September 24, 2026
Mumbai News Kannada
ಪ್ರಕಟಣೆ

ಮುಂಬೈನಲ್ಲಿ ಸೆಪ್ಟೆಂಬರ್ 27ರಂದು ಪದ್ಮಶಾಲಿ ಸಮಾಜ ಸೇವಾ ಸಂಘದ ತ್ರಿವಿಧ ಮಹಾಸಭೆ ಹಾಗೂ ವಾರ್ಷಿಕ ದಿನಾಚರಣೆ (ಕಲಾ ತಪಸ್ವಿ ಪ್ರಶಸ್ತಿ ಪ್ರಧಾನ, ಸಾಂಸ್ಕೃತಿಕ ಕಾರ್ಯಕ್ರಮ)



ಮುಂಬೈಯ ಹಿರಿಯ ಸಂಘಟನೆಗಳಲ್ಲಿ ಒಂದಾದ ಪದ್ಮಶಾಲಿ ಸಮಾಜ ಸೇವಾ ಸಂಘದ 90ನೇ ವಾರ್ಷಿಕ ಮಹಾಸಭೆ, ದಿ ಪದ್ಮಶಾಲಿ ಎಜುಕೇಶನ್ ಸೊಸೈಟಿಯ 51ನೇ ವಾರ್ಷಿಕ ಮಹಾಸಭೆ ಹಾಗೂ ಮಹಿಳಾ ಬಳಗದ 38ನೇ ವಾರ್ಷಿಕ ಮಹಾಸಭೆಯು ಸೆಪ್ಟಂಬರ್ 27ರಂದು, ಬೆಳ್ಳಿಗೆ 8.30ಕ್ಕೆ ಮುಲುಂಡ್ ಪಶ್ಚಿಮದಲ್ಲಿರುವ ಪಂಡಿತ್ ಜವಾಹರಲಾಲ್ ನೆಹರೂ ರಸ್ತೆಯ (ಅಪ್ನಾ ಬಜಾರ್ ಮೇಲ್ಭಾಗ) ಮಹಾರಾಷ್ಟ್ರ ಸೇವಾ ಸಂಘ ಸಭಾಂಗಣದಲ್ಲಿ ಜರಗಲಿದೆ.

ದಿನಚರಿ ಮತ್ತು ಸಭಾ ಕಾರ್ಯಕ್ರಮಗಳು:
ಬೆಳಿಗ್ಗೆ 8:30ಕ್ಕೆ ಲಘು ಉಪಹಾರ ನೀಡಿದ ಬಳಿಕ 9:00 ಗಂಟೆಗೆ ಭಜನೆ ಹಾಗೂ ಮಹಿಳೆಯರಿಗೆ ಅರಿಶಿನ-ಕುಂಕುಮ ಕಾರ್ಯಕ್ರಮ ನಡೆಯಲಿದೆ. 9:55ರಿಂದ ಮಹಾಸಭೆಗೆ ಸ್ವಾಗತ, ಶಾಸ್ತ್ರೀಯ ನೃತ್ಯ, ಗಣ್ಯರಿಗೆ ಅಭಿನಂದನೆ, ಗುರುಸ್ತೋತ್ರ ಪ್ರಾರ್ಥನೆ, ದೀಪ ಪ್ರಜ್ವಲನೆ ಮತ್ತು ಸಂದೇಶ ವಾಚನ ಜರುಗಲಿದೆ.

ಬೆಳಿಗ್ಗೆ 11:00 ಗಂಟೆಗೆ ಸಂಸ್ಥೆಗಳ ವಾರ್ಷಿಕ ವರದಿಗಳು ಹಾಗೂ 2025-26ರ ಲೆಕ್ಕಪತ್ರಗಳ ಅಂಗೀಕಾರ ಪ್ರಕ್ರಿಯೆ ನೆರವೇರಲಿದೆ.
ತದನಂತರ 11:10ಕ್ಕೆ ವರದಿ/ಭಾಷಣ:
ಭಜನಾ ಸಮಿತಿಯ ಕರುಣಾಕರ್ ಕನ್ನರ್ಪಾಡಿ, ಯುವ ವೇದಿಕೆಯ ಅಧ್ಯಕ್ಷೆ ದಿವ್ಯಾ ಜಿ. ಶೆಟ್ಟಿಗಾರ್, ಕಲಾಭವನ ಸಮಿತಿಯ ಸಭಾಪತಿ ಉತ್ತಮ್ ಎ. ಶೆಟ್ಟಿಗಾರ್, ಮಹಿಳಾ ಬಳಗದ ಪ್ರಮುಖಿ ಪ್ರಮೀಳಾ ಎಮ್. ಶೆಟ್ಟಿಗಾರ್, ಸೊಸೈಟಿಯ ಸಭಾಪತಿ ಶಿವಾನಂದ ಆರ್. ಶೆಟ್ಟಿಗಾರ್ ಹಾಗೂ ಸಂಘದ ಅಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್ ಅವರ ಉಪಸ್ಥಿತಿ.
12:15ಕ್ಕೆ ಧನ್ಯವಾದ ಸಮರ್ಪಣೆ, 12:20ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಮಧ್ಯಾಹ್ನ 1:00 ಗಂಟೆಗೆ ಪ್ರೀತಿ ಭೋಜನ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 2:00 ಗಂಟೆಗೆ ವಾರ್ಷಿಕ ದಿನಾಚರಣೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಯುವ ಪ್ರತಿಭೆಗಳು-ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. 3:40ಕ್ಕೆ ಸಮಿತಿಯ ಸದಸ್ಯರಿಗೆ ವಿಶೇಷ ಮನ್ನಣೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
‘ಪದ್ಮ ಕಲಾ ತಪಸ್ವಿ ಪುರಸ್ಕಾರ 2026’: ಮಧ್ಯಾಹ್ನ 3:10ಕ್ಕೆ ನಡೆಯುವ ವಿಶೇಷ ಸಮಾರಂಭದಲ್ಲಿ ಸಾಧಕರಿಗೆ ‘ಪದ್ಮ ಕಲಾ ತಪಸ್ವಿ ಪುರಸ್ಕಾರ 2026’ ನೀಡಲಾಗುವುದು. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಮಿಥ್ಯಾ’ ಕನ್ನಡ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ (ಶೆಟ್ಟಿಗಾರ್) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದ, ಚಂಡೆ ವಾದಕ ಮತ್ತು ತುಳು ಹಾಸ್ಯನಟ ಬಿ. ದಿನೇಶ್ ಶೆಟ್ಟಿಗಾರ್ ಕೊಡಪದವು ಅವರು ಈ ಬಾರಿಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಸಾಂಸ್ಕೃತಿಕ ವೈಭವ ಮತ್ತು ಯಕ್ಷಗಾನ: ಮಧ್ಯಾಹ್ನ 4:00 ಗಂಟೆಗೆ ಯಕ್ಷಗಾನ ಬಯಲಾಟ, 5:00 ಗಂಟೆಗೆ ಲಘು ಉಪಹಾರ ಹಾಗೂ 5:30ರಿಂದ ಅಶೋಕ್ ಕೊಡ್ಯಡ್ಕ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7:55ಕ್ಕೆ ಶಾಂತಿ ಪಾಠ ಹಾಗೂ ರಾಷ್ಟ್ರಗೀತೆಯೊಂದಿಗೆ ದಿನದ ಕಾರ್ಯಕ್ರಮಗಳು ಮುಕ್ತಾಯಗೊಂಡು, ರಾತ್ರಿ 8:00 ಗಂಟೆಗೆ ಪ್ರೀತಿ ಭೋಜನ ನೀಡಲಾಗುವುದು.
ಸಂಘದ ಅಧ್ಯಕ್ಷರಾದ ಕೃಷ್ಣಾನಂದ ಎಮ್. ಶೆಟ್ಟಿಗಾರ್ ಸೊಸೈಟಿಯ ಸಭಾಪತಿಗಳಾದ ಶಿವಾನಂದ ಆರ್. ಶೆಟ್ಟಿಗಾರ್ ,ಪದಾಧಿಕಾರಿಗಳಾದ ಕೇಶವ್ ವಿ. ಶೆಟ್ಟಿಗಾರ್ (ಪ್ರಧಾನ ಕಾರ್ಯದರ್ಶಿ, ಸಂಘ), ರಮೇಶ್ ಪಿ. ಶೆಟ್ಟಿಗಾರ್ (ಪ್ರಧಾನ ಕಾರ್ಯದರ್ಶಿ, ಸೊಸೈಟಿ), ತಾರಾ ಯು. ಶೆಟ್ಟಿಗಾರ್ (ಕಾರ್ಯದರ್ಶಿ, ಮಹಿಳಾ ಬಳಗ) ಹಾಗೂ ಅಭಿಲಾಷ್ ಎಲ್. ಶೆಟ್ಟಿಗಾರ್ (ಕಾರ್ಯದರ್ಶಿ, ಯುವ ಸಮಿತಿ) ಅವರು ಸಮಾಜ ಬಾಂಧವರು ಹಾಗೂ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದ್ದಾರೆ.



Related posts

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : ಸೆ. 28ರಂದು 80ನೇ ವಾರ್ಷಿಕ ಮಹಾಸಭೆ

Mumbai News Desk

ನ 25 ಕ್ಕೆ ಕರ್ನಾಟಕ ಮಿತ್ರ ಮಂಡಳಿ (ರಿ) ಕಲ್ಯಾಣ್ ನ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ.

Mumbai News Desk

ಆಗಸ್ಟ್ 30 ಗ್ ಬೊಂಬಾಯಿಡ್ ‘ತುಲುವೆರೆ ಕಲತೋಚ್ಚಯ’ – ತುಲು ಐಸಿರಿದ ಸಂಭ್ರಮ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk

ನಾಳೆ (ಆ. 25)ಚಿತ್ರಾಪು ಕೆ.ಎಮ್.ಕೋಟ್ಯಾನ್ ಅಭಿನಂದನಾ ಸಮಾರಂಭ.

Mumbai News Desk

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk