April 1, 2025
ಕ್ರೀಡೆ

27ನೇ ರಮಾನಾಥ ಪಯ್ಯಡೆ ಸ್ಮಾರಕ ಕಾಲ್ಚೆಂಡು ಲೀಗ್ ಟೂರ್ನಮೆಂಟ್ : ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಭರ್ಜರಿ ಜಯ

ಮುಂಬಯಿ : ಮಾರ್ಚ್ 8 ರಂದು ಚರ್ಚ್‌ಗೇಟ್ ನ ಕರ್ನಾಟಕ ಸ್ಪೋರ್ಟ್ಸ ಮೈದಾನದಲ್ಲಿ ನಡೆದ, ಕರ್ನಾಟಕ ಸ್ಪೊರ್ಟಿಂಗ್ ಅಸೋಷಿಯೇಶನ್ ಆಯೋಜಿಸಿದ 27ನೇ ರಮಾನಾಥ ಪಯ್ಯಡೆ ಸ್ಮಾರಕ ಕಾಲ್ಚೆಂಡು ಲೀಗ್ ಟೂರ್ನಮೆಂಟ್ ನಲ್ಲಿ ಮಹಾನಗರದ ಹಿರಿಯ ಕ್ರೀಡಾ ತಂಡ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಕರ್ನಾಟಕ ಸ್ಪೊರ್ಟಿಂಗ್ ಕ್ಲಬ್ ಭರ್ಜರಿ ಜಯಗಳಿಸಿದೆ. ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕರ್ನಾಟಕ ಸ್ಪೊರ್ಟಿಂಗ್ ಅಸೋಷಿಯೇಶನ್ ಪೈನಲ್ ಪ್ರವೇಶಿಸಿದ್ದು ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಗೆ ಇದು ಒಂದು ಐತಿಹಾಸಿಕ ವಿಜಯೋತ್ಸವವಾಗಿದೆ.


ಕರ್ನಾಟಕ ಸ್ಪೊರ್ಟಿಂಗ್ ಅಸೋಷಿಯೇಶನ್ ಅಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿ, ಕಾರ್ಯದರ್ಶಿ ಜಯ ಶೆಟ್ಟಿ, ಸದಸ್ಯರು ಮತ್ತು ಇತರ ಗಣ್ಯರು, ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಉಪಾಧ್ಯಕ್ಷ ಚಂದ್ರಕಾತ ಎಸ್ ಉಚ್ಚಿಲ್, ದರ್ಶನ್ ಕೆ ಬಟ್ಟಪ್ಪಾಡಿ, ಗುರುದತ್ತ್ ಎಸ್ ಉಚ್ಚಿಲ್ ಮತ್ತಿತರ ಪದಾಧಿಕಾರಿಗಳೂ ಸದಸ್ಯರುಗಳು ಉಪಸ್ಥಿತರಿದ್ದರು.


ಈಗಾಗಲೇ ಕಳೆದ 80 ವರ್ಷಗಳಿಗೂ ಅಧಿಕ ಕಾಲ ಕ್ರೀಡಾ ಕ್ಷೇತ್ರದಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಬಂದಿರುವ ಮಹಾನಗರದಲ್ಲಿ ನೆಲಿಸಿರುವ ಕರಾವಳಿಯ ಗಡಿನಾಡಿನ ಮೊಯಾ (ಬೋವಿ) ಸಮುದಾಯದ ಈ ತಂಡವು ಕ್ರೀಡಾ ಕ್ಷೇತ್ರದಲ್ಲಿ ಎಲ್ಲೆಡೆ ಮಿಂಚಿದ್ದು 1969 ರಲ್ಲಿ ಪುತ್ಲಿ ಕಪ್ ಗೆಡ್ಡು ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದೆ. ಆ ನಂತರವೂ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನಿರಂತರವಾಗಿ ಗೆಲುವನ್ನು ಸಾದಿಸಿದ್ದು ಇದೀಗ ಇದರ ಸಾಧನೆಗೆ ಮತ್ತೊಂದು ಕಿರೀಟವನ್ನು ಧರಿಸಿದೆ. ಆರ್ಯನ್ ಎಂ. ಸೋಮೇಶ್ವರ್ ಜೈಹಿಂದ್ ತಂಡದ ಗೋಲ್ ಕೀಪರ್ ಆಗಿದ್ದರು.
ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಹಾಗು ಪ್ರತ್ಯಕ್ಷ ಹಾಗೂ ಪ್ರರೋಕ್ಷವಾಗಿ ಸಹಕರಿದಿದ ಎಲ್ಲರಿಗೂ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಕಾರ್ಯಕಾರಿ ಸಮಿತಿಯು ಅಭಿನಂದನೆ ಸಲ್ಲಿಸಿದೆ.

Related posts

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ವಾರ್ಷಿಕ ಮಹಾಸಭೆ : ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿ – ಲವ ಕರ್ಕೇರ.

Mumbai News Desk

N.E.S ಸೋಸೈಟಿಯ ಅಭಿನವ ಪಬ್ಲಿಕ್ ಸ್ಕೂಲ್ (CBSE Board) ನ ವಾರ್ಷಿಕ ಕ್ರೀಡಾಕೂಟ

Mumbai News Desk

ಸಿಂಹ ಘರ್ಜನೆ 2025 : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮಂಗಳಾದೇವಿ ಕ್ಲಬ್

Mumbai News Desk

ಕರ್ನಾಟಕ ಸಂಘ ಡೊಂಬಿವಲಿ, ಅದ್ಧೂರಿ ಕ್ರೀಡೋತ್ಸವ ದಂಗಲ್ – 2024 ಉದ್ಘಾಟನೆ

Mumbai News Desk

ರಾಷ್ಟ್ರೀಯ ಮಟ್ಟದ ಕರಾಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹರ್ಷಿತಾ ಪೂಜಾರಿ   ಇನ್ನಂಜೆ

Mumbai News Desk

ಭಾಯಂದರ್, ರೈ ಸುಮತಿ ಎಜುಕೇಷನಲ್ ಟ್ರಸ್ಟ್ ನ ಸೇಂಟ್ ಆಗ್ನೆಸ್ ಆಂಗ್ಲ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ

Mumbai News Desk