35 C
Mumbai
April 24, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ : ಮಾ. 14ಕ್ಕೆ ವಾರ್ಷಿಕೋತ್ಸವ (ವಿದ್ಯಾರ್ಥಿಗಳಿಗೆ ಧನ ಸಹಾಯ, ಯಕ್ಷಗಾನ ಪ್ರದರ್ಶನ)





ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ, ಮುಂಬೈ ಇದರ 13ನೇ ವಾರ್ಷಿಕೋತ್ಸವದ ಅಂಗವಾಗಿ, ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಟ್ರಸ್ಟ್, ಖಾರ್ ರೋಡ್, ಮುಂಬೈ ಇವರ ಸಹಯೋಗದಲ್ಲಿ ಮಾರ್ಚ್ 14ರಂದು ಶನಿವಾರ ಮಧ್ಯಾಹ್ನ 3:30 ರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಣೆ ಹಾಗೂ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಕಾರ್ಯಕ್ರಮವು ಶ್ರೀ ವರದ ಸಿದ್ಧಿ ವಿನಾಯಕ ಸಭಾಗ್ರಹ , ಬೋಪರ್ ರೋಡ್, ನಾಂದಿವಿಲಿ, ಡೊಂಬಿವಲಿ (ಪೂರ್ವ) ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ, ಮುಂಬೈ ಇದರ ಗೌರವಾಧ್ಯಕ್ಷರಾದ ಶ್ರೀ ರಾಜು ಮೆಂಡನ್ ವಂಡ್ಸೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಹೋಟೆಲ್ ಟೇಸ್ಟ್ ಆಫ್ ಬೈಟ್ಸ್ ಇದರ ಮಾಲಕರಾದ ಶ್ರೀ ರತ್ನಾಕರ್ ಶೆಟ್ಟಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಉದಯ ಶೆಟ್ಟಿ ಆರ್ಡಿ, ಹೋಟೆಲ್ ಪ್ರವೀಣ್ ಇಂಟರ್ನ್ಯಾಷನಲ್ ಉಲ್ಲಾಸ್ ನಗರ್ ಉಪಸ್ಥಿತರಿರುವರು.

ಗೌರವ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ತಾಣೆ ಸ್ಥಳೀಯ ಸಮಿತಿ ಇದರ ಕಾರ್ಯಧ್ಯಕ್ಷರಾದ ಶ್ರೀ ಅವಿನಾಶ್ ಪುತ್ರನ್ ,ಮುಂಬೈನ ಉದ್ಯಮಿ ಹಾಗೂ ಕಲಾ ಪೋಷಕರಾದ ಶ್ರೀ ಸದಾನಂದ ಶೆಟ್ಟಿ ನಂದ್ರೊಳ್ಳಿ, ಶ್ರೀ ರಮೇಶ್ ಶೆಟ್ಟಿ ಸಿವಿಲ್, ಹೋಟೆಲ್ ಇಗೋ, ಡೊಂಬಿವಲಿ ಇದರ ಮಾಲಕರಾದ ಶ್ರೀ ಸತೀಶ್ ಶೆಟ್ಟಿ ನಂದ್ರೊಳ್ಳಿ, ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಜಯರಾಮ ಶೆಟ್ಟಿ ಇಡೂರು, ಹೋಟೆಲ್ ಆನಂದ, ಶಹಡ್ ಇದರ ಮಾಲಕರಾದ ಶ್ರೀ ಗಣೇಶ್ ಶೆಟ್ಟಿ ನಂದ್ರೊಳ್ಳಿ, ಮುಂಬೈನ ಉದ್ಯಮಿ ಹಾಗೂ ಕಲಾ ಪೋಷಕರಾದ ಶ್ರೀ ನಾರಾಯಣ್ ಚಂದ್ರನ್, ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಟ್ರಸ್ಟ್, ಖಾರ್ ಮುಂಬೈ ಇದರ ಅಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿ ಗುರುಸ್ವಾಮಿ, ಶ್ರೀ ಶ್ರೀ ಫುಡ್ಸ್ ಇದರ ಮಾಲಕರಾದ ಶ್ರೀ ಸಿ. ಅಶೋಕ್ ಮರತ್ತೂರು, ಪ್ರಾಧಾನ್ಯ ಹಾಸ್ಪಿಟಾಲಿಟಿ ಸರ್ವಿಸಸ್ ಇದರ ಶ್ರೀ ಅಶೋಕ್ ಮೆಂಡನ್, ಹಾಗೂ ಶ್ರೀ ವಿಠ್ಠಲ್ ಟೆಕ್ಸ್ಟೈಲ್ಸ್ ಇದರ ಮಾಲಕರಾದ ಶ್ರೀ ರಘುರಾಮ್ ಮೆಂಡನ್ ಅವರು ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಕುಮಾರಿ ದಿಶಾ ದೇವಾಡಿಗ, ಕುಮಾರಿ ನಿಧಿ ಪ್ರಭು ಹಾಗೂ ಕುಮಾರಿ ಯುಕ್ತಿ ದೇವಾಡಿಗ ಇವರಿಗೆ ಪ್ರತಿಭಾ ಪುರಸ್ಕಾರವನ್ನು ಪ್ರಧಾನಿಸಲಾಗುವುದು. ಹಾಗೆಯೇ ಶ್ರೀ ನಾರಾಯಣ ಶೆಟ್ಟಿ ನಂದ್ರೊಳ್ಳಿ ಅವರ ವಿರಚಿತ ಹಾಗೂ ಶ್ರೀ ಸುರೇಶ್ ಶೆಟ್ಟಿ ನಂದ್ರೊಳ್ಳಿ ಅವರ ಪದ್ಯ ರಚನೆಯ ‘ಕಾಶಿ ತೀರ್ಥ’ ಎಂಬ ನೂತನ ಯಕ್ಷಗಾನ ಪ್ರಸಂಗವು ಪ್ರಸ್ತುತಗೊಳ್ಳಲಿದೆ.

ಈ ಕಾರ್ಯಕ್ರಮಕ್ಕೆ ಮುಂಬೈನ ಎಲ್ಲಾ ಕಲಾರಾಧಕರು ಮತ್ತು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಪ್ತ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



Related posts

ಫೆ. 10ಕ್ಕೆ ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ – ಸಂತ ಸಮಾಗಮ

Mumbai News Desk

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.

Mumbai News Desk

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ

Mumbai News Desk

ಸೆ.7 ರಂದು ಕಲ್ಯಾಣ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಭವ್ಯ ಸಮಾರಂಭ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ

Mumbai News Desk