
ಜೋಗೇಶ್ವರಿ ಪೂರ್ವ ಕೃಷ್ಣ ನಗರದ ,ಇತಿಹಾಸ ಪ್ರಸಿದ್ಧ ಗುಂಫ ತೇಕ್ಡಿ ಬಳಿಯ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ವಾರ್ಷಿಕ ಉತ್ಸವವು ಫೆಬ್ರವರಿ 6ರಂದು,ಗುರುವಾರ ದೇವಸ್ಥಾನದ ಪ್ರಧಾನ ಅರ್ಚಕರಾದ ಪಾದೂರು ನರಹರಿ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಪೂಜಾ ವಿಧಿಗಳ ವಿವರ :
ಪ್ರಾತಕಾಲ 8:30 ರಿಂದ ಪ್ರಾರ್ಥನೆ, ಸಂಕಲ್ಪ, ಶುದ್ಧ, ಪುಣ್ಯಾಹ, ಎಲ್ಲಾ ಪರಿವಾರ ದೇವರುಗಳಿಗೆ ಪಂಚಾಮೃತ ಸಹಿತ ನವಕ ಕಲಶ ಅಭಿಷೇಕ, ಪ್ರಸನ್ನ ಪೂಜೆ, ಶ್ರೀ ದೇವರಿಗೆ ಪಂಚಾಮೃತ ಸಹಿತ 25 ಕಲಶ ಅಭಿಷೇಕ, ಪ್ರಧಾನ ಹೋಮ, ಪ್ರಸನ್ನ ಪೂಜೆ , ಮಹಾಪೂಜೆ, ಮಹಾಪ್ರಸಾದ, ಅನ್ನಸಂತರ್ಪಣೆ.
ಸಾಯಂಕಾಲ ಗಂಟೆ 6ಕ್ಕೆ ಶ್ರೀದೇವರ ಉತ್ಸವ ಬಲಿ
ರಾತ್ರಿ 8 ರಿಂದ ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ
ಆ ಪ್ರಯುಕ್ತ ಸದ್ಭಕ್ತರು, ಬಂಧು – ಮಿತ್ರರೊಡಗೂಡಿ ಚಿತ್ತೈಸಿ ಶ್ರೀದೇವಿ ಜಗದಂಬೆ ಹಾಗೂ ಪರಿವಾರ ದೇವತೆಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ, ಆಡಳಿತ ಸಮಿತಿಯ ಅಧ್ಯಕ್ಷ ಸಂಜೀವ ಪಿ ಪೂಜಾರಿ, ಉಪಾಧ್ಯಕ್ಷ ಎಚ್ ಬಾಬು ಪೂಜಾರಿ, ಗೌರವ ಕಾರ್ಯದರ್ಶಿ ಶೇಖರ್ ಕರ್ಕೇರ, ಗೌರವ ಕೋಶಾಧಿಕಾರಿ ಡಿ ಟಿ ಕುಂದರ್, ಟ್ರಸ್ಟಿಗಳಾದ ಎಂ ಸಿ ಸುವರ್ಣ, ಜಿ ಟಿ ಆಚಾರ್ಯ, ಸುಂದರ್ ಸಿ ಪೂಜಾರಿ, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಸಂತೋಷ್ ಜಿ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ದೇವದಾಸ್ ಎಸ್ ಸುವರ್ಣ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವನಿತಾ ಜಿ ಶೆಟ್ಟಿ, ಉಪಕಾರ್ಯಧ್ಯಕ್ಷೆ ಸರಸ್ವತಿ ಪೂಜಾರಿ, ಸಂಚಾಲಕಿ ಕಲಾವತಿ ಡಿ ಪೂಜಾರಿ, ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಕೋಟ್ಯಾನ್ ಪಡುಬಿದ್ರಿ, ಉಪಕಾರ್ಯಧ್ಯಕ್ಷ ಸಂತೋಷ್ ಪೂಜಾರಿ, ಸಂಚಾಲಕ ಶಿವಕುಮಾರ್ ಪೂಜಾರಿ ವಿನಂತಿಸಿದ್ದಾರೆ.