April 1, 2025
ಕ್ರೀಡೆ

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಪ್ರಿನ್ಸೆಸ್ ಆಫ್ ಕರಾವಳಿ 2025 ಆಗಿ ವಿಯಾ ಸಾಯಿ ಆಯ್ಕೆ

ಮೂಡುಬಿದಿರೆಯ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊ ನೇತೃತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ 22 ಫೆಬ್ರವರಿ 2025 ರಂದು ಆಯೋಜಿಸಿದ್ದ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025 ಸ್ಪರ್ಧೆಯಲ್ಲಿ 60 ಮಕ್ಕಳು ಭಾಗವಹಿಸಿದ್ದು, ಒಟ್ಟು 65,555 ರೂ. ಬಹುಮಾನ ನೀಡಲಾಗಿದೆ ಎಂದು ಸ್ಪರ್ಧೆಯ ತೀರ್ಪುಗಾರ ಸಂದೀಪ್ ಶೆಟ್ಟಿ ಮಂಗಳೂರು ತಿಳಿಸಿದರು.
7ರಿಂದ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಿನ್ಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಎಸ್‌ಡಿಎಂ ಶಾಲೆಯ ಶೌರ್ಯ ರಾವ್, ಬಾಲಕಿಯರ ವಿಭಾಗದಲ್ಲಿ ಪ್ರಿನ್ಸೆಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಕಾರ್ಮೆಲ್ ಸಿಬಿಎಸ್‌ಇ ಶಾಲೆಯ ವಿಯಾ ಸಾಯಿ, ಸ್ಟಾರ್ ಕಿಡ್ ಕರಾವಳಿ 2025 ವಿನ್ನರ್ ಆಗಿ ಕುಳಾಯಿ ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಐಶಾನಿ ಶೆಟ್ಟಿ ಆಯ್ಕೆಯಾಗಿದ್ದಾರೆ .


11ರಿಂದ 17 ವರ್ಷದೊಳಗಿನ ಹುಡುಗರ ವಿಭಾಗದ ಮಿಸ್ಟರ್ ಟೀನ್ ಕರಾವಳಿ 2025 ವಿನ್ನರ್ ಆಗಿ ಕಿನ್ನಿಗೋಳಿ ಸೈಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್‌ನ ಸಾನ್ವಿತ್ ಕುಲಾಲ್, ಹುಡುಗಿಯರ ವಿಭಾಗದಲ್ಲಿ ಮಿಸ್ ಟೀನ್ ಕರಾವಳಿ 2025 ವಿನ್ನರ್ ಆಗಿ ಮೂಡುಬಿದರೆ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ಧನ್ವಿ ಶೆಟ್ಟಿ, ಮಿಸ್ ಕ್ವೀನ್ ಕರಾವಳಿ 2025 ವಿನ್ನರ್ ಆಗಿ ಉಡುಪಿ ಹಿರಿಯಡ್ಕ ಗ್ರೀನ್ ಪಾರ್ಕ್ ಶಾಲೆಯ ಪೂರ್ವಿ ಕುಲಾಲ್, ಪಾಪ್ಯುಲರ್ ಐಕಾನ್ ಕರಾವಳಿ 2025 ವಿನ್ನರ್ ಆಗಿ ಆಲಂಗಾರು ಸೈಂಟ್ ಥೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಾಧ್ವಿ ಶೆಟ್ಟಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ ಎಂದರು.
ಸ್ವಾಮೀಸ್ ಬೆದ್ರ ಕ್ಲಾಸಿಕ್ 2025 ಮಿ. ದಕ್ಷಿಣ ಕನ್ನಡ ದೇಹದಾರ್ಢ್ಯ ಸ್ಪರ್ಧೆಯಲ್ಲಿ 100 ಸ್ಪರ್ಧಿಗಳು ಭಾಗವಹಿಸಿದ್ದು, ವಿಜೇತರಿಗೆ ಒಟ್ಟು 3 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ ಎಂದರು.
ಸಂಸ್ಥೆಯ ಸ್ವಾಮಿಪ್ರಸಾದ್, ಎಂ.ಜೆ. ಅನೀಶ್, ಸ್ಪರ್ಧೆಯಲ್ಲಿ ವಿಜೇತ ಮಕ್ಕ ಮಕ್ಕಳು ಉಪಸ್ಥಿತರಿದ್ದರು.

Related posts

ಡಬ್ಲ್ಯೂ ಐ ಎಫ್ ಎ ಅಂತರ್ ಜಿಲ್ಲಾ ಸಬ್ ಜ್ಯೂನಿಯರ್ ಫುಟ್ಬಾಲ್ ಪಂದ್ಯಾಟ, ಸಮರ್ಥ್ ರೈ ಅವರ ಅದ್ಬುತ ಆಟದಿಂದ ಮುಂಬಯಿ ತಂಡಕ್ಕೆ ಜಯ.

Mumbai News Desk

ಉಷಾ ಶ್ರೀಧರ ಶೆಟ್ಟಿ ಇವರ ನಾಯಕತ್ವ ತಂಡಕ್ಕೆ  ಟ್ರೋಪಿ ಯೊಂದಿಗೆ 50,000 ನಗದ ಬಹುಮಾನ

Mumbai News Desk

ಸಿಂಹ ಘರ್ಜನೆ 2025 : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮಂಗಳಾದೇವಿ ಕ್ಲಬ್

Mumbai News Desk

ದುಬೈಯಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನ್ಷಿಪ್ ನಲ್ಲಿ 2 ಬೆಳ್ಳಿ ,1 ಕಂಚಿನ ಪದಕ ಪಡೆದ ಜಯಂತಿ ದೇವಾಡಿಗ.

Mumbai News Desk

N.E.S ಸೋಸೈಟಿಯ ಅಭಿನವ ಪಬ್ಲಿಕ್ ಸ್ಕೂಲ್ (CBSE Board) ನ ವಾರ್ಷಿಕ ಕ್ರೀಡಾಕೂಟ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ದಂಗಲ್ ಕ್ರೀಡಾ ಕೂಟ, : ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವುದು ಮುಖ್ಯ- ಡ. ದಿವಾಕರ ಶೆಟ್ಟಿ ಇಂದ್ರಾಳಿ

Mumbai News Desk