
ಮುಂಬಯಿ, : ಮೀರಾಭಾಯಿಂದರ್ ಪರಿಸರದಲ್ಲಿ ಕಾರ್ಯರೂಪದಲ್ಲಿರುವ ತುಳುನಾಡ ಸೇವಾ ಸಮಾಜದ ವತಿಯಿಂದ ಸಂಸ್ಥಾಪಕ ದಿನಾಚರಣೆ, ವಿಶ್ವಮಹಿಳಾ ದಿನಾಚರಣೆ ಹಾಗೂ ಹಳದಿಕುಂಕುಮ ಕಾರ್ಯಕ್ರಮವು ಮಾ. 16 ರಂದು ಸಾಯಂಕಾಲ ಗಂಟೆ 3ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೀರಾರೋಡ್ ಪೂರ್ವದ ಸಾಯಿಬಾಬಾ ನಗರದಲ್ಲಿರುವ ಸೈಂಟ್ ಥಾಮಸ್ ಚರ್ಚಿನ ಸಭಾಗೃಹದಲ್ಲಿ ನಡೆಯಲಿದೆ.
ಅಂದಿನ ಕಾರ್ಯಕ್ರಮಗಳು ಭಾಯಂದರ್ ಸಾಯಿಬಾಬಾ ಆಸ್ಪತ್ರೆಯ ಮುಖ್ಯ ಆಡಳಿತ ನಿರ್ದೇಶಕರು ಡಾ. ಎನ್. ಎ. ಹೆಗ್ಡೆಯವರ ಅದ್ಯಕ್ಷತೆಯಲ್ಲಿ ನಡೆಯಲಿದ್ದು ಪರಿಸರದ ಶಾಸಕ ನರೇಂದ್ರ ಎಲ್. ಮೆಹ್ತಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೀರಾಭಾಯಂದರ್ ಮಹಾನಗರಪಾಲಿಕೆಯ ಮಾಜಿ ನಗರಸೇವಕ ಅರವಿಂದ್ ಎ. ಶೆಟ್ಟಿ, ಉದ್ಯಮಿ ಸಂತೋಷ್ ಪುತ್ರನ್, ರೈ ಸುಮತಿ ಎಜ್ಯುಕೇಶನ್ ಟ್ರಸ್ಟಿನ ಕಾರ್ಯಾದ್ಯಕ್ಷ ಅರುಣೋದಯ ಎಸ್. ರೈ, ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ,ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಉಪಾಧ್ಯಕ್ಷೆ ಜಯಂತಿ ವರದ್ ಉಳ್ಳಾಲ್, ಸಮಾಜ ಸೇವಕ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಉದ್ಯಮಿ ಮೋಹನ್ ಕೆ. ಶೆಟ್ಟಿ, ಭಾರತ್ ಬ್ಯಾಂಕಿನ ನಿರ್ದೇಶಕ ನರೇಶ್ ಕೆ. ಪೂಜಾರಿ ಹಾಗೂ ಬಿವಿಂಡಿ ಸುಮಂಗಲಾ ಮೆಷಿನರೀಸ್ ನ ಮುಖ್ಯ ಆಡಳಿತ ನಿರ್ದೇಶಕ ನಾರಾಯಣ ಆರ್ ಪೂಜಾರಿಯವರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಮಾಜಸೇವೆಯಲ್ಲಿ ನಿರತರಾಗಿರುವ ಸಂಪತ್ ಶೆಟ್ಟಿ ಪಂಜದಗುತ್ತು, ನಾರಾಯಣ ಶೆಟ್ಟಿ, ಶಾಂತಾ ಆಚಾರ್ಯ ಹಾಗೂ ಭಾರತಿ ಎ. ಅಂಚನ್ ರವರನ್ನು ಸನ್ಮಾನಿಸಲಾಗುವುದು.
ಆರಂಭದಲ್ಲಿ ಸಂಸ್ಥೆಯ ಸದಸ್ಯೆಯರಿಂದ ಭಜನೆ, ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ಕಾರ್ಯಕ್ರಮ,ಕಿರು ನಾಟಕ, ಬಿಲ್ಲವರ ಅಸೋಸಿಯೇಷನ್ ಮೀರಾರೋಡ್ ಸ್ಥಳೀಯ ಕಚೇರಿಯ ಸದಸ್ಯರಿಂದ ನಾರಾಯಣ ಗುರುಸ್ವಾಮಿ ನೃತ್ಯರೂಪಕ ಸಾದರಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳುಕನ್ನಡಿಗರು ಉಪಸ್ಥಿತರಿದ್ದು ಸಹಕರಿಸಬೇಕಾಗಿ ಸಂಸ್ಥೆಯ ಗೌರವಾದ್ಯಕ್ಷ ಶಂಭು ಕೆ. ಶೆಟ್ಟಿ, ಅದ್ಯಕ್ಷ ಡಾ. ರವಿರಾಜ್ ಸುವರ್ಣ, ಸಂಚಾಲಕರಾದ ಜಯಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಶೋಭಾ ವಿ. ಉಡುಪ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಉಪಾದ್ಯಕ್ಷರುಗಳಾದ ವಸಂತ್ ಶೆಟ್ಟಿ ಮತ್ತು ನಾರಾಯಣ ಪುತ್ತಿಗೆ, ಜೊತೆ ಕಾರ್ಯದರ್ಶಿ ಶೈಲೇಶ್ ಉದ್ಯಾವರ,ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಅಮಿತಾ ಎಸ್. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ್ ಕಾಪು, ಚಂದ್ರಹಾಸ್ ಶೆಟ್ಟಿ, ವಿಜಯ ಶೆಟ್ಟಿ ಹೊಸಾಡು, ರಾಮಚಂದ್ರ ಉಚ್ಚಿಲ್, ಜೋಗ ಬಿಲ್ಲವ, ಪುರುಷೋತ್ತಮ್ ಶೆಟ್ಟಿ, ಗಂಗಾಧರ್ ಶೇರಿಗಾರ್, ಪುರುಷೋತ್ತಮ್ ಕೋಟ್ಯಾನ್, ಸುನಿತಾ ಸುವರ್ಣ, ಕುಶಲ ಶೆಟ್ಟಿ, ವಸಂತಿ ಶೆಟ್ಟಿ, ಜಯಲಕ್ಷ್ಮಿ ಸುವರ್ಣ, ವಾಣಿ ಶೆಟ್ಟಿ, ಪ್ರತಿಮಾ ಬಂಗೇರ,ರೇಖಾ ಪೂಜಾರಿ, ಸುಲೋಚನಾ ಮಾಬಿಯಾನ್, ಅನುಪಮಾ ಅಂಚನ್, ಶಾಂತ ಆಚಾರ್ಯ, ಶಾಲಿನಿ ಶೆಟ್ಟಿ, ಸಂಜೀವಿನಿ ಪೂಜಾರಿ, ಜಯಲಕ್ಷ್ಮಿ ಸಾಲ್ಯಾನ್, ರಸಿಕಾ ಮೂಲ್ಯ, ಅಶಾ ಪೂಜಾರಿ, ಶೈಲಾ ಹೆಗ್ಡೆ, ನಯನಾ ಪೂಜಾರಿ, ರೇಷ್ಮಾ ಕೋಟ್ಯಾನ್ ಹಾಗೂ ಶಾಂತಿ ಶೆಟ್ಟಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.