30 C
Mumbai
March 18, 2026
Mumbai News Kannada
ಕ್ರೀಡೆ

ಉದಯ ಶೆಟ್ಟಿ ನೇತೃತ್ವದಲ್ಲಿ ಹರಿಯಾಣದಲ್ಲಿ 5ನೇ ಮಾಸ್ಟರ್ಸ್ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್





ಮುಂಬಯಿ : ಹರಿಯಾಣ ರಾಜ್ಯದ ಲೋಹಾರು ನಗರದಲ್ಲಿ ನಡೆದ 5ನೇ ಮಾಸ್ಟರ್ಸ್ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ನಡೆಯಿತು. ಇಂಡಿಯನ್ ಮಾಸ್ಟರ್ಸ್  ವೈಟ್ ಲಿಫ್ಟಿಂನ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ 

ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು ದೇಶದ ವಿವಿಧ ಭಾಗಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ವೇಟ್‌ಲಿಫ್ಟರ್‌ಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧಾರ್ಥಿಗಳಿಗೆ ಸರಿಯಾದ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಕಾರ್ಯಕ್ರಮವು ಅತ್ಯುತ್ತಮವಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಲೋಹಾರು ನಗರದ ಮಹಾಪೌರರು ನೆರವೇರಿಸಿದರೆ, ಸಮಾರೋಪ ಸಮಾರಂಭದಲ್ಲಿ ಉದಯ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಗ್ರೀಸ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಆಯ್ಕೆ ಸಮಿತಿಯೊಂದಿಗೆ  ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಅವರ ಉಪಸ್ಥಿತಿಯಲ್ಲಿ  ನಡೆಸಲಾಯಿತು.

ಒಟ್ಟು ಪುರುಷರ ವಿಭಾಗದ ಚಾಂಪಿಯನ್‌ಶಿಪ್ ಪಟ್ಟವನ್ನು 6 ಚಿನ್ನದ ಪದಕಗಳನ್ನು ಗೆದ್ದ ಪಂಜಾಬ್ ತಂಡ ಪಡೆದರೆ, ಮಹಿಳಾ ವಿಭಾಗದ ಚಾಂಪಿಯನ್‌ಶಿಪ್ ಪಟ್ಟವನ್ನು ರಾಜಸ್ಥಾನ ತಂಡ ತನ್ನದಾಗಿಸಿಕೊಂಡಿತು.



Related posts

ಸುರತ್ಕಲ್ ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟ

Mumbai News Desk

ವಸಯಿ ಕಲಾ ಕ್ರಿಡೋತ್ಸವ ದಲ್ಲಿ  ಥ್ರೋ ಬಾಲ್ ಆಟದಲ್ಲಿ ಉಷಾ ಶ್ರೀಧರ ಶೆಟ್ಟಿ  ಕರ್ನಿರೆ ಇವರ ನಾಯಕತ್ವ ತಂಡಕ್ಕೆ  ಪ್ರಥಮ ಸ್ಥಾನ . 

Mumbai News Desk

ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ನಿವೃತ್ತಿ : 14 ವರ್ಷದ ಟೆಸ್ಟ್ ಕೆರಿಯರ್ ಅಂತ್ಯ‌

Mumbai News Desk

ಕರ್ನಾಟಕ ಸಂಘ ಡೊಂಬಿವಲಿ, ಅದ್ಧೂರಿ ಕ್ರೀಡೋತ್ಸವ ದಂಗಲ್ – 2024 ಉದ್ಘಾಟನೆ

Mumbai News Desk

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಥಾಣೆಯ ಆರೋಹಿ ಎಸ್ ಪೂಜಾರಿಗೆ ಚಿನ್ನ ಮತ್ತು ಕಂಚಿನ ಪದಕಗಳ ಸಾಧನೆ

Mumbai News Desk

ಎನ್ ಕೆ ಇ ಎಸ್ ಪ್ರೊ ಕಬಡ್ಡಿ ಸೀಸನ್ 1 – ಬಹುಮಾನ ವಿತರಣೆ

Chandrahas