ಡೊಂಬಿವಲಿ: ಇಲ್ಲಿನ ಅಜ್ದೇಗಾಂವ್ ತಿಲಕ್ ಕಾಲೇಜು ಸಮೀಪವಿರುವ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿ ಮಹಾಪೂಜಾ ಮಹೋತ್ಸವವು ಫೆಬ್ರವರಿ 14, ಶನಿವಾರದಂದು ಅದ್ದೂರಿಯಾಗಿ ಜರಗಲಿದೆ.
ವಿಶ್ವಾವಸು ನಾಮ ಸಂವತ್ಸರದ ಮಾಘ ಮಾಸದ ಈ ಶುಭ ದಿನದಂದು, ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ ಭಟ್ ಕಾನಂಗಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:
ಅಂದು ಮುಂಜಾನೆ 6.00 ಗಂಟೆಗೆ ತೋರಣ ಮುಹೂರ್ತ ಹಾಗೂ ಗಣಹೋಮದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಬೆಳಿಗ್ಗೆ 10.30ಕ್ಕೆ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ 1.30ರಿಂದ ಶ್ರೀ ಶನಿದೇವರ ಕಲಶ ಪ್ರತಿಷ್ಠೆ ಹಾಗೂ ಗ್ರಂಥ ಪಾರಾಯಣ ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ‘ಯಕ್ಷಗಾನ ತಾಳಮದ್ದಳೆ’ ರೂಪದಲ್ಲಿ ಪಾರಾಯಣ ಸೇವೆಯು ಭಕ್ತಾದಿಗಳನ್ನು ರಂಜಿಸಲಿದೆ.
ರಾತ್ರಿ 8.30ಕ್ಕೆ ಮಹಾಮಂಗಳಾರತಿ ನೆರವೇರಿ, 9.00 ಗಂಟೆಗೆ ತೀರ್ಥಪ್ರಸಾದ ವಿತರಣೆ ಹಾಗೂ ಮಹಾಪ್ರಸಾದ (ಅನ್ನಸಂತರ್ಪಣೆ) ವಿತರಣೆಯಾಗಲಿದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ.

ಗೌರವಾಧ್ಯಕ್ಷ ರವಿ ಎಂ. ಸುವರ್ಣ, ಅಧ್ಯಕ್ಷ ಸೂರಜ್ ಡಿ. ಸಪಲಿಗ, ಉಪಾಧ್ಯಕ್ಷ ಸಂಜೀವ ಪಿ. ಪಾಲನ್, ಕಾರ್ಯದರ್ಶಿ ಸಂತೋಷ್ ಜಿ. ಪೂಜಾರಿ, ಕೋಶಾಧಿಕಾರಿ ಜೈಕಿಶ್ ಆರ್. ಸನಿಲ್, ಜೊತೆ ಕಾರ್ಯದರ್ಶಿ ಪ್ರದೀಪ್ ಎಸ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ರಕ್ಷಣ್ ಸಾಲ್ಯಾನ್, ಪ್ರದಾನ ಅರ್ಚಕ ಪ್ರಕಾಶ್ ಭಟ್ ಕಾನಂಗಿ, ಸಹ ಅರ್ಚಕ ಪ್ರವೀಣ್ ಪೂಜಾರಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಪಾರ್ವತಿ ಸಾಲ್ಯಾನ್ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಸದಸ್ಯರು ಸಮಸ್ತ ಭಕ್ತಾದಿಗಳನ್ನು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.




