ಮುಂಬಯಿ, ನ.24: ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಶ್ರೀ ಮಹಾಲಕ್ಷ್ಮೀ ಕಾಲನಿ, ವೀರ ದೇಸಾಯಿ ರೋಡ್ ಅಂಧೇರಿ ಪಶ್ಚಿಮ ಇವರ 38ನೇ ವಾರ್ಷಿಕ ಭಜನಾ ಮಂಗಳೋತ್ಸವವು ನ.28 ಮತ್ತು ನ.29 ,ಶನಿವಾರ ಮತ್ತು ಆದಿತ್ಯವಾರದಂದು ವಿಜೃಂಭಣೆಯಿಂದ ಜರಗಲಿರುವುದು.
ಅಂದಿನ ಕಾರ್ಯಕ್ರಮ: 28.11.26 ಶನಿವಾರ ಬೆಳಿಗ್ಗೆ ಗಂಟೆ 7.00ಕ್ಕೆ ಗಣಹೋಮ, 8.30ಕ್ಕೆ ಪ್ರಸಾದ ವಿತರಣೆ, 29.11.26ನೇ ಆದಿತ್ಯವಾರ ಬೆಳಿಗ್ಗೆ 6.30 ಗಂಟೆಗೆ ಕಲಶಾರೋಹಣ ಮತ್ತು ದೀಪ ಪ್ರಜ್ವಲನೆ, ಬೆಳಿಗ್ಗೆ 7ರಿಂದ 8.00ರ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 8.00ರಿಂದ ಸಂಜೆ 4.00ರ ತನಕ ಅಖಂಡ ಭಜನಾ ಮಂಡಳಿಯವರಿಂದ ಭಜನೆ, 4.00ರಿಂದ 6.00ರ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಸಂಜೆ 6.30ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ. ಆದಿತ್ಯವಾರ ಮಧ್ಯಾಹ್ನ 12.00ರಿಂದ 2.30ರ ತನಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.
ಈ ಪ್ರಯುಕ್ತ ಭಕ್ತಾದಿಗಳು ತಮ್ಮ ಬಂಧು ಬಾಂಧವರ ಹಾಗೂ ಇಷ್ಟ ಮಿತ್ರರೊಂದಿಗೆ ಚಿತ್ತೈಸಿ ಶ್ರೀ ಮಹಾಲಕ್ಷ್ಮೀ ದೇವಿಯ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಸರ್ವ ಸದಸ್ಯರ ಪರವಾಗಿ ಮಂಡಳಿಯ ಟ್ರಸ್ಟಿಗಳು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಭಜನಾ ಮಂಗಳೋತ್ಸವದಂದು ಭಜನಾ ಸೇವೆಯಲ್ಲಿ ಭಾಗವಹಿಸುವ ಭಜನಾ ಮಂಡಳಿಗಳು: ಶ್ರೀ ಮದ್ಭಾರತ ಮಂಡಳಿ ಮತ್ತು ಪಾರಾಣಿಕ ವಾಚಕ ಸಮಿತಿ ಅಂಧೇರಿ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೋರಿವಲಿ, ಶ್ರೀ ಮಹಾವಿಷ್ಣು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಆಯಪ್ಪ ಸೇವಾ ಸಮಿತಿ ಪೋರ್ಟ್ ಮುಂಬಾಯಿ, ಶ್ರೀ ಮೂಕಾಂಬಿಕಾ ಮಕ್ಕಳ ಭಜನಾ ಮಂಡಳಿ ಘನ್ಸೋಲಿ ನವಿ ಮುಂಬಾಯಿ, ಶ್ರೀ ಲಕ್ಷ್ಮೀನಾರಾಯಣ ಪೂಜಾ ಸಮಿತಿ ಮಿರಾರೋಡ್, ಶ್ರೀ ದತ್ತಾತ್ರೇಯ ಮಿತ್ರ ಭಜನಾ ಮಂಡಳಿ ಅಸಲ್ಪ, ಶ್ರೀ ಶನೈಶ್ವರ ದೇವಸ್ಥಾನ ನೇರುಲ್ .












