34 C
Mumbai
March 6, 2026
Mumbai News Kannada
ಪ್ರಕಟಣೆ

ಮಾ. 08 ರಂದು ಥಾಣೆಯಲ್ಲಿ ಸಾಫಲ್ಯ ಸೇವಾ ಸಂಘದ ಮುಖವಾಣಿ’ಸಾಫಲ್ಯ’ ತ್ರೈಮಾಸಿಕದ ಬೆಳ್ಳಿ ಹಬ್ಬ ಹಾಗೂ ಮಹಿಳಾ ದಿನಾಚರಣೆ





ಮುಂಬೈ: ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಫಲ್ಯ ಸೇವಾ ಸಂಘ (ರಿ.) ಮುಂಬಯಿ ಇದರ ಮುಖವಾಣಿ ‘ಸಾಫಲ್ಯ’ ತ್ರೈಮಾಸಿಕದ ಬೆಳ್ಳಿ ಹಬ್ಬ ಸಂಭ್ರಮದ ಅಂಗವಾಗಿ “ಸಫಲ್ಯ ರಜತ ಲಹರಿ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭವು ಮಾರ್ಚ್ 8, ರಂದು ಸಂಜೆ 3.00 ಗಂಟೆಯಿಂದ ಠಾಣೆ ಪಶ್ಚಿಮದ ಶುಭಂ ಕರೋತಿ ಸಭಾಗೃಹದಲ್ಲಿ ನಡೆಯಲಿದೆ.

ಕಳೆದ 29 ವರ್ಷಗಳಿಂದ ‘ಸಾಫಲ್ಯ’ ಮ್ಯಾಗಜಿನ್ ಸಮಾಜಮುಖಿ ಲೇಖನಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಮುದಾಯದ ಬೆಳವಣಿಗೆಯನ್ನು ಉತ್ತೇಜಿಸುವ ಹಲವು ಮಾಹಿತಿಗಳನ್ನು ಪ್ರಕಟಿಸುತ್ತಾ ಸಮಾಜದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದೆ. ಈ ಸಾಧನೆಯ ಸಂಭ್ರಮವನ್ನು ಆಚರಿಸಲು ಸಂಘವು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಸಂದರ್ಭದಲ್ಲಿ ಸಂಘದ ಸಾಧನೆಗಳನ್ನು ಸ್ಮರಿಸಲಾಗುತ್ತದೆ. ‘ಸಾಫಲ್ಯ’ ಪತ್ರಿಕೆಯ ಮಾಜಿ ಸಂಪಾದಕರು ಹಾಗೂ ನಗರದ ಇತರ ಕನ್ನಡ ಸಂಘ ಸಂಸ್ಥೆಗಳ ಮುಖವಾಣಿಯ ಸಂಪಾದಕರಿಗೆ ಗೌರವಾರ್ಪಣೆ ನಡೆಯಲಿರುವುದು .

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉದಯವಾಣಿ ಮುಂಬಯಿ ಆವೃತ್ತಿಯ Deputy Chief Sub Editor,
ಡಾ. ದಿನೇಶ್ ಶೆಟ್ಟಿ ರೆಂಜಾಳ, ಆಗಮಿಸಲಿದ್ದಾರೆ.
ಅತಿಥಿಗಳಾಗಿ ‘ಮೊಗವೀರ’ ಕನ್ನಡ ಮಾಸಪತ್ರಿಕೆಯ ಸಂಪಾದಕರಾಗಿರುವ ಅಶೋಕ್ ಸುವರ್ಣ ಹಾಗೂ ‘ಸಂಗಮ’ ಕನ್ನಡ ತ್ರೈಮಾಸಿಕದ ಸಂಪಾದಕಿ ಲಲಿತಾ ಪ್ರಭು ಅಂಗಡಿ ಅವರು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನೂ ಆಚರಿಸಲಾಗುತ್ತಿದ್ದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಂಘವು ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಂಡಿದೆ.

ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ನಡೆಸಲಾದ ಕ್ರೀಡಾ ದಿನದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಿರಿಜಾ ಫೌಂಡೇಶನ್ ಅಧ್ಯಕ್ಷರು, ಸುನಂದ ಗಣೇಶ್ ಸಪಲಿಗ, ಸಾಫಲ್ಯ ಸೇವಾ ಸಂಘದ ಮಾಜಿ ಗೌ. ಪ್ರ. ಕಾರ್ಯದರ್ಶಿ ಶ್ರೀಮತಿ ಅನುಸೂಯಾ ಸುಂದರ ಕೆಲ್ಲಪುತ್ತಿಗೆ , ಹೋಟೆಲ್ ಉದ್ಯಮಿಗಳಾದ ಶಿವರಾಮ್ ಸಾಲಿಯನ್, ರವೀಂದ್ರ ಸಪಲಿಗ ಹಾಗೂ ಮನೋಜ್ ಬಂಗೇರ ಸೂರಜ್ ಡಿ. ಸಪಲಿಗ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಂದು ವಿಶೇಷ ಸೆಮಿನಾರ್ ಅಂಗ್ ತರಂಗ್ ( ಡಾನ್ಸ್ ಮೂವ್ಮೆಂಟ್ ಥೆರಪಿ ) ಆಯೋಜಿಸಲಾಗಿದೆ.
ಹಳದಿ ಕುಂಕುಮ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು,ರಸಮಂಜರಿ , ನೃತ್ಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿವೆ.

ಕಾರ್ಯಕ್ರಮದ ಕೊನೆಯಲ್ಲಿ ಹೈ-ಟಿ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸಾಫಲ್ಯ ಸೇವಾ ಸಂಘದ ಎಲ್ಲಾ ಸದಸ್ಯರು, ಅಭಿಮಾನಿಗಳು ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪ್ರಕಟಣೆಯಲ್ಲಿ ಕೋರಲಾಗಿದೆ.



Related posts

ಬೈಂದೂರು – ಕುಂದಾಪುರ ಬಿಲ್ಲವರು ಮುಂಬಯಿ. ಜನವರಿ 19 ರಂದು ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

ನ.29 ರಂದು ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯಲ್ಲಿ ‘ಶನಿ ಮಹಾಪೂಜೆ’

Mumbai News Desk

ಜೂನ್ 8ರಂದು “ಕನ್ನಡ ವೆಲ್ಫೇರ್ ಸಂಘ” ಜೆರಿಮರಿ, ಕುರ್ಲಾ ಪಶ್ಚಿಮ – ನೂತನ ಸಂಘದ ಉದ್ಘಾಟನೆ.

Mumbai News Desk

ಚಿತ್ರಾಪು ಬಿಲ್ಲವರ ಸಂಘ (ರಿ), ಮುಂಬಯಿ,ಡಿ.29 ರಂದು ವಾರ್ಷಿಕ ಮಹಾಸಭೆ,

Mumbai News Desk

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) : ಸೆ. 5 ರಂದು 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ

Mumbai News Desk