2026 ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 188 (ಜಿ/ಉತ್ತರ) ನಲ್ಲಿ, ಎಸ್‌ಎಸ್‌ನ ಭಾಸ್ಕರ್ ಆರ್. ಶೆಟ್ಟಿ ಗೆದ್ದಿದ್ದಾರೆ.
ಮುಂಬೈ ಮಹಾನಗರಪಾಲಿಕೆಯ ಜ.15ರಂದು ನಡೆದ ಚುನಾವಣೆಯಲ್ಲಿ ವಾರ್ಡ್ ನಂಬ್ರ 188 (ಧಾರವಿ 90 ಫೀಟ್ )ರಿಂದ ಶಿವಸೇನ (ಶಿಂದೆ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಸಮಾಜ ಸೇವಕರೂ, ಶ್ರೀ ಸಿದ್ಧಿವಿನಾಯಕ ಟ್ರಸ್ಟ್ ನ ಟ್ರಸ್ಟಿ ಹಾಗೂ ಕನ್ನಡ ಸಂಘ ಸಯನ್ ನ ಸಲಹೆಗಾರರೂ ಆಗಿರುವ ಭಾಸ್ಕರ್ ಶೆಟ್ಟಿಯವರು 469 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಬಡಗರಗುತ್ತು ಮನೆತನದ ಭಾಸ್ಕರ್ ಶೆಟ್ಟಿ ಅವರು ಯಶಸ್ವಿ ಹೋಟೆಲ್ ಉದ್ಯಮಿಯಾಗಿದ್ದು, ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವಾ ನಿರತರಾಗಿರುವರು.




