
ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೇಷನ್ ಮುಂಬಯಿಯ ವತಿಯಿಂದ ವಾರ್ಷಿಕ ವಿಹಾರ ಕೂಟ 22/3/25ರ ಸಂಜೆಯಿಂದ 23/3/25ರ ಸಂಜೆ ತನಕ ಗೋರೈ ಮುಂಬಯಿಯ ಫಾರ್ಮ್ ರಿಜೆನ್ಸಿ ರೆಸಾರ್ಟ್ ನಲ್ಲಿ ಸಂಭ್ರಮ, ಉಲ್ಲಾಸದಿಂದ ಜರಗಿತು.
22ರ ಸಂಜೆ ನಡೆದ ವಿಚಾರ ವಿನಿಮಯ, ಚರ್ಚಾ ಕೂಟದಲ್ಲಿ ಮಹಾಸಭೆಯ ಮುಂದಿನ ಯೋಜನೆಗಳ ಬಗ್ಗೆ, ಸದಸ್ಯರಿಗೆ ನೀಡುವ ಆರ್ಥಿಕ ಸಹಾಯ ಹಾಗೂ ಇನ್ನಿತರ ವಿಷಯದ ಬಗ್ಗೆ ಚರ್ಚಿಸಲಾಯಿತು.
ಮರುದಿನ ಸದಸ್ಯರು ವಿವಿಧ ಮನೋರಂಜನೆ, ವಿನೋದವಳಿಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸಭಾದ ಅಧ್ಯಕ್ಷರಾದ ಹರೀಶ್ ಪುತ್ರನ್ ಅವರ ಮುಂದಾಳತ್ವದಲ್ಲಿ ನಡೆದ ವಿಹಾರಕೂಟದಲ್ಲಿ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.
ಕಾರ್ಯದರ್ಶಿ ವಿಜಯ ಸಾಲ್ಯಾನ್ ಪಾಲ್ಗೊಂಡ ಎಲ್ಲರಿಗೂ ಕೊನೆಯಲ್ಲಿ ವಂದಿಸಿದರು.

ಅಧ್ಯಕ್ಷರಾದ ಹರೀಶ್ ಪುತ್ರನ್, ಉಪಾಧ್ಯಕ್ಷ ಶಶಿಕಾಂತ್ ಕೋಟ್ಯಾನ್, ಗೌರವ ಕಾರ್ಯದರ್ಶಿ ವಿಜಯ ಸಾಲ್ಯಾನ್, ಕೋಶಾಧಿಕಾರಿ ಹೇಮಂತ್ ಮೆಂಡನ್, ಸದಸ್ಯರುಗಳಾದ ಯುವರಾಜ್ ಶ್ರೀಯಾನ್, ಪುಷ್ಪರಾಜ್ ಕೋಟ್ಯಾನ್, ನಾರಾಯಣ ಕೋಟ್ಯಾನ್, ವಾಸುದೇವ ಸುವರ್ಣ, ಗಂಗಾಧರ ಬಂಗೇರ, ಗಣೇಶ್ ಬಂಗೇರ, ನಾರಾಯಣ ಬಂಗೇರ, ದೀಪಕ್ ಪುತ್ರನ್, ನಾಗೇಶ್ ಸಾಲ್ಯಾನ್, ಮಹೇಂದ್ರ ಕಾಂಚನ್, ದಿನರಾಜ ಸಾಲ್ಯಾನ್, ಜಗದೀಶ್ ಅಮೀನ್, ಜಯಶೀಲ ಕರ್ಕೇರ, ತೇಜಸ್ ಬಂಗೇರ, ಅಶೋಕ್ ಪುತ್ರನ್, ಕಿಶೋರ್ ಕಾಂಚನ್, ಯಶ್ವಂತ್ ಕರ್ಕೇರ, ಮಾಸ್ಟರ್ ಶ್ಲೋಕ್ ಕಾಂಚನ್ ವಿಹಾರ ಕೂಟದಲ್ಲಿ ಪಾಲ್ಗೊಂಡಿದ್ದರು.
ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್ ಸಮಾಜ ಬಾಂದವರಲ್ಲಿ ಸಹೋದರತ್ವ ಬೆಳೆಸುವುದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗದಲ್ಲಿ ಸೇವಾ ನಿರತವಾಗಿದೆ. ವೈದಕೀಯ ಶಿಬಿರ, ರಕ್ತದಾನ ಶಿಬಿರ, ಹಾಗೂ ಸದಸ್ಯರಿಗೆ ಆರ್ಥಿಕ ಸಹಾಯ ಮಾಡುತ್ತಿದೆ.