September 6, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಫೆಬ್ರವರಿ 14 ರಂದು 19ನೇ ವರ್ಷದ ಶ್ರೀ ಶನೀಶ್ವರ ಮಹಾಪೂಜೆ





ಥಾಣೆ ಪಶ್ಚಿಮ ಕಿಸಾನ್ ನಗರದ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 14, ಶನಿವಾರದಂದು 19ನೇ ವರ್ಷದ ಸಾರ್ವಜನಿಕ ಶ್ರೀ ಶನಿಶ್ವರ ದೇವರ ಮಹಾಪೂಜೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಯೋಜಿಸಲಾಗಿದೆ. ನಗರದ ಓಧವ್ ಬಾಗ್ ಮೈದಾನದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಿತಿಯು ಸಮಸ್ತ ಭಕ್ತಾದಿಗಳನ್ನು ಆತ್ಮೀಯವಾಗಿ ಆಹ್ವಾನಿಸಿದೆ.

ಕಾರ್ಯಕ್ರಮಗಳು :

ಅಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ
ಬೆಳಿಗ್ಗೆ 10:30ಕ್ಕೆ ಅಯ್ಯಪ್ಪ ಶಿಬಿರದಿಂದ ಪೂಜಾ ಮೈದಾನದವರೆಗೆ ಭವ್ಯ ಮೆರವಣಿಗೆ
ಮಧ್ಯಾಹ್ನ 12 ಗಂಟೆಗೆ ಕಲಶ ಪ್ರತಿಷ್ಠಾಪನೆ
ಮಧ್ಯಾಹ್ನ 1:30ಕ್ಕೆ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಪೋರ್ಟ್ ಇವರ ಮಾರ್ಗದರ್ಶನದಲ್ಲಿ ಮುಂಬೈನ ಪ್ರಸಿದ್ಧ ಕಲಾವಿದರಿಂದ ಶನಿ ಮಹಾತ್ಮೆ ಯಕ್ಷಗಾನ ತಾಳಮದ್ದಳೆ
ಸಂಜೆ 7:30ಕ್ಕೆ ಭಜನೆ
ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ
ರಾತ್ರಿ 8.30ರಿಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಪೂಜಾ ವಿಧಿಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಕ್ತರು ಸಮಿತಿಯ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಸಮಿತಿಯ ವಾರ್ಷಿಕ ಶ್ರೀ ಶನೀಶ್ವರ ಮಹಾಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಶನಿಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪದಾಧಿಕಾರಿಗಳು, ಪೂಜಾ ಉಪ ಸಮಿತಿಯ, ಯುವ ವಿಭಾಗದ, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ, ಫೆ. 1ರಂದು 18ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ

Mumbai News Desk

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಮಾ.9ರಂದು ಶ್ರೀ ಕ್ಷೇತ್ರ ಉಮಾಮಹೇಶ್ವರಿ ದೇವಸ್ಥಾನ ಜೆರಿಮರಿ ವರ್ಷಾವಧಿ ಉತ್ಸವ.

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಗೊರೆಗಾಂವ್‌ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಜು21: ಗುರುಪೂರ್ಣಿಮಾ  ಆಚರಣೆ,

Mumbai News Desk