದ ಅತಿಥಿ ಅಭ್ಯಾಗತರನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾ, ಗೋಕುಲ ನೂರು ವರ್ಷಗಳಲ್ಲಿ ನಡೆದು ಬಂದ ದಾರಿ ಹಾಗೂ ಒಂದು ವರ್ಷದಲ್ಲಿ ಸಂಸ್ಥೆಯ ವತಿಯಿಂದ ಜರಗಿದ  ಅನೇಕ ವಿಧದ ಕಾರ್ಯಕ್ರಮಗಳನ್ನು  ವಿಸ್ತಾರವಾಗಿ ತಿಳಿಸುತ್ತಾ ಕಾರ್ಯಕ್ರಮ ನಿರೂಪಣೆ ಗೈದರು.  ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದ ಪ್ರಾಯೋಜಕರನ್ನು ಶಾಲು ಹೊದಿಸಿ ಸನ್ಮಾನಿಸಿದರು. 

ಉಪಾಧ್ಯಕ್ಷರಾದ ವೈ. ಮೋಹನ್ರಾಜ್ ನೇತೃತ್ವದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ,  ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ,  ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಕಾರ್ಯ ನಿರ್ವಹಿಸಿ, ತನ್ನ ಜನ್ಮಭೂಮಿ ಹಾಗೂ ಕರ್ಮಭೂಮಿಯಲ್ಲಿ  ಅಪಾರ ಜನಮನ್ನಣೆಯನ್ನು ಗಳಿಸಿದ,ಜೀರ್ಣಾವಸ್ಥೆಯಲ್ಲಿದ್ದ ಗೋಕುಲದ ಪುನರ್ ನಿರ್ಮಾಣ  ಅಸಾಧ್ಯವೆಂದೇ ಭಾವಿಸಿದ ಸಮಯದಲ್ಲಿ ಭಗೀರಥ ಪ್ರಯತ್ನದಿಂದ ಏಳು ಅಂತಸ್ತಿನ ಗೋಕುಲ ಕಟ್ಟಡ, ಹಾಗೂ  ಕಾಷ್ಠ,ಶಿಲ್ಪ ವೈಭವದಿಂದ ರಾರಾಜಿಸುವ  ಶ್ರೀ ಗೋಪಾಲಕೃಷ್ಣ ದೇವಾಲಯವನ್ನು ಸಂಘದ ಸದಸ್ಯರ ಹಾಗೂ ಭಕ್ತಾದಿಗಳ ಸಹಕಾರದಿಂದ ನಿರ್ಮಿಸಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಸಾಧನೆಯ ಸರದಾರ ಬಿರುದಾಂಕಿತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ವಿಜೇತ, ಕೊಡುಗೈ ದಾನಿ, ಬಿ.ಎಸ್,ಕೆ,ಬಿ. ಎಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ  ಅಧ್ಯಕ್ಷ ಡಾ. ಸುರೇಶ್ ಎಸ್ ರಾವ್ ಅವರ ಬಹು ಮುಖ ವ್ಯಕ್ತಿತ್ವ, ಸಂಘಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ, ಸಂಜೀವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಲ್ಪಡುವ ಅತ್ಯುನ್ನತ “ಗೋಕುಲ ರತ್ನ”  ಪ್ರಶಸ್ತಿಯಮ್ಮ ಉಪಾಧ್ಯಕ್ಷರು, ಗೌ. ಕಾರ್ಯದರ್ಶಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ, ಧಾರ್ಮಿಕ ಸಮಿತಿ ಸದಸ್ಯರೊಂದಿಗೆ  ಡಾ. ಸುರೇಶ್ ಎಸ್ ರಾವ್ ಅವರಿಗೆ  ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಗುಚ್ಛ, ಸನ್ಮಾನ ಪತ್ರ  ಹಾಗೂ ಉಡುಗೊರೆಗಳೊಂದಿಗೆ  ಡಾ.. ಸುರೇಶ್ ರಾವ್ ಅವರಿಗೆ ಪ್ರದಾನ ಮಾಡಿದರು.  ಜಗದೀಶ್ ಆಚಾರ್ಯ  ಸನ್ಮಾನ ಪತ್ರ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಅಂತೆಯೇ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ರಾವ್ ಅವರಿಗೂ  ಶಾಲು ಹೊದಿಸಿ ಉಡುಗೊರೆಗಳನ್ನಿತ್ತು ಗೌರವಿಸಿದರು. 

ಸನ್ಮಾನಕ್ಕೆ ಉತ್ತರವಾಗಿ ಡಾ. ಸುರೇಶ್ ರಾವ್ ತನ್ನ ಅಧ್ಯಕ್ಷತೆಯ ಕಾಲದಲ್ಲಿ ಬೆಂಬಲವಾಗಿ ನಿಂತ ಪದಾಧಿಕಾರಿಗಳಿಗೆ, ಕಾರ್ಯಕಾರೀ ಸಮಿತಿಯವರಿಗೆ ಮನಃಪೂರ್ವಕ ಧನ್ಯವಾದ ಸಮರ್ಪಿಸಿದರು. ಅಲ್ಲದೆ ಗೋಕುಲ ಪುನರ್ ನಿರ್ಮಾಣ ಕಾರ್ಯದಲ್ಲಿ ತನಗೆ ಬೆಂಬಲವಾಗಿ ನಿಂತ ಮಾಜಿ ಉಪಾಧ್ಯಕ್ಷ ವಾಮನ್ ಹೊಳ್ಳ, ಮಾಜಿ ಕೋಶಾಧಿಕಾರಿ ಹರಿದಾಸ್ ಭಟ್, ಗೌ. ಕಾರ್ಯದರ್ಶಿ ಅನಂತ ಪದ್ಮನಾಭ ಪೋತಿ, ಶತಮಾನದ ಸ್ಮರಣಿಕಾ ಪುಸ್ತಕಗಳಿಗೆ ಸಹಕರಿಸಿದ ಜಗದೀಶ್ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಹಕರಿಸಿದ ಸುಧಾಕರ ಆಚಾರ್ಯ ರವರನ್ನು ಶಾಲು ಹೊದಿಸಿ ಗೌರವಿಸಿದರು. ಗೌ. ಕಾರ್ಯದರ್ಶಿ ಎ. ಪಿ.ಕೆ.ಪೋತಿ  ಧನ್ಯವಾದ ಸಮರ್ಪಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಂಡಿಯನ್ ಐಡಲ್ ನ ಉದಯೋನ್ಮುಖ ಗಾಯಕ ಗಾಯಕಿಯರಾದ, ಚೈತನ್ಯ ದೇವಡೆ, ರಿಷಿ ಸಿಂಗ್, ಷಣ್ಮುಖಪ್ರಿಯ ಮತ್ತು ಮಾನಸಿ ಘೋಷ್ ಅವರಿಂದ ಪ್ರಸ್ತುತಗೊಂಡ ಬಾಲಿವುಡ್ ಬೀಟ್ಸ್,  ಚಿತ್ರ ಗೀತೆಗಳ ರಸ ಮಂಜರಿ ಸಭಾಗೃಹದಲ್ಲಿ ನೆರೆದ ಅಪಾರ ವೀಕ್ಷಕರ  ಮನ ರಂಜಿಸಿತು. 



Related posts

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಶೇಷ ಗುರು ಪೂಜೆ. ನಾರಾವಿ ಸತೀಶ್ ಸ್ವಾಮಿಯ ಸನ್ಮಾನ

Mumbai News Desk

ಭಾಯಂದರ್ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್‌ನ 19ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣೆ ಶಿಬಿರ

Mumbai News Desk

ಜಗಜ್ಯೋತಿ ಕಲಾವೃಂದ, ಮುಂಬಯಿ ಇದರ 38 ನೇ ವಾರ್ಷಿಕೋತ್ಸವ ಮತ್ತು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಭಕ್ತಿ ಸಡಗರದ  ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ. ಸಂಪನ್ನ

Mumbai News Desk