32 C
Mumbai
March 7, 2026
Mumbai News Kannada
ಪ್ರಕಟಣೆ

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ





ಮುಂಬಯಿಯ ಪ್ರತಿಷ್ಠಿತ ಸಂಘಟನೆ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ (ರಿ.) ತನ್ನ 80ನೇ ವಾರ್ಷಿಕೋತ್ಸವ ಜನವರಿ 4ರ ಆದಿತ್ಯವಾರ, ಮೀರಾ ರೋಡ್ ಪೂರ್ವದ ಭಾರತ ರತ್ನ ಲತಾ ಮಂಗೇಶ್ಕರ್ ನಾಟ್ಯಗೃಹದ ಸಭಾಗ್ರಹದಲ್ಲಿ ದಿನವಿಡೀ ನಗರದ ವಿವಿಧ ಗಣ್ಯರು ಹಾಗೂ ಧಾರ್ಮಿಕ ಮುಖಂಡರ ಉಪಸ್ಥಿತಿಯಲ್ಲಿ ಜರುಗಲಿದೆ.

​ಧಾರ್ಮಿಕ ಆಶೀರ್ವಚನ ಮತ್ತು ಉದ್ಘಾಟನೆ:
ಉಡುಪಿಯ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಬೆಳಿಗ್ಗೆ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.
ಸಂಘದ ಅಧ್ಯಕ್ಷರಾದ ರವೀಶ್ ಬಿ. ಆಚಾರ್ಯ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷರಾದ ತುಕಾರಾಮ ಆಚಾರ್ಯ ಭಾಗವಹಿಸಲಿದ್ದಾರೆ.
ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ಪನ್ವೆಲ್ ಮುಂಬೈಯ ಆಡಳಿತ ಮೊಕ್ತೇಸರ ​ಸಿಎ ಶ್ರೀಧರ ಆಚಾರ್ಯ ಅವರು ‘ಸಂವಾದಿ’ ಬಿಡುಗಡೆಗೊಳಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾದ ರವೀಂದ್ರ ಚವಾಣ್, ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಬಿ. ಶೆಟ್ಟಿ, ಬಿಎಂಸಿ ಕಮಿಷನರ್ ಡಾ. ಭೂಷಣ್ ಗಗ್ರಾನಿ, ಉದ್ಯಮಿ ಶ್ರೀ ಜಯಕೃಷ್ಣ ಎ. ಶೆಟ್ಟಿ, ಶ್ರೀನಿವಾಸ್ ಆರ್ನಮೆಂಟ್ಸ್ ಬೋರಿವಲಿಯ ಮಾಲಕ ಶ್ರೀಧರ್ ವಿ ಆಚಾರ್ಯ, ನಿರ್ವಹಣಾ ಫಿಲಂಸ್ ಮುಂಬೈ,ನಿರ್ದೇಶಕ ರಾಜೀವ್ ರಾವ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

​ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 4 ಗಂಟೆಗೆ ಥಾಣೆ ಹೋಟೆಲ್ ಓನರ್ಸ್ ಅಸೋಸಿಯೇಷನ್ ಮತ್ತು ವಿಶ್ವ ಹಿಂದೂ ಪರಿಷತ್ ಥಾಣೆ ಇದರ ಅಧ್ಯಕ್ಷರಾದ ಪೊಲ್ಯ ಉಮೇಶ್ ಶೆಟ್ಟಿ, ಇವರ ಅಧ್ಯಕ್ಷತೆಯಲ್ಲಿ ಸಮರೋಪ ಸಮಾರಂಭ ಜರಗಲಿದೆ.

​ಮುಖ್ಯ ಅತಿಥಿಯಾಗಿ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ಡಾ. ಜಿ. ರಾಮಕೃಷ್ಣ ಆಚಾರ್ ಉಪಸ್ಥಿತರಿರುವರು.
​ ವಿಪ್ರೋ ಲಿಮಿಟೆಡ್‌ನ ನಿರ್ದೇಶಕರಾದ, ಎಸ್.ಪಿ. ಹರಿದಾಸ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿರುವರು.
​ ಮಹಾರಾಷ್ಟ್ರದ ಸಾರಿಗೆ ಸಚಿವ ಶ್ರೀ ಪ್ರತಾಪ್ ಸರನಾಯಕ್, ಖ್ಯಾತ ಸರ್ಜನ್ ಡಾ. ಸುರೇಶ್ ರಾವ್, ಮೋಗವೀರ ಮಹಾಜನ ಸಂಘ ಬಗ್ವಾಡಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಪಡು ಕುತ್ಯಾರ್ ಇದರ ಅಧ್ಯಕ್ಷ ಸದಾಶಿವ ಎ ಆಚಾರ್ಯ, ಸಮಾಜ ಸೇವಕ, ಉದ್ಯಮಿ ಮುಂಡಪ್ಪ ಎಸ್ ಪಯ್ಯಾಡೆ ಅತಿಥಿಗಳಾಗಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರಗಲಿದೆ.
​ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ : ಬೆಳಿಗ್ಗೆ 9.30ಗಂಟೆಯಿಂದ 10, 11.30ರಿಂದ 1.30, ಮದ್ಯಾಹ್ನ 2.30ರಿಂದ 4, ಸಂಜೆ 6.30ರಿಂದ 8.30.
ಸಂಜೆ 6.30ಕ್ಕೆ ಕನ್ನಡಿಗ ಕಲಾವಿದರ ಪರಿಷತ್ ಮಹಾರಾಷ್ಟ್ರದ ಕಲಾವಿದರಿಂದ “ಈ ರಾತ್ರೆಗ್ ಪಗೆಲುಗ್ ಯಾನ್ ” ಎಂಬ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

​ಮುಂಬಯಿಯಲ್ಲಿರುವ ವಿಶ್ವಕರ್ಮ ಸಮಾಜದ ಬಾಂಧವರು ಹಾಗೂ ಹಿತೈಷಿಗಳು ಈ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ರವೀಶ್ ಆಚಾರ್ಯ, ಉಪಾಧ್ಯಕ್ಷ ಗಣೇಶ ಕುಮಾರ್ ಕೆ, ಗೌರವ ಜತೆ ಕಾರ್ಯದರ್ಶಿಗಳಾದ ಪ್ರಸಾದ್ ಆಚಾರ್ಯ, ಸುಧೀರ್ ಜೆ ಆಚಾರ್ಯ,ಗೌರವ ಕೋಶಾಧಿಕಾರಿ ಬಾಬುರಾಜ್ ಆಚಾರ್ಯ, ಜತೆ ಕೋಶಾಧಿಕಾರಿ ರವೀಂದ್ರ ಪಿ ಆಚಾರ್ಯ, ಆಚರಣಾ ಸಮಿತಿಯ ಕಾರ್ಯಧ್ಯಕ್ಷ ಸದಾನಂದ ಎನ್ ಆಚಾರ್ಯ, ಶಿಕ್ಷಣ ಮತ್ತು ಸಾಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಡಾ. ಕೆ ಮೋಹನ್, ನಿಧಿ ಸಂಗ್ರಹ ಸಮಿತಿಯ ಕಾರ್ಯಧ್ಯಕ್ಷ ನಿಟ್ಟೆ ದಾಮೋದರ್ ವಿ ಆಚಾರ್ಯ, ಸ್ವಾಗತ ಸಮಿತಿಯ ಕಾರ್ಯಧ್ಯಕ್ಷ ಭವಾನಿಶಂಕರ್ ವಿ ಆಚಾರ್ಯ, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಧ್ಯಕ್ಷ ಅರುಣ್ ಪಿ ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತ ಜಿ ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೇಶ ಜಿ ಆಚಾರ್ಯ ಹಾಗೂ ಆಡಳಿತ ಸಮಿತಿಯ ಸದಸ್ಯರು ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ವಿನಂತಿಸಿದ್ದಾರೆ.



Related posts

ಜೀವದಾನಿ ಯಕ್ಷ ಕಲಾ ವೇದಿಕೆ ವಸೈ ತಾಲೂಕಾ* ಡಿ 27. ರಂದು 7 ನೇ ವರ್ಷದ ವಾರ್ಷಿಕೋತ್ಸವ.

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜೂ. 8 ರಂದು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ವಿದ್ಯಾರ್ಥಿವೇತನ,  ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಧನ ಸಹಾಯ 

Mumbai News Desk

ಜು21. ಕುಲಾಲ ಸಂಘದ ಗುರುವಂದನಾ ಭಜನ ಮಂಡಳಿಯಿಂದ ಗುರುಪೂರ್ಣಿಮೆ ಆಚರಣೆ,

Mumbai News Desk

ಮೇ 4 ಮತ್ತು 5ರಂದು ನಿಟ್ಟೂರು ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವ.

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ಜ 5:೮೪ ನೇ ವಾರ್ಷಿಕ ಮಿಲನ ‘ಸಾಫಲ್ಯ -೨೦೨೫’ 

Mumbai News Desk