29 C
Mumbai
March 7, 2026
Mumbai News Kannada
ಮುಂಬಯಿ

ರೈ ಸಮಿತಿ ಎಜುಕೇಶನಲ್ ಟ್ರಸ್ಟ್‌ನ ಮಲಾಡ್‌ನ ಸ್ಕಾಲರ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ





ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಮತ್ತು ಆತ್ಮವಿಶ್ವಾಸವೂ ಅಗತ್ಯ: ರವಿ ಎಸ್. ಶೆಟ್ಟಿ

ಮುಂಬಯಿ: ಮೀರಾ ಭಯಂದರ್‌ನ ಸಮಾಜ ಸೇವಕ, ಬಿಳಿಯೂರು ಗುತ್ತು ಡಾ. ಅರುಣೋದಯ ರೈ ಸ್ಥಾಪಿಸಿರುವ ರೈ ಸಮಿತಿ ಎಜುಕೇಶನಲ್ ಟ್ರಸ್ಟ್ ನಡೆಸುತ್ತಿರುವ ಮಲಾಡ್‌ ಪಶ್ಚಿಮದ ಸ್ಕಾಲರ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಫೆ. 23ರಂದು ಅದ್ದೂರಿಯಾಗಿ ನೆರವೇರಿತು.

​ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಾಯಿ ಗ್ರೂಪ್ ಆಫ್ ಹೋಟೆಲ್ಸ್‌ನ ನಿರ್ದೇಶಕರಾದ ರವಿ ಎಸ್. ಶೆಟ್ಟಿ ಅವರು ಆಗಮಿಸಿದ್ದರು. ವಿಶೇಷ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಉಪಸ್ಥಿತರಿದ್ದರು.

​ಮುಖ್ಯ ಅತಿಥಿಗಳಾದ ರವಿ ಎಸ್. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. “ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಮತ್ತು ಆತ್ಮವಿಶ್ವಾಸವೂ ಅಗತ್ಯ” ಎಂದು ತಿಳಿಸಿ, ಶಾಲೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ವಿಶೇಷ ಅತಿಥಿಗಳಾದ ಪ್ರವೀಣ್ ಬಿ. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ ಆಶೀರ್ವಚನ ನೀಡಿದರು.

​ರೈ ಸಮಿತಿ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಬಿಳಿಯೂರು ಗುತ್ತು ಡಾ. ಅರುಣೋದಯ ರೈ ಅವರು ಜೀವನದಲ್ಲಿ ಶಿಸ್ತು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿ, ಶಿಸ್ತುಬದ್ಧ ಜೀವನವನ್ನು ಅನುಸರಿಸಿದರೆ ಯಶಸ್ಸು ಸಾಧಿಸಲು ಸಾಧ್ಯವೆಂದು ಮನವರಿಕೆ ಮಾಡಿದರು.

​ಈ ಸಂದರ್ಭದಲ್ಲಿ ವೇಣುಗೋಪಾಲ್ ರೈ ದೊಂಬಿವಳಿ, ಲಕ್ಷ್ಮಿ ಯಾದವ್, ಟ್ರಸ್ಟಿಗಳಾದ ಸ್ವರ್ಣಲತಾ ಎ. ರೈ, ಜೈಕಿರಣ್ ರೈ ಹಾಗೂ ಡಾ. ಸ್ವರೂಪಾ ರೈ ಶೆಟ್ಟಿ ಉಪಸ್ಥಿತರಿದ್ದರು.

​ವಿದ್ಯಾರ್ಥಿಗಳು ನೃತ್ಯ, ಗಾಯನ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.



Related posts

ಮುಂಬೈ: ಐದು ವರ್ಷದ ಮಗುವನ್ನು ಅಪಹರಿಸಿ, 6 ಲಕ್ಷ ರೂ.ಗೆ ಮಾರಾಟ : ವೈದ್ಯರ ಮನೆಯಿಂದ ಮಗುವಿನ ರಕ್ಷಣೆ

Mumbai News Desk

ಭಾಜಪಾ ಥಾಣೆ ಜಿಲ್ಲಾ ವತಿಯಿಂದಒಂದು ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಲಲಿತ ಕಲಾ ವಿಭಾಗ ಮತ್ತು ಮಹಿಳಾ ವಿಭಾಗದ ವತಿಯಿಂದ ನಾಡ ಹಬ್ಬ ಅಚರಣೆ

Mumbai News Desk

ಬಂಟರ ಸಂಘ ಮುಂಬೈ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ  ನವರಾತ್ರಿ ಉತ್ಸವ, ಮಾತಾ ಕೀ ಚೌಕಿ .  ದಾಂಡಿಯಾ ರಾಸ್.

Mumbai News Desk

ಸಾಂತಾಕ್ರೂಜ್  ಪೇಜಾವರ ಮಠದಲ್ಲಿ ಆಷಾಢ ಏಕಾದಶಿ ಆಚರಣೆ

Mumbai News Desk

ಉಡುಪಿಯ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಸಮಯ ಪ್ರಜ್ಞೆ ಮೆರೆದ ಚಾಲಕ.

Mumbai News Desk