ಮುಂಬಯಿ,ಡಿ.31:ಮೀರಾ ಭಾಯಂದರ್ ಪರಿಸರದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಮಾಜಿ ನಗರ ಸೇವಕ , ಕೇಬುಲ್ ಆಪರೇಟರ್ ಹಾಗೂ ಹೋಟೇಲು ಉದ್ಯಮಿ ಗಣೇಶ್ ಗೋಪಾಲ್ ಶೆಟ್ಟಿಯವರು ಮೀರಾಬಾಯಂದರ್ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭಾಯಂದರ್ ಪೂರ್ವದಲ್ಲಿರುವ ಮೂರನೇ ವಾರ್ಡಿನ ಪ್ರತಿನಿಧಿಯಾಗಿ ಡಿ.30ರಂದು ನಾಮಪತ್ರ ಸಲ್ಲಿಸಿದರು.
ಭಾಯಂದರ್ ಪಶ್ಚಿಮದ ಎಸ್.ವಿ.ರೋಡ್ ನಿವಾಸಿಯಾಗಿರುವ ಶೆಟ್ಟಿಯವರು 2007ರಿಂದ ನಗರ ಸೇವಕರಾಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ. ಪರಿಸರದ ಯಾವುದೇ ಸಂಘಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಭೆಯಲ್ಲಿ ಉಪಸ್ಥಿತರಿರದೆ ಸಂಪೂರ್ಣ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಾ ಜಾತಿಭೇದ ಮಾಡಿದೆ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.ತನ್ನ ವಾರ್ಡಿನಲ್ಲಿ ಸುರಕ್ಷೆ ಮತ್ತು ಸ್ವಚ್ಛತೆಗಾಗಿ ಹೆಚ್ಚಿನ ಒತ್ತು ನೀಡಿ ಪರಿಸರದಲ್ಲಿ ಹಿರಿಯ ನಾಗರಿಕರ ಸೆಲ್ಫೀ ಪೋಯಿಂಟ್ ಸ್ಟ್ಯಾಂಡ್ ನಿರ್ಮಿಸಿ ಪ್ರಶಂಶಿಸಲ್ಪಟ್ಟಿದ್ದಾರೆ.
ಭಾರತೀಯ ಜನತಾಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿರುವ ಗಣೇಶ್ ಜಿ.ಶೆಟ್ಟಿಯವರನ್ನು ಮೀರಾಭಾಯಯಂದರ್ ಬಿಜೆಪಿ ಶಾಸಕ ನರೇಂದ್ರ ಎಲ್.ಮೆಹತಾ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ವಾರ್ಡ್ ನಂಬರ್ ಮೂರರ ಅಭ್ಯರ್ಥಿಯಾಗಿ ಆಯ್ಕೆ ಗೊಳಿಸಿದ್ದಾರೆ.
ಶೆಟ್ಟಿಯವರು ಸುಮಾರು 38000 ಮತದಾರರಿರುವ ವಾರ್ಡಿನ ವಿವಿಧ ಜಾತಿಯ ಸಂಘಟನೆಗಳ, ಸಂಘಸಂಸ್ಥೆಗಳ,ತುಳು ಕನ್ನಡಿಗರ ಹಾಗೂ ಕನ್ನಡೇತರರ ಬೆಂಬಲವನ್ನು ಆಶಿಸಿದ್ದಾರೆ.




