July 23, 2026
Mumbai News Kannada
ಪ್ರಕಟಣೆ

ಮುಂಡ್ಕೂರು ಕಜೆ ಶ್ರೀ ಮಹಾಮಾಯಿ ದೇವಸ್ಥಾನ (ಕುಕ್ಕುದಡಿ ಮಾರಿಗುಡಿ ): ಮಾ. 10,11ರಂದು ಮಹಾ ಚಂಡಿಕಾಯಾಗ ಮತ್ತು ಮಾರಿ ಪೂಜೆ







ಉಡುಪಿ ಜಿಲ್ಲೆ ಯ ಕಾರ್ಕಳ ತಾಲೂಕು ಸಚ್ಚರಿಪೇಟೆಯ ಮುಂಡ್ಕೂರು ಗ್ರಾಮದ ನಲ್ಲಿ ನೆಲೆಯಾಗಿ ಸದ್ಭಕ್ತರನ್ನು ಹರಸುತ್ತಿರುವ, ಕಾರ್ಣಿಕದ ಕ್ಷೇತ್ರ ಕಜೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ (ಕುಕ್ಕುದಡಿ ಮಾರಿಗುಡಿ) 2026ರ ಮಾರ್ಚ್ 10 ಮತ್ತು 11ರಂದು ಮಹಾಚಂಡಿಕಾಯಾಗ ಹಾಗೂ ಮಾರಿಪೂಜೆ ಅತ್ಯಂತ ಶ್ರದ್ಧಾಭಕ್ತಿಯಿಂದ ವಿಜೃಂಭಣೆಯಿಂದ ಜರಗಲಿದೆ.

ಕಾರ್ಯಕ್ರಮಗಳು :

ಮಾರ್ಚ್ 10ರ ಮಂಗಳವಾರದಂದು ಬೆಳಿಗ್ಗೆ 8.30ರಿಂದ ನಾಗದರ್ಶನ ಹಾಗೂ 9.15ರಿಂದ ಮಹಾಚಂಡಿಕಾಯಾಗ (ನ್ಯಾಯವಾದಿ ಅಕ್ಷತಾ ಪ್ರಭು ಮತ್ತು ವಿಕನಾಥ್ ಪ್ರಭು ಮುಂಡ್ಕೂರು ಇವರ ಸೇವಾರ್ಥವಾಗಿ) ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ ಮತ್ತು ದೇವದರ್ಶನ ಜರುಗಲಿದ್ದು, ತದನಂತರ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 2.30ಕ್ಕೆ ಗುಳಿಗ ಪಂಜುರ್ಲಿ ದೈವಗಳ ಭಂಡಾರ ಇಳಿಯಲಿದ್ದು, ಸಂಜೆ 4 ಗಂಟೆಗೆ ಸಚ್ಚೇರಿಪೇಟೆಗೆ ಶ್ರೀ ಮಹಮ್ಮಾಯಿ ಅಮ್ಮನವರ ಮೆರವಣಿಗೆ ಹೊರಡಲಿದೆ. ರಾತ್ರಿ 8.45ಕ್ಕೆ ಸಚ್ಚೇರಿಪೇಟೆಯಿಂದ ಶ್ರೀ ಕ್ಷೇತ್ರಕ್ಕೆ ಮರಳಿ ನಿರ್ಗಮಿಸಿ, ರಾತ್ರಿ 9.45ಕ್ಕೆ ಬಿಂಬ ಪ್ರತಿಷ್ಠೆ, ದೇವಿದರ್ಶನ, ಬಲಿ ಹಾಗೂ ಗುಳಿಗ-ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಮಾರ್ಚ್ 11ರ ಬುಧವಾರದಂದು ಮಾರಿಪೂಜೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ದೇವಿದರ್ಶನ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ.

ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಮಹತ್ಕಾರ್ಯದಲ್ಲಿ ಭಾಗವಹಿಸಿ, ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಮಹಾಮಾಯೀ ಅಮ್ಮನವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಕಜೆ ಆರು ಮನೆಯವರು, ಶ್ರೀ ಅನಂತಕೃಷ್ಣ ಆಚಾರ್ಯ( ಪ್ರಧಾನ ಅರ್ಚಕರು) , ಎಂ. ಜಿ. ಕರ್ಕೇರ (ಗೌರವ ಅಧ್ಯಕ್ಷರು), ಕಜೆ ಹೊಸಮನೆ ಸುಂದರ ಸಫಲಿಗ (ಅಧ್ಯಕ್ಷರು), ಹೆಗ್ಗಡೆ ಕಜೆ ಚೆನ್ನಪ್ಪ ಸಫಲಿಗ( ಉಪಾಧ್ಯಕ್ಷರು), ಕಜೆ ಪಡುಬೈಲು ಸುರೇಂದ್ರ ಸಾಲ್ಯಾನ್( ಪ್ರಧಾನ ಕಾರ್ಯದರ್ಶಿ), ಕಜೆ ಆಚೆಮನೆ ಉದಯ ಕುಮಾರ್ (ಕೋಶಾಧಿಕಾರಿ), ಕಜೆ ಮಂಗ್ಲಿಮಾರ್ ನಾರಾಯಣ ಸಫಲಿಗ( ಜೊತೆ ಕಾರ್ಯದರ್ಶಿ), ಕಜೆ ಮನೆ ಭುಜಂಗ ಮೂಲ್ಯ (ಜೊತೆ ಕೋಶಾಧಿಕಾರಿ )ಹಾಗೂ ಸದಸ್ಯರಾದ ಕಜೆ ಪಡುಬೈಲು ಜಯ ಸಾಲ್ಯಾನ್, ಕಜೆ ಆಚೆಮನೆ ಸಂಜೀವ ಶೇರಿಗಾರ್, ಕಜೆ ಹೊಸಮನೆ ಶೇಖರ ಮೆಂಡನ್ , ಕಜೆ ಮಂಗ್ಲಿಮಾರ್ ದಯಾನಂದ ಸಫಲಿಗ, ಕಜೆ ಮನೆ ಸುರೇಶ್ ವಾಸು ಮೂಲ್ಯ ಮತ್ತು ಹೆಗ್ಗಡೆ ಕಜೆ ಸುಚಿತ್ ಕುಮಾರ್ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :
ಮುಂಡ್ಕೂರು ಕಜೆ ಶ್ರೀ ಮಹಮ್ಮಾಯಿ ದೇವಸ್ಥಾನ ಸಚ್ಚರಿಪೇಟೆ ಪೋಸ್ಟ್, ಮುಂಡ್ಕೂರು ವಿಲೇಜ್, ಕಾರ್ಕಳ ತಾಲೂಕು,ಉಡುಪಿ ಡಿಸ್ಟ್ರಿಕ್ಟ್ – 576121
ಮೊಬೈಲ್ ನಂಬರ್ : 90088 00947 / 99808 98245
email : kajeshrimahammayeetemple@gmail com



Related posts

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ :ನಾಳೆ (ನ. 30) ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ನವೆಂಬರ್ 28 ರಿಂದ ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಅಖಿಲ ಭಾರತೀಯ ವೈದ್ಯರ ಕ್ರಿಕೆಟ್ ಟೂರ್ನಮೆಂಟ್ ಆರಂಭ

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk

ಕಲ್ಯಾಣ್‌ನಲ್ಲಿ ಇಂದು ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ

Mumbai News Desk

 ವಿಜಯ ಕಾಲೇಜು ಮುಲ್ಕಿ ಹಳೇವಿದ್ಯಾರ್ಥಿ ಸಂಘ ಮುಂಬಯಿ ಫೆ. 22ಕ್ಕೆ ಸ್ನೇಹ ಮಿಲನ, ಗುರುವಂದನೆ,ಸಾಧಕ ಪುರಸ್ಕಾರ,

Mumbai News Desk