
ನಾಡು – ನುಡಿಯ ಸೇವೆಯೊಂದಿಗೆ ಶೈಕ್ಷಣಿಕ ರಂಗದಲ್ಲಿ ಅಪ್ರತಿಮ ಸಾಧನೆಯನ್ನು ಮಾಡುತ್ತಿರುವ ಎಕೈಕ ಕರ್ನಾಟಕ ಸಂಘ- ಸುಕುಮಾರ ಶೆಟ್ಟಿ
ಚಿತ್ರ ವರದಿ : ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಡಿ.2: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷವಾಗಿದೆ ಅದರೆ ನಮ್ಮ ಹಿರಿಯರು ಸ್ಥಾಪಿಸಿದ ಡೊಂಬಿವಲಿ ಕರ್ನಾಟಕ ಸಂಘಕ್ಕೆ 57 ರ ಹರೆಯ, ಪರಿಸರದ ಎಲ್ಲಾ ಸಂಘ- ಸಂಸ್ಥೆಗಳನ್ನು ಒಗ್ಗೂಡಿಸಿ 15 ಯಶಸ್ವಿ ಸರಣಿ ಕಾರ್ಯಕ್ರಮದ ಮೂಲಕ ಅದ್ದೂರಿ ಸುವರ್ಣ ಮಹೋತ್ಸವವನ್ನು ಅಚರಿಸಿದ ಕೀರ್ತಿಗೆ ಭಾಜನವಾದ ಕರ್ನಾಟಕ ಸಂಘ ವಜ್ರ ಮಹೋತ್ಸವದತ್ತ ದಾಪುಗಾಲು ಇಡುತ್ತಿದೆ. ಕರ್ನಾಟಕ ಸಂಘ ಪರಿಸರದ ಸರ್ವ ಸಮುದಾಯದವರಿಗಾಗಿ ಪ್ರತಿ ವರ್ಷ ಅದ್ದೂರಿ ಕ್ರೀಡಾ ಕೂಟವನ್ನು ಅಯೋಜಿಸುವ ಎಕೈಕ ಕನ್ನಡಿಗರ ಸಂಸ್ಥೆ ಎಂದರು ತಪ್ಪಾಗಲಾರದು ನಮ್ಮ ಹಿರಿಯರು ಶಿಕ್ಷಣದಿಂದ ಸಮಾಜವನ್ನು ತಿದ್ದಬಹುದು ಎಂಬ ನಿರ್ಧಾರದಿಂದ ಶಾಲೆ – ಕಾಲೇಜನ್ನು ಸ್ಥಾಪಿಸುವ ಕಾರ್ಯವನ್ನು ಮಾಡಿದ್ದಾರೆ ನಾವು ಗುಣಮಟ್ಟದ ಶಿಕ್ಷಣ ಮತ್ತು ವಾರ್ಷಿಕ ಹತ್ತು ಲಕ್ಷ ರೂಪಾಯಿ ಶೈಕ್ಷಣಿಕ ಸಹಾಯ ನೀಡುವ ಮೂಲಕ ಅವರ ಆಕಾಂಕ್ಷೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಜನ್ಮ ನೀಡಿದ ಜನ್ಮಭೂಮಿ ಜತೆಗೆ ಕರ್ಮಭೂಮಿಯನ್ನು ಪ್ರೀತಿಸುತ್ತಿರುವ ನಾವು ಕಳೆದ ಐವತ್ತು ವರ್ಷಗಳಿಂದ ನಾಡ ಹಬ್ಬವನ್ನು ಅಚರಿಸುತ್ತಿದ್ದು ಅದರೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊರನಾಡಿನಲ್ಲಿ ನಮ್ಮ ಭಾಷೆ, ನಾಡು – ನುಡಿಯ ಸೇವೆಯೊಂದಿಗೆ ಶೈಕ್ಷಣಿಕ ರಂಗದಲ್ಲಿ ಅಪ್ರತಿಮ ಸಾಧನೆಯನ್ನು ಮಾಡುತ್ತಿರುವ ಎಕೈಕ ಕರ್ನಾಟಕ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ಸುಕುಮಾರ ಶೆಟ್ಟಿ ನುಡಿದರು.
ಅವರು ಡಿ.1 ರಂದು ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ ಪರಿಸರದ ಹೋಟೆಲ್ ಶಿವಂ ಇದರ ಸಭಾ ಗೃಹ ದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತಕಲಾ ವಿಭಾಗ ಮತ್ತು ಮಹಿಳಾ ವಿಭಾಗದ ಅಶ್ರಯದಲ್ಲಿ ಜರಗಿದ ನಾಡ ಹಬ್ಬದ ಅಧ್ಯಕ್ಷತೆ ವಹಿಸಿ ಕಿಕ್ಕಿರಿದು ತುಂಬಿದ ಸಭಾಂಗಣವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.




ಸಂಘದ ಕಾರ್ಯಾಧ್ಯಕ್ಷರಾದ ಡಾ.ದಿವಾಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಭಾಷೆ, ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ ನಮ್ಮ ಮಾತೃಭಾಷೆ ಕನ್ನಡವಾದರೂ ನಾವು ಇತರ ಭಾಷೆಯನ್ನು ಗೌರವಿಸುವ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದೇವೆ. ನಮ್ಮ ಹಿರಿಯರು ಕನ್ನಡದ ಸೇವೆಗೈಯ್ಯಲು ನೆಟ್ಟ ಈ ಸಂಸ್ಥೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳು ಸುಲಲಿತವಾಗಿ ನಡೆಯ ಬೇಕೆನ್ನುವ ಉದ್ದೇಶದಿಂದ ನಾಲ್ಕು ವಿಭಾಗಗಳನ್ನು ರಚಿಸಿದ್ದು ಈ ವಿಭಾಗಗಳು ಸಂಘದ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ ಸಂಘ ಸಂಚಾಲಿತ ಮಂಜುನಾಥ ಮಹಾ ವಿದ್ಯಾಲಯದಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲು ಅನುಮತಿ ದೊರೆತ್ತಿದ್ದು ಈ ವಿಭಾಗವನ್ನು ನಾವು ಬರುವ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಿದ್ದೇವೆ ಇದರ ಲಾಭವನ್ನು ಕನ್ನಡಿಗರು ಪಡೆಯ ಬೇಕೆಂದರು.
ಅತಿಥಿ ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷೆ ಮಾತನಾಡುತ್ತಾ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಕ್ಕೆ ನನ್ನನ್ನು ಅವ್ಹಾನಿಸಿ ಸನ್ಮಾನಿಸಿದಕ್ಕೆ ಕೃತಜ್ಞತೆಗಳು ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಕ್ರಮಗಳನ್ನು ಕಂಡು ಅತೀವ ಸಂತೋಷವಾಗಿದೆ ನಿಮ್ಮ ಕಾರ್ಯಕ್ರಮಗಳು ಇತರ ಸಂಘ- ಸಂಸ್ಥೆಗೆ ಮಾದರಿಯಾಗಿದೆ ಎಂದರು.
ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡುತ್ತಾ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಹಾಗೂ ಕನ್ನಡ ನಾಡು- ನುಡಿಯನ್ನು ಪ್ರೀತಿಸ ಬೇಕೆನ್ನುವ ಉದ್ದೇಶ ದಿಂದ ನಾಡಹಬ್ಬ ಕಾರ್ಯಕ್ರಮವನ್ನು ಲಲಿತಕಲಾ ವಿಭಾಗ ಮತ್ತು ಮಹಿಳಾ ವಿಭಾಗ ಜಂಟಿಯಾಗಿ ಅಚರಿಸುತ್ತಿದ್ದು ಈ ಕಾರ್ಯಕ್ರಮ ಕಾರ್ಯಕಾರಿ ಸಮಿತಿಯ ಸಂಪೂರ್ಣ ಸಹಕಾರದಿಂದ ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಅತಿಥಿ ಗಣ್ಯರನ್ನು ಶಾಲು ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು, ಹಾಗೂ ಸ್ಪರ್ಧಾ ತೀರ್ಪುಗಾರರಾದ ಸೀಮಾ ಪ್ರಸಾದ್, ನಿಶಾ ಶೆಟ್ಟಿ, ಸಂಜನಾ ರಾವ್ ಹಾಗೂ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾದ ಜಯ ಸಾಲ್ಯಾನ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು ಹಾಗೂ ಪರಿಸರದ ಸಂಘ ಸಂಸ್ಥೆಗಳನ್ನು ಪ್ರೀತಿ ದ್ಯೋತಕವಾಗಿ ಪುಷ್ಪಗೌರವ ನೀಡಿ ಸತ್ಕರಿಸಲಾಯಿತು.
ಇತ್ತೀಚಿಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಬಹುಮಾನ ವಿತರಿಸಲಾಯಿತು




ಮನೋರಂಜನಾ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳಿಂದ ನೃತ್ಯ ನಡೆಯಿತು, ಕವಯತ್ರಿ ಫ್ರಫುಲ್ಲಾ ಶೆಟ್ಟಿ ಪಡುಕುಡೂರು ಇವರಿಂದ ಕನ್ನಡ ಭಾಷೆಯ ಸಿರಿವಂತಿಕೆಯನ್ನು ಸಾರುವ ಕವಿತೆ ಹಾಡಿದರು, ಕರ್ನಾಟಕ ಸಂಘದ ಮಹಿಳಾ ವಿಭಾಗದ ಮಹಿಳೆಯರಿಂದ ಸಮೂಹ ಗೀತೆ ನಡೆಯಿತು ಹಾಗೂ ಸಮೂಹ ನೃತ್ಯ ಸ್ಪರ್ಧೆಯು ನಡೆಯಿತು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 20000/ ಸಾವಿರ ರೂಪಾಯಿ ಮತ್ತು ಫಲಕ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಮಿತಿ, ದ್ವೀತಿಯ ಬಹುಮಾನ 15000/ ಸಾವಿರ ರೂಪಾಯಿ ಮತ್ತು ಫಲಕ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ತೃತೀಯ ಬಹುಮಾನ 10000/ ಸಾವಿರ ರೂಪಾಯಿ ಮತ್ತು ಫಲಕ ವರ್ತಕ ನಗರ ಕನ್ನಡ ಸಂಘ ಥಾಣೆ ಪಡೆಯಿತು.
ರಮೇಶ್ ಶೆಟ್ಟಿ ಮತ್ತು ಯೋಗಿನಿ ಎಸ್. ಶೆಟ್ಟಿ ಅತಿಥಿ ಗಣ್ಯರನ್ನು ಪರಿಚಯಿಸಿದರು.
ಚಿತ್ರಕಲಾ ಸ್ಪರ್ಧೆಯ ವಿಜೇತರ ಯಾದಿಯನ್ನು ಅಶಾ ಎಲ್. ಶೆಟ್ಟಿ ಹಾಗೂ ಸಮೂಹ ನೃತ್ಯ ಸ್ಪರ್ಧೆಯ ವಿಜೇತರ ಯಾದಿಯನ್ನು ಸುಷ್ಮಾ ಡಿ. ಶೆಟ್ಟಿ ಓದಿದರು.
ಅರತಿ ರೈ ಮತ್ತು ಹೇಮಾ ಹೆಗ್ಗಡೆಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ತಜ್ವಲಿಸಿ, ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಗೈದು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ವೇದಿಕೆಯ ಮೇಲೆ ಸುಕುಮಾರ ಎನ್. ಶೆಟ್ಟಿ, ಡಾ.ದಿವಾಕರ ಟಿ. ಶೆಟ್ಟಿ ಇಂದ್ರಾಳಿ, ಮಧುಸೂದನ್ ಟಿ.ಅರ್, ಸುಜಾತ ಅರ್. ಶೆಟ್ಟಿ, ಲೋಕನಾಥ್ ಶೆಟ್ಟಿ, ದೇವದಾಸ್ ಕುಲಾಲ್, ಪ್ರೋ.ಅಜಿತ್ ಉಮ್ರಾಣಿ, ತಾರನಾಥ ಅಮೀನ್, ವಿಮಲಾ ವಿ. ಶೆಟ್ಟಿ, ಸುಷ್ಮಾ ಡಿ. ಶೆಟ್ಟಿ, ಅಶಾ ಎಲ್. ಶೆಟ್ಟಿ, ರಮೇಶ್ ಅಚ್ಚಣ್ಣ ಶೆಟ್ಟಿ, ಮಾಧುರೀಕಾ ಬಂಗೇರಾ, ಉಪಸ್ಥಿತರಿದ್ದರು
ನೃತ್ಯ ಕಾರ್ಯಕ್ರಮವನ್ನು ಮಾಧುರೀಕಾ ಬಂಗೇರಾ ನಿರೂಪಿಸಿದರೆ ಸಭಾ ಕಾರ್ಯಕ್ರಮವನ್ನು ವಸಂತ ಸುವರ್ಣ ನಿರೂಪಿಸಿ ವಂದಿಸಿದರು
ಮುಖ್ಯ ಅತಿಥಿಯ ಅನಿಸಿಕೆ :-
ಕನ್ನಡದ ನಾಡ ಹಬ್ಬ ಕೇವಲ ಒಂದು ತಿಂಗಳಿಗೆ ಸೀಮಿತವಾಗಿರದೆ ನಿತ್ಯ ನಿರಂತರ ನಡೆಯುತ್ತಿರ ಬೇಕು ಮಹಾನಗರದಲ್ಲಿ ಜಾತೀಯ ಸಂಘ, ಸಂಸ್ಥೆಯ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಸೇರುವುದನ್ನು ಕಂಡಿದ್ದೇನೆ ಅದರೆ ಕನ್ನಡದ ಕಾರ್ಯಕ್ರಮಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ ಅಭಿಮಾನಿಗಳನ್ನು ಪ್ರಪ್ರಥಮವಾಗಿ ನೋಡುತ್ತಿದ್ದೇನೆ ಮೈಸೂರು ರಾಜ್ಯದ ಹೆಸರಿನಿಂದ 1973 ರಲ್ಲಿ ಕರ್ನಾಟಕ ಹೆಸರನ್ನು ಪಡೆಯಿತು ನಮ್ಮ ನಾಡ ಗೀತೆಯನ್ನು ಮನನ ಮಾಡಿಕೊಂಡಾಗ ಕನ್ನಡ ನಾಡಿನ ಕಿರು ಪರಿಚಯವಾಗುತ್ತದೆ. ಕರ್ನಾಟಕ ರಾಜ್ಯ ಸಂಪೂರ್ಣ ದೇಶಕ್ಕೆ ಮಾದರಿಯಾದ ರಾಜ್ಯ ಇತಿಹಾಸಿಕಕ ಪರಂಪರೆ.. ಸಾಹಿತ್ಯ, ಸಂಸ್ಕೃತಿ, ಕಲೆಗಳ ಬೀಡು ಮನ ಮನದಲ್ಲಿ ಮನೆ ಮನೆಯಲ್ಲಿ ಕನ್ನಡ ಭಾಷೆಯನ್ನು ಬಳಸಿದಾಗ ಮಾತ್ರ ಭಾಷೆ ಉಳಿದು ಬೆಳೆಯ ಬಹುದು ನಾವು ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನು ಮಾಡಬಾರದು ನಮ್ಮ ರಾಷ್ಟ್ರಧ್ವಜ ತಯಾರಿಕೆಯ ಕೇಂದ್ರ , ಚುಣಾವಣೆಯಲ್ಲಿ ಬಳಸುವ ಇಂಕು ಕರ್ನಾಟದಲ್ಲಿ ತಯಾರಾಗುತ್ತಿದೆ, ಶಿಲ್ಪಕಲೆಯ ಬೀಡು ಕರ್ನಾಟಕ, ಸುಲ್ತಾನರ ಅಟ್ಟಹಾಸವನ್ನು ಮೆಟ್ಟಿ ನಿಂತವರಲ್ಲಿ ಕರಳದಿಯ ಚೆನ್ನಮ್ಮ, ಬೆಳವಡಿ ಮಲ್ಲಮ, ರಾಣಿ ಅಬ್ಬಕ್ಕ, ಚೆನ್ನ ಬೈರಂದೇವಿ, ಸಂಗೊಳ್ಳಿ ರಾಯಣ್ಣರನ್ನು ಮರೆಯಲು ಸಾಧ್ಯವಿಲ್ಲ, ಬೆಳಗಾವಿಯ ಕುಮನದ, ಕೊಲಾರದ ಮೊಸರು, ದಾರವಾಡದ ಪೇಡಾ, ದಾವಣಗೆರೆಯ ಬೆಣ್ಣೆ ದೋಸೆ, ಮೈಸೂರುಪಾಕ್, ತಿಪಟೂರಿನ ತೆಂಗು ಇವೆಲ್ಲ ನಾಡಿನ ಕೆಲವು ವೈಶಿಷ್ಟ್ಯಗಳು ನಮ್ಮಲ್ಲಿರುವ ನದಿಗಳು, ಧಾರ್ಮಿಕ ಕ್ಷೇತ್ರಗಳು ಇತರ ರಾಜ್ಯಕ್ಕೆ ಮಾದರಿ—( ಮುಖ್ಯ ಅತಿಥಿ ಮಧುಸೂದನ್ ಟಿ.ಆರ್.)
ತೀರ್ಪುಗಾರರ ಅನಿಸಿಕೆ:-
ಸಮೂಹ ನೃತ್ಯದಲ್ಲಿ ಎಲ್ಲಾ ತಂಡಗಳು ಉತ್ತಮವಾಗಿ ಪ್ರದರ್ಶನ ನೀಡಿದೆ. ಈ ವೇದಿಕೆಯಲ್ಲಿ ವಯಸ್ಸಿನ ಅಂತರವನ್ನು ಮೀರಿ ನೃತ್ಯ ನಡೆದಿದೆ. ಇಂತಹ ಕಾರ್ಯಕ್ರಮದಿಂದ ಒಳ್ಳೆಯ ಪ್ರತಿಭೆಗಳು ಕಾಣಸಿಗುತ್ತದೆ — ಸೀಮಾ ಪ್ರಸಾದ್ ( ತೀರ್ಪುಗಾರರು)