28.3 C
Mumbai
March 10, 2026
Mumbai News Kannada
ಸುದ್ದಿ

ಸಂತಾಪ: ಹಿರಿಯ ಸಮಾಜ ಸೇವಕ ಭಾಂಡುಪ್ ಸುಂದರ್ ಆರ್. ಸಾಲಿಯಾನ್ ನಿಧನ





ಮುಂಬೈ, ಭಾಂಡುಪ್: ಮೂಲತಃ ಉಡುಪಿ ಜಿಲ್ಲೆಯ ಎರ್ಮಾಳಿನವರಾಗಿದ್ದು, ದಶಕಗಳಿಂದ ಮುಂಬೈನ ಭಾಂಡುಪ್‌ನಲ್ಲಿ ನೆಲೆಸಿದ್ದ ಹಿರಿಯರಾದ ಸುಂದರ್ ಆರ್. ಸಾಲಿಯಾನ್ (80) ಅವರು ಇಂದು ಮುಂಜಾನೆ ನಿಧನರಾದರು.

​ಮೃತರು ವೃತ್ತಿಯಲ್ಲಿ ‘ನಿತ್ಯಾನಂದ ಟೈಲರ್ಸ್’ ಸಂಸ್ಥೆಯ ಮಾಲೀಕರಾಗಿ ಪರಿಚಿತರಾಗಿದ್ದರು. ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್ ನಿವಾಸಿಯಾಗಿದ್ದ ಇವರು, ಮೃದು ಸ್ವಭಾವ ಹಾಗೂ ಸಮಾಜಮುಖಿ ಚಿಂತನೆಗಳಿಂದ ಸ್ಥಳೀಯವಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದರು.

​ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರ:

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2:00 ಗಂಟೆಗೆ ಭಾಂಡುಪ್ ಪಶ್ಚಿಮದ ಟ್ಯಾಂಕ್ ರೋಡ್‌ನಲ್ಲಿರುವ ಅವರ ಸ್ವಗೃಹ ‘ವಕ್ರತುಂಡ ಪ್ಯಾಲೇಸ್’ (ಬಿ ವಿಂಗ್, ಫ್ಲಾಟ್ ನಂ. 303) ನಿಂದ ಹೊರಟು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



Related posts

ಯುಎಇ ಬಂಟ್ಸ್‌ನಿಂದ ಹನ್ನೊಂದನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Mumbai News Desk

ಮುಂಬೈ: ಮನೆಗೆ ಬೆಂಕಿ ತಗುಲಿ ಕುಟುಂಬದ ಐವರು ಸಾವು

Mumbai News Desk

ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್, ಯಕ್ಷ ಸಂಭ್ರಮ 2023

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.

Mumbai News Desk

ಬಂಟರ ಯಾನೆ ನಾಡವರ ಮಾತೃಸಂಘದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ  ಕೆ. ಪ್ರಕಾಶ್ ಶೆಟ್ಟಿ.

Mumbai News Desk

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್,ಪೃಥ್ವಿ ಸೇವಾ ಟ್ರಸ್ಟ್, ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ

Mumbai News Desk