October 22, 2026
Mumbai News Kannada
ಮುಂಬಯಿ

ಡೊಂಬಿವಲಿ ನವರಾತ್ರೋತ್ಸವ: ಯಕ್ಷಗಾನ ಭಾಗವತ ನಾರಾಯಣ ಪೂಜಾರಿಗೆ ‘ಸಂಸ್ಮರಣ ಪ್ರಶಸ್ತಿ’ ಪ್ರದಾನ



ಚಿತ್ರ: ಸತೀಶ್ ಶೆಟ್ಟಿ, ವರದಿ: ಇನ್ನಂಜೆ ಜಯರಾಮ್

ಡೊಂಬಿವಲಿ: ಇಲ್ಲಿನ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 62ನೇ ವಾರ್ಷಿಕ ನವರಾತ್ರೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ವಿಜೃಂಭಣೆಯಿಂದ ಜರುಗಿತು.

ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಹಾಗೂ ಊರಿನ ನುರಿತ ಕಲಾವಿದರ ಸಂಯೋಜನೆಯಲ್ಲಿ ಪ್ರದರ್ಶನಗೊಂಡ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟದ ನಡುವೆ ಈ ಸಭಾ ಕಲಾಪ ನಡೆಯಿತು.

ಇದೇ ಸಂದರ್ಭದಲ್ಲಿ ಮಂಡಳಿಯ ಸಂಸ್ಥಾಪಕರಾದ ಇನ್ನ ಕುರ್ಕಿಲಬೆಟ್ಟು ಬಾಳಿಕೆ ದಿವಂಗತ ದಾಸು ಬಾಬು ಶೆಟ್ಟಿ ಅವರ ಸ್ಮರಣಾರ್ಥ ನೀಡಲಾಗುವ ‘ಸಂಸ್ಮರಣ ಪ್ರಶಸ್ತಿ–2026’ ಅನ್ನು ಮುಂಬೈನ ಯುವ ಯಕ್ಷಗಾನ ಕಲಾವಿದರು ಹಾಗೂ ಖ್ಯಾತ ಭಾಗವತರಾದ ನಾರಾಯಣ ರುಕ್ಮಯ ಪೂಜಾರಿ ದಂಪತಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ತಾರಾನಾಥ್ ರೈ ಅವರು ಸನ್ಮಾನ ಪತ್ರ ವಾಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣ ಪೂಜಾರಿ ಅವರು, ‘ಯಕ್ಷಗಾನದ ಮೇಲಿನ ಸೆಳೆತ ಹಾಗೂ ಹಿರಿಯರ ನಿರಂತರ ಪ್ರೋತ್ಸಾಹದಿಂದ ಈ ರಂಗದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಗುರುಹಿರಿಯರು ಹಾಗೂ ಕಲಾಭಿಮಾನಿಗಳ ಪ್ರೇರಣೆಯೇ ನನ್ನ ಸಾಧನೆಗೆ ಬಲ ತುಂಬಿದೆ. ಈ ಗೌರವವು ಕಲಾ ಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಳಿಯ ಧರ್ಮದರ್ಶಿ ಅಶೋಕ್ ಡಿ. ಶೆಟ್ಟಿ ಅವರು, ‘ಹಿರಿಯರ ತ್ಯಾಗ, ಕಾರ್ಯಕರ್ತರ ನಿಸ್ವಾರ್ಥ ಸೇವೆ ಹಾಗೂ ಭಕ್ತಾದಿಗಳ ಅಚಲ ನಂಬಿಕೆಯಿಂದಾಗಿ ಉತ್ಸವ ಯಶಸ್ವಿಯಾಗಿ ನೆರವೇರುತ್ತಿದೆ. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕಳೆದ ಆರು ದಶಕಗಳಿಂದ ಎಲ್ಲರ ಸಹಕಾರದಿಂದ ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿವೆ’ ಎಂದರು.

ಬಂಟರ ಸಂಘ ಮುಂಬಯಿ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ದಿವಾಕರ್ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಮಂಡಳಿಯ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳು ಶ್ಲಾಘನೀಯ ಎಂದರು.

ಯಕ್ಷಗಾನ ಬಯಲಾಟದ ಪ್ರಾಯೋಜಕರಾದ ದ್ವಾರಕಾ ಹೋಟೆಲ್‌ನ ಲತಾ ಸಾಧು ಶೆಟ್ಟಿ ಮತ್ತು ಕುಟುಂಬ, ವಿಜಿತ್ ಶೆಟ್ಟಿ ಹಾಗೂ ವೇಣುಗೋಪಾಲ್ ರೈ ಕುಟುಂಬಸ್ಥರನ್ನು ಮಂಡಳಿಯ ವತಿಯಿಂದ ಗೌರವಿಸಲಾಯಿತು. ಕಟೀಲು ಮೇಳದ ಅತಿಥಿ ಕಲಾವಿದನ್ನು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಂಡಳಿಯ ಅಧ್ಯಕ್ಷ ಗೋಪಾಲ್ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲಾಸಿನಿ ಶೆಟ್ಟಿ, ಯುವ ವಿಭಾಗದ ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಡಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಕಲಾಭಿಮಾನಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



Related posts

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ದತ್ತು ಸ್ವೀಕಾರ ಮತ್ತು ದೀಪಾವಳಿ ಆಚರಣೆ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 80% ಫಲಿತಾಂಶ

Mumbai News Desk

ಶ್ರೀನಿವಾಸ ಫೌಂಡೇಶನ್, ಮುಂಬೈ ಹಾಗೂ ವಿಶ್ವ ಗಾಣಿಗರ ಚಾವಡಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 6 6ವಿದ್ಯಾರ್ಥಿಗಳಿಗೆ ₹11 ಲಕ್ಷ ವಿದ್ಯಾರ್ಥಿ ವೇತನ –26 ಬಡ ಕುಟುಂಬಗಳಿಗೆ ಅನ್ನಪೂರ್ಣ ಭಾಗ್ಯ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ 11 ನೇ ವಾರ್ಷಿಕೋತ್ಸವ ಸಂಭ್ರಮ.

Mumbai News Desk

ಶಹಾಡ್‌ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆಯ ಕಾರ್ಯಕ್ರಮ

Mumbai News Desk