32 C
Mumbai
March 7, 2026
Mumbai News Kannada
ಪ್ರಕಟಣೆ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಇಂದಿನಿಂದ ಜಾತ್ರೆ, ಕುಂಭ ಮಹೋತ್ಸವ,.





ಮಹಾನಗರ, ಫೆ. 11: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ, ಕುಂಭ ಮಹೋತ್ಸವ ಫೆ. 11ರಿಂದ 14ರ ವರೆಗೆ ನಡೆಯಲಿದೆ.

ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶೀರ್ವಾ ದದೊಂದಿಗೆ ಶ್ರೀ ಕ್ಷೇತ್ರದ ತಂತ್ರಿ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಜನಾರ್ದನ ಭಟ್ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಫೆ. 11ರಂದು ಸುಮತಿ ಮತ್ತು ಶ್ರೀನಿವಾಸ್‌ ಅವರಿಂದ ದೀಪ ಪ್ರಜ್ವಲನೆ, 3ಕ್ಕೆ ಭಜನೆ, 5.45ಕ್ಕೆ ಜಾನಪದ ನೃತ್ಯ. 6.30ರಿಂದ ದೇವತಾ ಪ್ರಾರ್ಥನೆ, ಮಧು ಮತ್ತು ಗುರುಪ್ರಸಾದ್ ಅವರಿಂದ ದೀಪ ಪ್ರಜ್ವಲನೆ, ಪುಣ್ಯಾಹ, ರಾಕ್ಷೆಘ್ನ ವಾಸ್ತು ಹೋಮ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಫೆ. 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾರಥೋತ್ಸವ, ಪಲ್ಲಪೂಜೆ, ಬಟ್ಟಲು ಪೂಜೆ, ಅನ್ನಸಂತರ್ಪಣೆ,3ರಿಂದ ಭಜನೆ, 4.30ರಿಂದ ಭರತನಾಟ್ಯ, 5.45ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳಿ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ ಉಪಸ್ಥಿತಿಯಲ್ಲಿ ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದ ಆಡಳಿತ ಮೊತ್ತೇಸರ ಸುಂದರ ಕುಲಾಲ್ ಅಧ್ಯಕ್ಷತೆ 

ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬೈಯ ಉದ್ಯಮಿ ಸುನಿಲ್ ಸಾಲಿಯನ್ ಯುಎಇ ಉದ್ಯಮಿ ಪದ್ಮರಾಜ್ ಎಕ್ಕಾರ್, ದಿವಾಕರ್ ಮೂಲ್ಯ ಬೆಂಗಳೂರು , ಸಂದೇಶ್ ಶೆಟ್ಟಿ, ಮಂಗಳೂರು, ಗೋವರ್ಧನ್ ಶೆಟ್ಟಿ, ಪುಂಡರಿಕ್ಷಾ ಮೂಲ್ಯ, ಕೃಷ್ಣಪ್ಪ ಪುತ್ತೂರು, ರವೀಂದ್ರ ಸಾಲಿಯಾನ್, ಉಮೇಶ್ ಬಂಗೇರ ಬೆಂಗಳೂರು, ಕೊರಗಪ್ಪ ಪಂಚಂ ಬರೋಡ, ಡಾ ಸುರೇಖಾ ರತನ್ ಕುಲಾಲ್ ಮುಂಬೈ, ಭರತ್ ರಾಜ್ ರೈ ಮಂಗಳೂರು ಇವರು ಪಾಲ್ಗೊಳ್ಳಲಿದ್ದಾರೆ,

ಫೆ. 13ರಂದು ಬೆಳಗ್ಗೆ 8 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ, 3 ರಿಂದ ಭಜನೆ, 6ರಿಂದ ಕಟೀಲು ಕ್ಷೇತ್ರ ಮಹಾತ್ಮ ಯಕ್ಷನಾನ, ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನ ನಡೆಯಲಿದೆ.

ರಾತ್ರಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಫೆ. 14ರಂದು ಬೆಳಗ್ಗೆ 5ರಿಂದ ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಮಹಾಪ್ರಸಾದ ನೆರವೇರಲಿದೆ.

ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ,ಶ್ರೀ ವೀರನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,ಮಯೂರ್ ಉಳ್ಳಾಲ್, (ಅಧ್ಯಕ್ಷರು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ)ಮಂಗಳೂರು ಹಾಗೂ ಸರ್ವ ಸದಸ್ಯರು,) ಕೆ. ಸುಂದರ್ ಕುಲಾಲ್ (ಆಡಳಿತ ಮೊಕ್ತಸರರು, ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ, ಮಂಗಳೂರು) ಬಿ. ಪ್ರೇಮಾನಂದ ಕುಲಾಲ್ ಕೋಡಿಕಲ್ (ಅಧ್ಯಕ್ಷರು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ),ಹಾಗೂ ಸರ್ವ ಸದಸ್ಯರು), ದಾಮೋದರ ಎ. ಅಧ್ಯಕ್ಷರು ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಸರ್ವ ಸದಸ್ಯರು, ಮಮತಾ ದೇವದಾಸ್ (ಕಾರ್ಯಾಧ್ಯಕ್ಷೆ, ಶ್ರೀ ವೀರನಾರಾಯಣ ಮಾತೃ ಮಂಡಳಿ ಹಾಗೂ ಸರ್ವ ಸದಸ್ಯರು) ಕಿರಣ್ ಅಟ್ಟೂರು(ಅಧ್ಯಕ್ಷರು, ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿಹಾಗೂ ಸರ್ವ ಸದಸ್ಯರು) ಮೊತ್ತೇಸರರುಗಳಾದ ಗಿರಿಧರ್ ಜೆ. ಮೂಲ್ಯ (ಕಾರ್ಯದರ್ಶಿ), ದಯಾನಂದ ಪಿ.ಎಸ್. ಕುತ್ತಾರು (ಕೋಶಾಧಿಕಾರಿ), ಮೋಹನ್ದಾಸ್ ಅಳಪೆ, ರಾಜೇಶ್ ಕುಲಾಲ್ ಶಕ್ತಿನಗರ, ಸದಾನಂದ ಬಂಗೇರ ಕೆ. ಮುಡಿಪು, ಆನಂದ ಪಿ. ಉರ್ವ, ವಾಸುದೇವ ಮೂಲ್ಯ ಉಳಾಯಿಬೆಟ್ಟು ಮತ್ತು ರಮೇಶ್ ಎಂ. ಬಾಳ ವಿನಂತಿಸಿಕೊಂಡಿದ್ದಾರೆ 



Related posts

ಮಾ.17 ರಂದು ಕ್ಯಾ. ಬ್ರಿಜೇಶ್ ಚೌಟ ಮುಂಬೈ ಬೇಟಿ, ನ್ಯೂ ಪನ್ವೆಲ್ ನಲ್ಲಿ ಅಭಿಮಾನಿಗಳ ಸಭೆ,

Mumbai News Desk

ಪೇಜಾವರ  ಮಠದ   ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು  ಫೆ 1 ರಿಂದ   ಫೆ 6  ರವರೆಗೆ ಶ್ರೀ ಪೇಜಾವರ ಮಠ ಸಾಂತಾಕ್ರೂಜ್ ಮುಂಬಯಿ ಇಲ್ಲಿ ಮುಕ್ಕಂ,

Mumbai News Desk

ನ 25 ಕ್ಕೆ ಕರ್ನಾಟಕ ಮಿತ್ರ ಮಂಡಳಿ (ರಿ) ಕಲ್ಯಾಣ್ ನ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ.

Mumbai News Desk

ಜ. 14 ರಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಜೂ. 29, ಬಂಟರ ಸಂಘ ಮುಂಬಯಿ: ಡೊಂಬಿವಲಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಅಶ್ರಯದಲ್ಲಿ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

Mumbai News Desk

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk