27.7 C
Mumbai
July 23, 2026
Mumbai News Kannada
ಪ್ರಕಟಣೆ

ಮೀರಾಗಾಂವ್: ಜ.1ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ







ಮೀರಾರೋಡ್ (ಡಿ.30): ಇಲ್ಲಿನ ಮೀರಾಗಾಂವ್‌ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವರ್ಷದ ಮೊದಲ ದಿನವಾದ ಜನವರಿ 1ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಸಂಭ್ರಮದಿಂದ ಜರುಗಲಿದೆ.

​ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ದನ್ ಭಟ್ ಅವರು ಪೌರೋಹಿತ್ಯ ವಹಿಸಲಿದ್ದಾರೆ.

ಕಾರ್ಯಕ್ರಮದ ವಿವರ:

  • ಸಂಜೆ 6.00 ರಿಂದ 7.30: ಶ್ರೀ ಸತ್ಯನಾರಾಯಣ ಮಹಾಪೂಜೆ.
  • ಸಂಜೆ 7.30 ರಿಂದ 8.00: ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ.
  • ರಾತ್ರಿ 8.00ಕ್ಕೆ: ಮಹಾ ಮಂಗಳಾರತಿ.
  • ರಾತ್ರಿ 8.30ಕ್ಕೆ: ಮಹಾ ಪ್ರಸಾದ ವಿತರಣೆ (ಅನ್ನದಾನ).

​ದೇವಸ್ಥಾನದ ಸ್ಥಾಪಕರಾದ ದಿ. ವಿಶ್ವನಾಥ ಪೂಂಜ ಅವರ ಪರಿವಾರದವರು, ಕೃಷ್ಣ ಶೆಟ್ಟಿ ದಂಪತಿ, ಪ್ರಧಾನ ಅರ್ಚಕ ಸಾಂತಿಂಜ ಮಾಧವ್ ಭಟ್, ಶ್ರೀ ಮಹಾಲಿಂಗೇಶ್ವರ ಟ್ರಸ್ಟ್‌ನ ಸದಸ್ಯರು ಹಾಗೂ ಮೀರಾ ಸೊಸೈಟಿ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.



Related posts

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ ಪೂರ್ವ : ಫೆ. 8ಕ್ಕೆ ವಾರ್ಷಿಕ ಮಂಗಳೂತ್ಸವ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಡಿ. 15ರಂದು ಕಲ್ಲುರ್ಟಿ -ಪಂಜುರ್ಲಿ -ಗುಳಿಗ ದೈವದ ನೇಮ (ಕೋಲ )

Mumbai News Desk

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಸಾವರ್ಕರ್ ನಗರ್ -ಥಾಣೆ : ಎ. 13ಕ್ಕೆ ಮಾಸಿಕ ಸಂಕ್ರಮಣ ಪೂಜೆ, ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk