October 17, 2026
Mumbai News Kannada
ಪ್ರಕಟಣೆ

ಜೋಗೇಶ್ವರಿಯ ಶ್ರೀ ಭಗವತಿ ಮಂದಿರದಲ್ಲಿ ಅಕ್ಟೋಬರ್ 18 ರಂದು ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ದುರ್ಗಾ ಹೋಮ



ಮುಂಬೈ: ಇಲ್ಲಿನ ಜೋಗೇಶ್ವರಿ ಪೂರ್ವದ ಜೆ.ವಿ. ಲಿಂಕ್ ರಸ್ತೆಯ ಪ್ರತಾಪ್ ನಗರದಲ್ಲಿರುವ ‘ಕಲ್ಪವೃಕ್ಷ ಶ್ರೀ ಮಹಾಗಣಪತಿ ಹಾಗೂ ಶ್ರೀ ಭಗವತಿ ಮಂದಿರ’ದಲ್ಲಿ 29ನೇ ವರ್ಷದ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 11 ರಿಂದ  ವಿಜೃಂಭಣೆಯಿಂದ  ಆಚರಿಸಲಾಗುತ್ತಿದೆ.

ಉತ್ಸವದ ಅಂಗವಾಗಿ ಅಕ್ಟೋಬರ್ 11 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಗಣಹೋಮ, ಘಟಸ್ಥಾಪನೆ ಹಾಗೂ ಆರತಿಯೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು ನವರಾತ್ರಿಯ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆರತಿ, ತೀರ್ಥಪ್ರಸಾದ ವಿತರಣೆ, ಜರುಗುತ್ತಿದೆ.

ವಿಶೇಷ ಪೂಜಾ ಕಾರ್ಯಕ್ರಮಗಳು:

ಅಕ್ಟೋಬರ್ 18 (ಭಾನುವಾರ): ಬೆಳಿಗ್ಗೆ 9 ಗಂಟೆಗೆ ದುರ್ಗಾ ಹೋಮ ಹಾಗೂ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಮಹಾ ಅನ್ನದಾನ ನಡೆಯಲಿದೆ.

ಸಂಜೆ ಭಜನೆ ಹಾಗೂ ಆವೇಶ ಪೂಜೆ ನೆರವೇರಲಿವೆ.

ಅಕ್ಟೋಬರ್ 20 (ಮಂಗಳವಾರ): ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಆವೇಶ ಪೂಜೆ, ವಿಜಯದಶಮಿ ಮಹಾಪೂಜೆ ಹಾಗೂ ಸಂಜೆ 6 ಗಂಟೆಗೆ ಘಟ ವಿಸರ್ಜನೆ ನೆರವೇರಲಿದೆ.


ಮಹೋತ್ಸವದ ಅಂಗವಾಗಿ ಭಕ್ತಾದಿಗಳು ಪುಷ್ಪ ಪೂಜೆ, ಸರ್ವ ಅಲಂಕಾರ ಸೇವೆ ಹಾಗೂ ವಿಜಯದಶಮಿಯಂದು ವಿಶೇಷ ವಾದ್ಯ ಸೇವೆಯನ್ನು ಸಲ್ಲಿಸಬಹುದಾಗಿದೆ. ಅಲ್ಲದೆ, ಮಹಾ ಅನ್ನದಾನಕ್ಕಾಗಿ ತೆಂಗಿನಕಾಯಿ, ಅಕ್ಕಿ, ಎಣ್ಣೆ, ತುಪ್ಪ ಮತ್ತು ತರಕಾರಿ ಮತ್ತಿತರ ಸಾಮಗ್ರಿಗಳನ್ನು ನೀಡಲು ಇಚ್ಛಿಸುವ ಭಕ್ತರು ನೇರವಾಗಿ ದೇವಸ್ಥಾನವನ್ನು ಅಥವಾ ಮೊಬೈಲ್ ಸಂಖ್ಯೆಗಳಾದ 9820275293, 8971483749 ಮೂಲಕ ಶ್ರೀ ಭಗವತಿ ಸೇವಾ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.



Related posts

ದಿ. ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ (ರಿ) ಮುಂಬಯಿ. ನಾಳೆ (ಸೆ. 16) ವಿಶ್ವಕರ್ಮ ಮಹೋತ್ಸವ.

Mumbai News Desk

ಸೆ. 27, ಭಾಯಂದರ್ ಪೂರ್ವ: ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆ

Mumbai News Desk

ಜ.12. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಿಲಿ ಸಮಿತಿಯ ವಾರ್ಷಿಕೋತ್ಸವ,

Mumbai News Desk

ಮಂಗಳೂರು: ಜುಲೈ 19ರಂದು ಮೂಲತ್ವ ಫೌಂಡೇಶನ್‌ನಿಂದ ‘ಆಟಿಡೊಂಜಿ ದಿನ’ ಮತ್ತು ‘ಆಟಿದ ಮದಿಪು’ ಕಾರ್ಯಕ್ರಮ

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk

ಡೊಂಬಿವಿಲಿ ಶ್ರೀ ಜಗದಂಬಾ ಮಂದಿರ: ಅ. 16 ರಂದು ಚಂಡಿಕಾ ಹೋಮ ಹಾಗೂ ಅನ್ನಸಂತರ್ಪಣೆ

Mumbai News Desk