32 C
Mumbai
March 7, 2026
Mumbai News Kannada
ಪ್ರಕಟಣೆ

ಓಂ ಶ್ರೀ ಜಗಧೀಶ್ವರಿ ಸೇವಾ ಸಮಿತಿ ದೇವುಲಪಾಡ, ಬೊರಿವಲಿ ಪೂರ್ವ : ಜ. 25ರಂದು 52ನೇ ವರ್ಷದ ಬೈದರ್ಕಳ ನೇಮೋತ್ಸವ





ಬೊರಿವಲಿ ಪೂರ್ವ, ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇ ಪಕ್ಕದ, ದೇವುಲಪಾಡ ಅಶ್ವತ್ತದಡಿ ಕ್ಷೇತ್ರದಲ್ಲಿ ನೆಲೆಯಾಗಿ ಭಕ್ತರ ಸಂಕಷ್ಟಗಳನ್ನು ಪರಿಹರಿಸಿಕೊಂಡು ಬರುತ್ತಿರುವ, ಶ್ರೀ ಜಗದೀಶ್ವರಿ ಮತ್ತು ಬ್ರಹ್ಮ ಬೈದರ್ಕಳರ 52ನೇ ವರ್ಷದ ವಾರ್ಷಿಕ ಮಹಾಪೂಜೆ ಹಾಗೂ ನೇಮೋತ್ಸವವು 2026ರ ಜನವರಿ 24 ರಿಂದ 26 ರವರೆಗೆ ಜರುಗಲಿದೆ.
ಕಾರ್ಯಕ್ರಮ :
ಜನವರಿ 24ರ ಶನಿವಾರ ಮಧ್ಯಾಹ್ನ 3:30ಕ್ಕೆ ಕಲಶ ಪ್ರತಿಷ್ಠೆಯೊಂದಿಗೆ ಆರಂಭಗೊಂಡು, ರಾತ್ರಿ 9:30ಕ್ಕೆ ಅಗೆಲ ತಂಬಿಲ ಹಾಗೂ ಬೈದರ್ಕಳ ದರ್ಶನ ನಡೆಯಲಿದೆ.
ಜನವರಿ 25ರ ಭಾನುವಾರ ಬೆಳಿಗ್ಗೆ 7:00ಕ್ಕೆ ಗಣಹೋಮ ಮತ್ತು ದುರ್ಗಾ ಪೂಜೆ ನೆರವೇರಲಿದ್ದು, ಮಧ್ಯಾಹ್ನ 1:00 ರಿಂದ 3:00ರ ವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಇರುತ್ತದೆ. ಅಂದು ಸಂಜೆ 7:00 ಗಂಟೆಗೆ ದೇವಿ ದರ್ಶನವಾದ ಬಳಿಕ, ರಾತ್ರಿ 8:00 ಗಂಟೆಯಿಂದ ಮುಖ್ಯ ಆಕರ್ಷಣೆಯಾದ ಬ್ರಹ್ಮ ಬೈದರ್ಕಳ ನೇಮ (ಕೋಲ),ತದನಂತರ ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಾಲಮ್ಮನ ನೇಮ ಸಾಂಪ್ರದಾಯಿಕವಾಗಿ ಜರುಗಲಿವೆ.
ಸೋಮವಾರ ಬೆಳಿಗ್ಗೆ ಮಂಗಳಾರತಿಯೊಂದಿಗೆ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಶೇಖರ್ ಇಂದು ಸಾಲಿಯಾನ್, ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಎಸ್. ಸಾಲಿಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಸದಾಶಿವ ಡಿ ಸಾಲಿಯಾನ್ ವಾರಂಗ, ಕೋಶಧಿಕಾರಿ ಆಶಿಶ್ ಆರ್ ಕೋಟ್ಯಾನ್, ಉಪಾಧ್ಯಕ್ಷ ದಯಾನಂದ್ ಪೂಜಾರಿ ವಾರಂಗ, ಜೊತೆ ಕಾರ್ಯದರ್ಶಿ ಕರುಣಾಕರ್ ಕೆ ಕಾಪು, ಜೊತೆ ಕೋಶಾಧಿಕಾರಿ ಉಷಾ ಮೆಂಡನ್ ಮತ್ತು ಸಮಿತಿಯ ಪದಾಧಿಕಾರಿಗಳು , ಭಕ್ತಾದಿಗಳು ಸಕುಟುಂಬ ಸಮೇತ ಆಗಮಿಸಿ ಸಿರಿಮುಡಿ – ಗಂಧ ಪ್ರಸಾದ ಸ್ವೀಕರಿಸಿ ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರಕಳರ ಕೃಪೆಗೆ ಪಾತ್ರರಾಗಿ,ತನು ಮನ ಧನಗಳಿಂದ ಸಹಕಾರ ನೀಡಬೇಕೆಂದು ವಿನಂತಿಸಿದ್ದಾರೆ.



Related posts

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.

Mumbai News Desk

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಅ.9,ಭಾಯಂದರ್ ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ.

Mumbai News Desk

ಸೆ 1 ರಂದು ಶ್ರೀಕೃಷ್ಣ ವಿಠಲ ಪ್ರತಿಷ್ಠಾನ, ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಸಾಂಸ್ಕೃತಿಕ ವೈಭವ .

Mumbai News Desk

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk

ಬೋರಿವಲಿ ಮಹಿಷ ಮರ್ದಿನಿ ಮಂದಿರ : ಆ. 17  ರಾಜಾ ಅಂಬರೀಷ ತುಳು ಹರಿಕಥೆ:

Mumbai News Desk