
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನವಿ ಮುಂಬಯಿ ಶಾಖೆಯ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ
ದಿನಾಂಕ 1-3-2026 ರಂದು ವಿಹಾರ ಕೂಟವನ್ನು ಏರ್ಪಡಿಸಲಾಗಿ ಇದರಲ್ಲಿ ಶಾಖೆಯ ಸದಸ್ಯರು ತಮ್ಮ ದೈನಂದಿನ ಬೇನೆ ಬೇಸರಗಳನ್ನು ಮರೆತು ತುಸು ಹೊತ್ತು ಪ್ರಕೃತಿಯ ಮಡಿಲಲ್ಲಿ ಒಂದೇ ಕುಟಂಬದ ಸದಸ್ಯರಂತೆ ಜೊತೆಗೂಡಿ ಸಂಭ್ರಮಿಸಿದರು. ಅಲ್ಲದೆ ಆಟ, ಊಟ, ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮಗಳಲ್ಲಿ ಮತುವರ್ಜಿಯಿಂದ ಭಾಗವಹಿಸಿದರು. ಪನ್ವೇಲ್‌ನಿಂದ ಬೆಳಗಾತ ವಿಶೇವಾಗಿ ಏರ್ಪಾಡು ಮಾಡಲಾದ ಬಸ್ಸಿನ ಮೂಲಕ ವಿಹಾರ ಕೂಟದ ಜಾಗವಾದ ಕರ್ಜತ್‌ನ ಮಿಹಿರ್ ಫಾರ್ಮ್‌ಗೆ ತೆರಳಿದ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಅಲ್ಲಿ ಅವರಿಗಾಗಿ ಕಾಯುತ್ತಿದ್ದ ಬೆಳಗ್ಗಿನ ಬಿಸಿ ಬಿಸಿ ಉಪಾಹಾರವನ್ನು ಸೇವಿಸಿದರು. ಭಾಗವಹಿಸಿದ ಎಲ್ಲರೂ ಉತ್ಸಾಹದ ಚಿಲುಮೆಂಯಂತಿದ್ದರು. ಮೊದಲಿಗೆ ಶಾಖೆಯ ಕಾರ್ಯಧ್ಯಕ್ಷರಾದ ನಾರಾಯಣ ಕೋಟ್ಯಾನರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಅಶ್ವಿನಿ ಕೊಟ್ಯಾನ್ ಮತ್ತು ತೇಜಸ್ವಿ ಮಲ್ಪೆಯವರ ಮೇಲ್ವಿಚಾರಣೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿ ಈ ಸ್ಪರ್ಧೆಗಳಲ್ಲಿ ನಟರಾಜ ಸಾಲ್ಯಾನ್, ಜಗದೀಶ್ ಕೋಟ್ಯಾನ್, ಭಾರತಿ ಹಾಗೂ ಬಾಬು ಮೊಗವೀರ, ಪ್ರತಿಭಾ ಹಾಗೂ ಚಂದ್ರಕಾಂತ ಸಾಲ್ಯಾನ್, ಜೀವನ್ ಸಾಲ್ಯಾನ್, ರಂಜನಿ ಪುತ್ರನ್, ಹೇಮಾ ಕೋಟ್ಯಾನ್, ಜಾನಕಿ ಬಂಗೇರ, ಹರಿಣಾಕ್ಷಿ ಮೈಂದನ್, ಅಶ್ವಿನಿ ಕೋಟ್ಯಾನ್ ವಿಜೇತರಾದರು. ವಿಹಾರ ಕೂಟದಲ್ಲಿ ಭಾಗವಹಿಸಿದವರ ಸಲುವಾಗಿ ನಡೆಸಲಾದ ವಿಶೇಷ ಲಕ್ಕಿಡಿಪ್‌ನಲ್ಲಿ ಪ್ರತಿಭಾ ಸಾಲ್ಯಾನ್ ಮತ್ತು ಚಂದ್ರಕಾಂತ ಸಾಲ್ಯಾನ್ ದಂಪತಿಯರನ್ನು ವಿಜೇತರನ್ನಾಗಿ ಘೋಷಿಸಲಾಯ್ತು. ವಿಜೇತರಿಗೆ ನಾರಾಯಣ ಕೋಟ್ಯಾನ್, ಶೇಖರ ಮೈಂದನ್ ಮತ್ತು ಜಾನಕಿ ಬಂಗೇರ ಬಹುಮಾನಗಳನ್ನು ವಿತರಿಸಿದರು.

ಸೂರ್ಯನು ಪಶ್ಚಿಮದಲ್ಲಿ ಅಸ್ತವಿಸುತ್ತಿರುವಂತೆಯೇ ನಡೆದ ಕಿರು ಸಭಾ ಕಾರ್ಯಕ್ರಮದಲ್ಲಿ ಶಾಖೆಯ ಕಾರ್ಯಾಧ್ಯಕ್ಷ ನಾರಾಯಣ ಕೋಟ್ಯಾನರು ಮಾಡತಾಡುತ್ತಾ, ವಿಹಾರ ಕೂಟವನ್ನು ಅತ್ಯಂತ ಯಶಸ್ವಿಯಾಗಿಸಿದ ಸಲುವಾಗಿ ಎಲ್ಲರ ಉಪಕಾರವನ್ನು ಸ್ಮರಿಸುತ್ತಾ, ಶಾಖೆಯ ವತಿಯಿಂದ ನಡೆಸಲಾಗುತ್ತಿರುವ ಇತರ ಕಾರ್ಯಕ್ರಮಗಳಿಗೂ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಇದೇ ರೀತಿಯಲ್ಲಿಸ್ಪಂದಿಸಬೇಕೆಂದು ಕರೆ ಇತ್ತರು. ಶಾಖೆಯ ಕಾರ್ಯದರ್ಶಿ ಶೇಖರ ಮೈಂದನ್ ವಂದನಾರ್ಪಣೆ ಮಾಡಿದರು.
- ವರದಿ: ಸೋಮನಾಥ ಎಸ್.ಕರ್ಕೇರ, ಫೋನ್: 9819321186




