28.2 C
Mumbai
March 11, 2026
Mumbai News Kannada
ತುಳುನಾಡು

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ





ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆಯವರ ಆದೇಶದ ಮೇರೆಗೆ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷರಾದ ವೈ. ಸುಕುಮಾರ್ ಅವರ ಶಿಫಾರಸ್ಸಿನಂತೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಅವರನ್ನು ನೇಮಕ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಕಾಪು ರಾಜೀವ ಭವನದಲ್ಲಿ ಸನ್ಮಾನ್ಯ ವಿನಯ್ ಕುಮಾರ್ ಸೊರಕೆ ಅವರು ಪ್ರಭೋದ್ ಚಂದ್ರ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ಸದಸ್ಯರಾದ ಸುಧೀರ್ ಎಸ್ ಕರ್ಕೇರ,ಸುಭಾಶ್ ಸಾಲ್ಯಾನ್, ಶೇಖರ್, ಯೋಗೀಶ್ ಹೆಜಮಾಡಿ ಉಪಸ್ಥಿತರಿದ್ದರು, ನೂತನವಾಗಿ ಆಯ್ಕೆಯಾದ ಪ್ರಭೋದ್ ಚಂದ್ರ ಅವರು ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಈ ನೇಮಕಾತಿಯ ಮೂಲಕ ಹೆಜಮಾಡಿ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಇನ್ನಷ್ಟು ಬಲವತ್ತಾಗಲಿ ಎಂದು ಹಾರೈಸಲಾಯಿತು.

​ಪ್ರಬೋದ್ ಚಂದ್ರ ಅವರು ಈ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ ಉಡುಪಿ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಉತ್ತಮ ಆಡಳಿತ ಮತ್ತು ಸೇವೆಯಿಂದ ಗುರುತಿಸಿಕೊಂಡಿದ್ದಾರೆ. ತಮ್ಮ ಕರ್ತವ್ಯದ ಮೂಲಕ ಸಾವಿರಾರು ಮಂದಿಯ, ಎಲ್ಲಾ ಜಾತಿ-ಧರ್ಮದ ಜನರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ



Related posts

ಕಾರ್ಲೆ ಭಗವತಿ ಕ್ಷೇತ್ರದ ದೈವ ಪಾತ್ರಿ, ಮೋಯ ಜನಾಂಗದ ದಿವ್ಯ ಚೇತನ ದಿ.ಕೃಷ್ಣ ಬೆಳ್ಚಪ್ಪಾಡರು ಶಿರಿಯ, ಅವರ 42ನೇ ಪುಣ್ಯ ಸ್ಮರಣೆ

Mumbai News Desk

ಕೋಡಿಕಲ್; ವಿಶ್ವ ಭಾರತಿ ಫ್ರೆಂಡ್ ಸರ್ಕಲ್. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಮೂಲ್ಕಿ : ಆಗಸ್ಟ್ 17ರಂದು ಮೂಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆ

Mumbai News Desk

ಮುಲ್ಕಿ : ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರಿಗೆ ಸನ್ಮಾನ

Mumbai News Desk

ಶ್ರೀ ಶಂಕರಪುರ ಕ್ಷೇತ್ರದಲ್ಲಿ ವಿಶ್ವ ಹಸಿವು ದಿನಾಚರಣೆ – ಶ್ರೀ ಸಾಯಿ ತುತ್ತು ಯೋಜನೆ *ರಾಜ್ಯದೆಲ್ಲೆಡೆ ವಿಸ್ತರಿಸುವ ಸಂಕಲ್ಪ: – ಶ್ರೀ ಸಾಯಿಈಶ್ವರ್ ಗುರೂಜಿ

Mumbai News Desk

ಬನ್ನಂಜೆ ಬಿಲ್ಲವರ ಸೇವಾ ಸಂಘ: ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ.

Mumbai News Desk