



ಜಗತ್ತಿನಾದ್ಯಂತದ ಬಂಟ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಕ್ರಿಕೆಟ್ ಪ್ರತಿಭಾವಂತರನ್ನು ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ತೃತೀಯ ವರ್ಷದ ಸರ್ವ ಬಂಟರ ಕ್ರಿಕೆಟ್ ಕ್ರೀಡಾ ಕೂಟವು 2024 ಡಿಸೆಂಬರ 25 ರಂದು ಆರಂಭಗೊಂಡು ಡಿಸೆಂಬರ 29 ರಂದು ಕಾಂದಿವಲಿ ಪೊಯಿಸರ್ ಜಿಮ್ಖಾನ ಮೈದಾನದಲ್ಲಿ ಅದ್ದೂರಿಯಾಗಿಸಮಾಪಣೆಗೊಂಡಿತು.
ಜಗತ್ತಿನಾದ್ಯಂತ ಸೇರಿರುವ ಬಂಟ ಸಮುದಾಯದ ಒಟ್ಟು 5 ತಂಡಗಳು ಭಾಗವಹಿಸಿ, 14 ಪಂದ್ಯಗಳು 2 ಮೈದಾನದಲ್ಲಿ ನಡೆದಿದ್ದು ಅಂತಿಮವಾಗಿ ಸುಧೇಶ್ ಶೆಟ್ಟಿ ತೆಳ್ಳಾರ್ ಮತ್ತು ರಾಜೇಶ್ ಶೆಟ್ಟಿ ತೆಳ್ಳಾರ್ ನೇತೃತ್ವದ ಜಲದುರ್ಗಾ ತಂಡವು ಬಾಲಕೃಷ್ಣ ಶೆಟ್ಟಿ ಹಾಗು ದಿನೇಶ ಶೆಟ್ಟಿ ನೇತೃತ್ವದ ತುಳುನಾಡ ವಾರಿಯರಸ್ ತಂಡವನ್ನು ಸೋಲಿಸಿ ಟ್ರೋಫ಼ಿಯನ್ನು ತನ್ನದಾಗಿಕೊಂಡಿತು.
ದ್ವಿತೀಯ ರನ್ನರ್ ಅಪ್ ಆಗಿ ಪಾಲಿ ಬೀಚ್ ರೆಸಾರ್ಟ್ ತಂಡವು ಆಯ್ಕೆಗೊಂಡಿತು.
ಉದ್ಘಾಟನಾ ಸಮಾರಂಭವು ಡಾ.ಪಿ ವಿ ಶೆಟ್ಟಿ ಯವರಿಂದ ನಡೆಯಿತು.
21 ವರ್ಷ, 26 ವರ್ಷ ಹಾಗೂ 26 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯ ಅತ್ಯುತ್ತಮ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ಡಾl ಟಿ ವಿ. ಶೆಟ್ಟಿ (ಪಯ್ಯಾಡೆ ಸ್ಪೋರ್ಟ್ಸ್ ಕ್ಲಬ್) ಇವರ ವತಿಯಿಂದ ವಿತರಿಸಲಾಯಿತು. ಅಂತೆಯೇ ತುಂಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾl ಸತೀಶ್ ಶೆಟ್ಟಿಯವರು ಕ್ರೀಡಾಕೂಟದ ಅವಧಿಯಲ್ಲಿ ಆರೋಗ್ಯ ಪಾಲುದಾರರಾಗಿ ಆಟಗಾರರಿಗೆ ಸಹಕರಿಸಿದರು.
ಗೋಪಾಲ ಶೆಟ್ಟಿ (ಮಾಜಿ ಸಂಸದ), ಮುಂಡಪ್ಪ ಪಯ್ಯಾಡೆ(ಹೊಟೇಲ್ ಉದ್ಯಮಿ), ರವೀಂದ್ರ S. ಶೆಟ್ಟಿ (ಹೊಟೇಲ್ ಉದ್ಯಮಿ), ಹರೀಶ್ ಶೆಟ್ಟಿ ಎರ್ಮಾಳು (ಹೊಟೇಲ್ ಉದ್ಯಮಿ), ಸುಚರಿತ ಶೆಟ್ಟಿ (ಕ್ರೀಡಾಪಟು),ಹರಿಣಿ ಶೆಟ್ಟಿ (ಕ್ರೀಡಾಪಟು), ದಯಾನಂದ ಶೆಟ್ಟಿ (N.L. GROUD), ಪ್ರೇಮನಾಥ್ ಶೆಟ್ಟಿ (ಕಾರ್ಯಧ್ಯಕ್ಷ ಜೋಗೇಶ್ವರಿ – ದಹಿಸರ್ ಸಮಿತಿ ) ಹಾಗೂ ಇತರ ಸದಸ್ಯರು,ಸಂಜೀವ ಮಹಾಡ್ಕರ್ (M.C.A.),ಶಹಲಕಮಹಾಡ್ಕರ್ (M.C.A.), ಕರುಣಾಕರ್ ಶೆಟ್ಟಿ (ಅಧ್ಯಕ್ಷ, ಪೊಯಿಸರ್ ಜಿಮ್ಖಾನ), ತಂಡಗಳ ಮಾಲಕರು ಹಾಗೂ ನೆರೆದಿದ್ದ ಪ್ರೇಕ್ಷಕರು ಕ್ರೀಡಾಳುಗಳನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದರು.