28 C
Mumbai
September 18, 2026
Mumbai News Kannada
ಪ್ರಕಟಣೆ

ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ, ‘ಬಾಪ್ಟಿಸ್ಟ್‌ವಾಡಿ’ ಅಂಧೇರಿ ಪೂರ್ವ : ಪುನರ್ ನಿರ್ಮಾಣ, ಹೊಸ ಮೂರ್ತಿ ಸ್ಥಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಿಮಿತ್ತ ಮನವಿ ಪತ್ರ ಬಿಡುಗಡೆ






ಮಿನಿ-ಮಂಗಳೂರು ಎಂದೇ ಖ್ಯಾತಿಯೆತ್ತಿರುವ ಅಂಧೇರಿ ಪೂರ್ವದ ಶೇರ್ -ಎ –ಪಂಜಾಬ್ ಪರಿಸರದ ದತ್ತ ಜಗದಂಬಾ ಮಂದಿರದ ಮಾರ್ಗದಲ್ಲಿನ ಬಾಪಿಸ್ಟ್ ವಾಡಿಯಲ್ಲಿ ನೆಲೆಸಿರುವ ತುಳು ಕನ್ನಡಿಗರ ಮುಂದಾಳತ್ವದಲ್ಲಿ ಕಾರ್ಯರೂಪದಲ್ಲಿರುವ ಪುರಾತನ ಹಾಗೂ ಕಾರಣಿಕದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಾಲಯದಲ್ಲಿ ಇದೀಗ ಪುನರ್ ನಿರ್ಮಾಣ, ಹೊಸಮೂರ್ತಿ ಸ್ಥಾಪನೆಯೊಂದಿಗೆ ಬ್ರಹ್ಮಕಲಶೋತ್ಸವದ ಪೂರ್ವಸಿದ್ಧತೆಯ ಕಾರ್ಯ ಬರದಿಂದ ನಡೆಯುತ್ತಿದೆ . ಈ ನಿಮಿತ್ತ ಭಕ್ತಾಭಿಮಾನಿಗಳ ದಾನಿಗಳ ಸಹಾಯ ಸಹಕಾರವನ್ನು ಯಾಚಿಸುವ ಸಲುವಾಗಿ ಪುನರ್ ನಿರ್ಮಾಣ, ಹೊಸ ಮೂರ್ತಿ ಸ್ಥಾಪನೆ ಹಾಗೂ ಬ್ರಹ್ಮಕಲಶೋತ್ಸವ ನಿಮಿತ್ತ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಸುಮಾರು 72 ವರ್ಷಗಳ ಹಿಂದೆ ಅಂದರೆ 1953ರಲ್ಲಿ ಮುಂಬಯಿಯ ಅಂಧೇರಿ ಪೂರ್ವದ ‘ಬಾಪ್ಟಿಸ್ಟ್‌ವಾಡಿ’ ಎಂಬ ಪ್ರದೇಶದಲ್ಲಿ ಮೂಲ ಸೌಕರ್ಯಯಗಳೇ ಇಲ್ಲದ ಅಂದಿನ ಪರಿಸ್ಥಿತಿಯಲ್ಲಿ ನಮ್ಮ ಕರಾವಳಿ ಸಂಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು ನೆಲೆಸಿದ್ದ ತುಳು -ಕನ್ನಡಿಗರು ಪ್ರತಿದಿನ ಶ್ರೀ ದತ್ತಾತ್ರೇಯರ ಫೋಟೋವನ್ನು ಇಟ್ಟು ಭಜನೆ ಮಾಡುತ್ತಿದ್ದರು. ಕಾಲಕ್ರಮೇಣ ಈ ಭಕ್ತಿಯ ಒಕ್ಕೂಟದಿಂದಲೇ ಈ ಭಜನಾ ಮಂದಿರವು ನಿರ್ಮಾಣವಾಯಿತು.
ಒಂದು ಬಾರಿ ಇಲ್ಲಿಯ ಭಕ್ತರು ವಜ್ರೇಶ್ವರಿ ಶ್ರೀ ನಿತ್ಯಾನಂದ ಸ್ವಾಮೀಜಿಯವರ ದರ್ಶನಕ್ಕೆ ಹೋದಾಗ ಇವರನ್ನು
ಆಶೀರ್ವದಿಸಿ, ಅದೇ ಸ್ಥಳದಲ್ಲಿ ಪೂಜೆ ಮತ್ತು ಭಜನೆಯನ್ನು ಮುಂದುವರಿಸಬೇಕೆಂದು ಹಾಗೂ ಒಂದು ದಿನ ಇದು ಮುಂಬಯಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗುತ್ತದೆ ಎಂದು ಅನುಗ್ರಹಿಸಿದ್ದರು.

ಮುಂದೆ ದೈವೀ ಪ್ರೇರಣೆಯಂತೆ ಭಕ್ತರ ಮನಸ್ಸಿನಲ್ಲಿ ಬಂದ ಆಶಯದಂತೆ, ಶ್ರೀ ದತ್ತಾತ್ರೇಯರೊಂದಿಗೆ ಶ್ರೀ ಜಗದಂಬಾ ದೇವಿಯ ಮೂರ್ತಿಯನ್ನು ಕೂಡ ಸ್ಥಾಪಿಸಲಾಯಿತು. ನಿಯಮಿತ ಪೂಜೆ, ವಿಧಿ-ವಿಧಾನಗಳೊಂದಿಗೆ ಸ್ವಾಮಿಯ ಅನುಗ್ರಹದಂತೆ ಶ್ರೀ ದತ್ತ ಜಗದಂಬಾ ಮಂದಿರದ ರೂಪದಲ್ಲಿ ಮುಂಬಯಿ ನಗರದ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕೇಂದ್ರವಾಗಿ ಬೆಳೆಯಿತು.
ದೇವಸ್ಥಾನದ 60ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸ್ವಾಮೀಜಿಯವರು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರು ಈ ಮಂದಿರಕ್ಕೆ ‘ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ’ ಎಂಬ ಹೆಸರನ್ನು ನೀಡಿದರು. ಅಂದಿನಿಂದ ಶ್ರೀ ದತ್ತ ಜಗದಂಬಾ ಮಂದಿರವು ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಾಲಯವಾಗಿ ಚಿರಪರಿಚಿತವಾಗಿರುವುದು ಈಗ ಇತಿಹಾಸ.
ಈ ರೀತಿಯ ಹಿನ್ನೆಲೆಯನ್ನು ಹೊಂದಿರುವ ಈ ದೇವಸ್ಥಾನದ 72ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಕೇಳಲಾದ ಸ್ವರ್ಣ ಪ್ರಶ್ನೆ ಪ್ರಕಾರ ದೇವಾಲಯವು ಪುನರ್ ನಿರ್ಮಾಣಗೊಳ್ಳಬೇಕೆಂದು ಸೂಚಿಸಲಾಯಿತು. ಅದರಂತೆ ಇದೀಗ ದೇವಲಯದ ಗೋಪುರ ಪುನರ್ ನಿರ್ಮಾಣ,
ಕೃಷ್ಣ ಶಿಲೆಯಿಂದ ಹೊಸ ಮೂರ್ತಿಗಳ ಸ್ಥಾಪನೆ, ಅನ್ನದಾನ ಸಭಾಂಗಣ, ದೇವಸ್ಥಾನದ ಕಚೇರಿ ಹಾಗೂ ಇತರೆ ಅಗತ್ಯ ಸೌಕರ್ಯಗಳ ನಿರ್ಮಾಣ ಕಾರ್ಯದ ಯೋಜನೆ ರೂಪಿಸಿ ಸಮಿತಿಯು ಕೈಗೆತ್ತಿಕೊಂಡಿದೆ. ಸುಮಾರು 25 ಲಕ್ಷಗಳ ಖರ್ಚು ವೆಚ್ಚದೊಂದಿಗೆ 2026ರ ಏಪ್ರಿಲ್ ತಿಂಗಳ ಒಳಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. 2026ರ ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನೆರವೇರಿಸುವ ಬಗ್ಗೆ ಮಂಡಳಿ ನಿರ್ಧರಿಸಿದೆ. ಹಾಗೆಯೇ ಈ ಮಹತ್ತರ ದೇವತಾ ಕಾರ್ಯಕ್ಕೆ ರೂಪಾಯಿ 25,000, ರೂಪಾಯಿ 50,000, ರುಪಾಯಿ ಒಂದು ಲಕ್ಷಕ್ಕಿಂತ ಮೇಲ್ಪಟ್ಟು ದಾನ ನೀಡಿದ ಮಹಾದಾನಿಗಳ ಹೆಸರನ್ನು ಅಮೃತಶಿಲೆಯಲ್ಲಿ ನಮೂದಿಸಿ ಶಾಶ್ವತವಾಗಿ ಇರಿಸಲಾಗುವುದು. ಈ ಪುಣ್ಯ ಕಾರ್ಯದಲ್ಲಿ ಎಲ್ಲಾ ಭಕ್ತಾಭಿಮಾನಿಗಳು ತಮ್ಮ ತನ್ನು- ಮನ -ಧನದ ಸಹಕಾರವನ್ನು ನೀಡಿ ಶ್ರೀ ದತ್ತ ಜಗದಂಬೆಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಕ್ಷೇತ್ರ ಜಗದಂಬಾ ದೇವಾಲಯದ ವತಿಯಿಂದ ಪ್ರಮುಖ ಸಲಹೆಗಾರರು ಹಾಗೂ ಗೌರವ ಅಧ್ಯಕ್ಷರುಗಳಾದ ಶಾಸಕ ಮುರ್ಜಿ ಪಾಟಿಲ್(ಕಾಕಾ ),
ಕೋಟ್ಯಾನ್ ಮೆನ್ಸ್ ವೇರ್ ನ ಹರೀಶ್ ಆರ್ ಕೋಟ್ಯಾನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ, ಅಧ್ಯಕ್ಷ ದಯಾನಂದ ಅಂಚನ್, ಉಪಾಧ್ಯಕ್ಷ ಏಕನಾಥ್ ಬಂಗೇರ, ಜೀರ್ಣೋದ್ಧಾರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ದೀನದಾಸ್ ಬಿ ಸನಿಲ್, ಕಾರ್ಯದರ್ಶಿ ಯಶ್ವಂತ್ ಅಮೀನ್, ಸಂಯುಕ್ತ ಕಾರ್ಯದರ್ಶಿ ಶಂಕರ್ ದೇವಾಡಿಗ, ಕೋಶಾಧಿಕಾರಿ ಮೋಹನ್ ದಾಸ್ ಶ್ರೀಯಾನ್, ಸಂಯುಕ್ತ ಕೋಶಾಧಿಕಾರಿ ಪ್ರಕಾಶ್ ಕೋಟ್ಯಾನ್, ಭುವಾಜಿಗಳಾದ ಯೋಗೇಂದ್ರನಾಥ್, ವಾಸುದೇವ ಕೋಟ್ಯಾನ್, ದೇವಿ ಪಾತ್ರಿ ಚೇತನ್ ದೇವಾಡಿಗ , ನಾಗ ಸ್ವರವಾದಕ ತೇಜಪಾಲ್ ಕರ್ಕೆರ, ಅರ್ಚಕರುಗಳಾದ ಹರೀಶ್ ಕೆ ಕೋಟ್ಯಾನ್, ರಾಹುಲ್ ದೇವಾಡಿಗ, ಧೀರಜ್ ದೇವಾಡಿಗ, ಸುಕೇಶ್ ಬಂಗೇರ, ಚಿರಾಗ್ ದೇವಾಡಿಗ, ಸಾಯಿ ಕಿರಣ್ ಸುವರ್ಣ, ಪ್ರಥಮೇಶ್ ಪುತ್ರನ್, ಸಿದ್ದೇಶ್ ಬಂಗೇರ, ಧ್ರುವ್ ಪೂಜಾರಿ, ತನಿಷ್ ಬಂಗೇರ,ಆಕಾಶ್ ಪೂಜಾರಿ, ಆರ್ಯನ್ ದೇವಾಡಿಗ, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಗಂಗಾಧರ ಸಾಲಿಯನ್, ಕೆ ಪಿ ಗುಜರನ್, ಹರಿಶ್ಚಂದ್ರ ಕೋಟ್ಯಾನ್, ಸತೀಶ್ ಕೆ ಕೋಟ್ಯಾನ್, ಸುರೇಂದ್ರ ಅಮೀನ್, ಕೃಷ್ಣದೇವಾಡಿಗ, ಜಯಶೀಲ ಕೋಟ್ಯಾನ್, ಪುರುಷೋತ್ತಮ ಅಂಚನ್, ಅರುಣ್ ಸುವರ್ಣ, ಚಂದ್ರಶೇಖರ್ ಸನಿಲ್, ಸದಾನಂದ ಪುತ್ರನ್, ಮೋಹನ್ ದಾಸ್ ಪೂಜಾರಿ, ತ್ರಿಭುವನ್ ಸಿಂಗ್, ರಕ್ಷಿತ್ ಕೋಟ್ಯಾನ್ , ಕುಣಾಲ್ ಕೋಟ್ಯಾನ್, ತುಷಾರ್ ಕರ್ಕೆರ, ಸಾಯಿ ಪ್ರಸಾದ್ ಸುವರ್ಣ, ಸತ್ಯ ಸುವರ್ಣ, ಮಹಿಳಾ ಸಮಿತಿ ಸದಸ್ಯರಾದ ಆಶಾ ದೇವಾಡಿಗ, ಪದ್ಮ ಕೋಟ್ಯಾನ್, ಪ್ರೇಮಲತಾ ಪೂಜಾರಿ, ಸುರೇಖಾ ಗುಜರನ್, ಯಶೋದ ದೇವಾಡಿಗ, ನಳಿನಿ ಪೂಜಾರಿ, ಮಲ್ಲಿಕಾ ಶ್ರೀಯಾನ್, ಸುಮತಿ ದೇವಾಡಿಗ, ಜಯ ಪಿಳ್ಳೆ, ಭವಾನಿ ಸುವರ್ಣ, ರಜನಿ ದೇವಾಡಿಗ, ಮಾಲತಿ ಬಂಗೇರ, ದಯಾವತಿ ಎಸ್ ಕೋಟ್ಯಾನ್, ಪದ್ಮಾ ಪೂಜಾರಿ, ಶಾರದಾ ಪೂಜಾರಿ, ಕಸ್ತೂರಿ ಕರ್ಕೆರ, ಲೀಲಾಕ್ಷಿ ಕೋಟ್ಯಾನ್, ಅಕ್ಷತಾ ಸಾಲ್ಯಾನ್ ಹಾಗೂ ಸಮಸ್ತ ತುಳು- ಕನ್ನಡಿಗರು ವಿನಂತಿಸಿದ್ದಾರೆ.

ನೇರವಾಗಿ ಬ್ಯಾಂಕ್ ಖಾತೆಗೆ ದೇಣೆಗೆ ನೀಡಿ ಸಹಕರಿಸ ಬಯಸುವವವರು : A/C Name : Shree Kshetra Datta Jagadamba Devasthana Foundation.
Bank : Bharat Co-Operative Bank(Mumbai )Ltd A/C No. : 006812100001157 IFSC :BCBM0000069. Branch : Mahakali Caves Road, ಈ ಖಾತೆಗೆ ಜಮಾ ಮಾಡಬಹುದು. ( ಆದಾಯ ತೆರಿಗೆ ವಿನಾಯಿತಿಗೆ 80G ಪ್ರಮಾಣ ಪತ್ರ ಲಭ್ಯವಿದೆ)

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ : 9867514179 ಅಥವಾ 9082072573 ಸಂಪರ್ಕಿಸಬಹುದು.



Related posts

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk

ಮುಂಬಯಿಯಲ್ಲಿ ಆಗಸ್ಟ್ 26ರಂದು ‘ಕಲಾ ಸೌರಭ’ ಸಂಸ್ಥೆಯಿಂದ ‘ಸ್ವರ ಸಂಗೀತ ಗಾನಾಮೃತ – ನುಡಿ ನಮನ’ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ. ಗುರುಪೂರ್ಣಿಮೆ ಗೆ ಶ್ರೀ ಮಹಾವಿಷ್ಣು ಭಜನಾ ತಂಡ ಶುಭಾರಂಭ.

Mumbai News Desk

ಡೊಂಬಿವಲಿ: ಸೆ. 6ರಂದು ಮುದ್ದು ಮಕ್ಕಳ ‘ರಾಧಾ–ಕೃಷ್ಣ’ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

Mumbai News Desk

ಕುಲಾಲ ಸಂಘ ಮುಂಬಯಿ: ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ – ಪೆ 15.: ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಫೆ.15 ರಂದು ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 24 ಗಂಟೆಗಳ ಅಖಂಡ ಭಜನೆ

Mumbai News Desk