
ಪತ್ರಿಕೆ ಶತಮಾನೋತ್ಸವವನ್ನು ಆಚರಿಸಿ ಮುನ್ನಡೆಯುವಂತಾಗಲಿ : ಐಕಳ ಹರೀಶ್ ಶೆಟ್ಟಿ
ಚಿತ್ರ ವರದಿ: ರವಿ.ಬಿ.ಅಂಚನ್ ಪಡುಬಿದ್ರಿ
ಕಲ್ಯಾಣ್ ಎ. 6: ಛಾಯಕಿರಣ ಪತ್ರಿಕೆಯ ರೂವಾರಿ, ಸಂಪಾದಕರಾದ ಪ್ರಕಾಶ್ ಹೆಗ್ಡೆಕುಂಠಿನಿಯವರು ನನ್ನ ಹಲವಾರು ವರ್ಷದ ಆತ್ಮೀಯ ಮಿತ್ರರು . ಒಂದು ಪತ್ರಿಕೆಯನ್ನು ಮುನ್ನಡೆಸುವುದೆಂದರೆ ಅದು ಅಷ್ಟು ಸುಲಭದ ಮಾತಲ್ಲ, ಯಾಕಂದರೆ ಪತ್ರಿಕೆಯಿಂದ ಹಣ ಮಾಡಲು ಸಾಧ್ಯವಿಲ್ಲ ಆದರೆ ಮುಂಬಯಿಯಲ್ಲಿ ನೆಲೆಸಿರುವ ತುಳು ಕನ್ನಡಿಗರ ಪಾಲಿಗೆ ಪತ್ರಿಕೆಯ ಕೊಡಗೆ ಮಹತ್ತರವಾಗಿದೆ. ತುಳು ಕನ್ನಡಿಗರಿಗೆ ಸ್ಥಾನ- ಮಾನವನ್ನು ಕೊಟ್ಟು ಬಹಳ ಎತ್ತರಕ್ಕೆ ಎರಿಸಿದ ಹಿರಿಮೆ ಮುಂಬಯಿ ಪತ್ರಿಕೆ ಇದೆ. ಈ ನಿಟ್ಟಿನಲ್ಲಿ ಛಾಯಕಿರಣ ಪತ್ರಿಕೆಯ ಯೋಗದಾನವು ಮಹತ್ತರವಾಗಿದೆ. ಛಾಯಕಿರಣ ಪತ್ರಿಕೆ ಕಷ್ಟ ಕಾರ್ಪಣ್ಯಗಳನ್ನು ಮೀರಿ ಬೆಳೆದು ಇಂದು ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ಪತ್ರಿಕೆ ಇನ್ನಷ್ಟು ಬೆಳಗಲಿ , ಬೆಳೆಯಲಿ, ಶತಮಾನೋತ್ಸವವನ್ನು ಆಚರಿಸಿ ಮುನ್ನಡೆಯುವಂತಾಗಲಿ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹ ಸದಾ ಈ ಪತ್ರಿಕಾ ಬಳದವರ ಜೊತೆಗಿರಲಿ ಎಂದು ಜಾಗತಿಕ ಬಂಟರ ಸಂಘಗಳ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಶುಭಹಾರೈಸಿದರು
ಅವರು ಎಪ್ರಿಲ್ 6 ರ ರವಿವಾರದಂದು ಕಲ್ಯಾಣ್ ಕಡಕ್ಪಾಡದ ಗುರುದೇವ್ ಗ್ರಾಂಡ್ ಹೋಟೆಲ್ ಸಭಾಗ್ರಹದಲ್ಲಿ ಬಿ.ಎಸ್. ಕುರ್ಕಾಲ್ ವೇದಿಕೆಯಲ್ಲಿ ಮಹಾನಗರದ ಪ್ರಸಿದ್ಧ ಮಾಸಿಕ ಛಾಯಕಿರಣ ಪತ್ರಿಕೆಯ ದಶಮಾನೋತ್ಸವ ಸಂಬ್ರಮ ಕಾರ್ಯಕ್ರಮವನ್ನು ಕಿಕ್ಕಿರಿದು ತುಂಬಿದ ಅಭಿಮಾನಿ ಬಳಗದ ಸಮ್ಮುಖದಲ್ಲಿ ಉದ್ಘಾಟಿಸಿ ಪತ್ರಿಕೆಯನ್ನು ಬೆಳೆಯಲು ಸಹಕಾರ ನೀಡಿದವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಅತಿಥಿ ಉದ್ಯಮಿ, ಸಮಾಜ ಸೇವಕ ಗುರುದೇವ್ ಭಾಸ್ಕರ ಶೆಟ್ಟಿ ಮಾತನಾಡುತ್ತಾ ಹಲವು ಏರಿಳಿತಗಳನ್ನು ಕಂಡು ಛಾಯಕಿರಣ ಪತ್ರಿಕೆ ಬೆಳೆದು ಇಂದು ದಶಮಾನೋತ್ಸವವನ್ನು ಅಚರಿಸುತ್ತಿರುವುದನ್ನು ಕಂಡು ಅತೀವ ಸಂತೋಷವಾಗುತ್ತಿದೆ ಕಟೀಲು ಶ್ರೀ ದುರ್ಗೆಯ ಅನುಗ್ರಹದಿಂದ ಪತ್ರಿಕೆ ಯಶಸ್ವಿ ಮುನ್ನಡೆಯಲಿ ಎಂದರು.

ಅತಿಥಿ ಬೊಂಬೆ ಬಂಟ್ಸ್ ಅಸೋಸಿಯೇಷನ್ ಇದರ ನಿಕಟಪೂರ್ವ ಅಧ್ಯಕ್ಷ ಸಿಎ. ಸುರೇಂದ್ರ ಶೆಟ್ಟಿ ಮಾತನಾಡುತ್ತಾ ನಾನೋರ್ವ ಛಾಯಕಿರಣ ಪತ್ರಿಕೆಯ ಅಭಿಮಾನಿ ಉತ್ತಮ ಲೇಖನಗಳನ್ನು ಒಳಗೊಂಡ ಈ ಪತ್ರಿಕೆ, ಇನ್ನಷ್ಟು ಲೇಖನದೊಂದಿಗೆ ಸಮಾಜವನ್ನು ಜಾಗೃತಗೊಳುಸುವ ಕಾರ್ಯವನ್ನು ಮಾಡುತ್ತಾ ರಜತ ಮಹೋತ್ಸವ ವರ್ಷವನ್ನು ಯಶಸ್ವಿ ಯಾಗಿ ಅಚರಿಸುವಂತಾಗಲಿ ಎಂದರು.

ಅತಿಥಿ ಬಂಟರ ಸಂಘ ಮುಂಬಯಿ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಸುಭೋದ್ ಭಂಡಾರಿ ಮಾತನಾಡುತ್ತಾ ಪ್ರಕಾಶ್ ಕುಂಠಿನಿ ಒರ್ವ ಉತ್ತಮ ಪತ್ರಕರ್ತರು ಹಾಗೂ ನಮ್ಮ ಅತ್ಮೀಯ ಸ್ನೇಹಿತರು, ಎಲ್ಲಾ ಸಂಘ- ಸಂಸ್ಥೆಯ ಸಹಕಾರದೊಂದಿಗೆ ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ಇನ್ನಷ್ಟು ಉತ್ತಮ ಬರಹಗಳ ಮೂಲಕ ಪತ್ರಿಕೆ ಸಮಾಜ ತಿದ್ದುವ ಕೆಲಸವನ್ನು ಮಾಡುವಂತಾಗಲಿ ಎಂದರು.
ಅತಿಥಿ ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಮಾತನಾಡುತ್ತಾ ಪ್ರಕಾಶ್ ಕುಂಠಿನಿ ತನ್ನ ಏಳಿಗೆಗೆ, ಪ್ರಗತಿಗೆ ಕಾರಣಿಭೂತರಾದವರನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಕೊಡುವ ಧರ್ಮವನ್ನು ಪಾಲನೆ ಮಾಡುವುದನ್ನು ಕಂಡು ಸಂತೋಷವಾಗುತ್ತಿದೆ. ಪತ್ರಿಕೆಯ ಗುಣಮಟ್ಟ, ಚಂದಾದಾರರು, ಓದುಗರನ್ನು ಕಾಪಾಡುವ ಕೆಲಸವನ್ನು ಪ್ರಕಾಶ್ ಕುಂಠಿನಿಯಿಂದ ನಡೆಯಲಿ ಅದರೊಂದಿಗೆ ಪತ್ರಿಕೆಯ ಮೂಲಕ ಭಾರತದಾಂತ್ಯ ಸಮಾಜವನ್ನು ತಿದ್ದುವ ಕೆಲಸದೊಂದಿಗೆ ವಿಶ್ವದಾದ್ಯಂತದ ವರದಿಯನ್ನು ಓದುಗರಿಗೆ ತಲುಪಿಸುವ ಕಾರ್ಯ ಈ ಪತ್ರಿಕೆಯ ಮೂಲಕ ನಡೆಯಲಿ. ವಿದ್ಯಾಕ್ಷೇತ್ರದ ಕ್ರಾಂತಿಕಾರ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯಾಯರ ಘನ ಅಧ್ಯಕ್ಷತೆ ಈ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದೆ ಎಂದರು.
ಅತಿಥಿ ರಾಜೇಶ್ವರಿ ರಾಷ್ಟ್ರೀಯ ಶಾಲೆಯ ಸಂಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಮಾತನಾಡುತ್ತಾ ಸಮಾಜದೊಂದಿಗೆ ದೇಶದ ಅಗು- ಹೋಗುಗಳನ್ನು ಜಾಗೃತ ಗೊಳಿಸುವ ಕಾರ್ಯ ಪತ್ರಿಕೆಯ ಮೂಲಕ ನಡೆಯಲಿ ಹಾಗೂ ದೇಶದ ಗೌರವಾನಿತ್ವ ಪತ್ರಿಕೆಗಳಲ್ಲಿ ತನ್ನ ಸ್ಥಾನವನ್ನು ಅಲಂಕರಿಸುವಂತಾಗಲಿ ಇಂದು ಕರಾವಳಿ ಕರ್ನಾಟಕದ ಹೆಚ್ಚಿನ ಮನೆಗಳು ಪಾಳು ಬೀಳುತ್ತಿದೆ ವೃದ್ಧಾಶ್ರಮದತ್ತ ಸಾಗುತ್ತಿದೆ ಈ ವಿಷಯವನ್ನು ನಾವೆಲ್ಲರೂ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಕರಾವಳಿ ಸಂಸ್ಕೃತಿಯನ್ನು ಮಂಬಯಿ ಮಹಾನಗರದ ಹಾಗೂ ವಿದೇಶದಲ್ಲಿರುವ ನಮ್ಮ ಮಕ್ಕಳು ಕಲಿಯ ಬೇಕೆನ್ನುವ ಉದ್ದೇಶದಿಂದ ಕಾರ್ಕಳ ದಲ್ಲಿ ಉತ್ತಮ ಶಾಲೆಯನ್ನು ಸ್ಥಾಪಿಸಿ ಕರಾವಳಿ ಸಂಸ್ಕೃತಿಯ ಪರಿಪೂರ್ಣ ಶಿಕ್ಷಣ ನೀಡ ಬೇಕೆನ್ನುವ ಉದ್ದೇಶ ನಮ್ಮದಾಗಿದೆ ಈ ಶಾಲೆಗೆ ತಮ್ಮೇಲ್ಲರ ಅಶೀರ್ವಾದ ಸದಾ ಇರಲಿ ಎಂದರು.

ಅತಿಥಿ ನಿವೃತ್ತ ಪ್ರಿನ್ಸಿಪಲ್ ಡಾ. ಅನಿಲ್ ಕುಮಾರ್ ಶೆಟ್ಟಿ ಮಾತನಾಡುತ್ತಾ ಕಾರ್ಯಕ್ರಮದ ವೇದಿಕೆಗೆ ಶ್ರೇಷ್ಠ ಕವಿ ಬಿ.ಎಸ್. ಕುರ್ಕಾಲ್ ರವರ ಹೆಸರು ಹಾಗೂ ಈ ವೇದಿಕೆಯಲ್ಲಿ ನನ್ನ ವಿದ್ಯಾರ್ಥಿಯ ಸನ್ಮಾನವನ್ನು ನೋಡಿ ಅತೀವ ಸಂತೋಷವಾಗಿದೆ. ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯಾಯ ಅವರಿಗೆ ಅದ್ಯತೆ ನೀಡಿದನ್ನು ನೋಡಿ ಆ ಸಂತೋಷ ಇಮ್ಮಡಿಯಾಗಿದೆ. ಕನ್ನಡಿಗ ಪತ್ರಕರ್ತರು ಯಾವುದೇ ಅಮಿಷಕ್ಕೆ ಒಳಗಾಗದೆ ನಿಷ್ಠೆ, ನಿರ್ಭೀತಿಯಿಂದ ಪತ್ರಿಕೆಯನ್ನು ಬೆಳೆಸಿದ್ದಾರೆ ಎಂದರು.

ಪತ್ರಿಕೆಯ ರೂವಾರಿ ಪ್ರಕಾಶ್ ಹೆಗ್ಡೆ ಕುಂಠಿನಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪತ್ರಿಕೋದ್ಯಮದ ತನ್ನ ಗುರುಗಳಿಗೆ ನಮಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿಸುತ್ತಿರುವುದು ನಮ್ಮ ಪಾಲಿನ ಸೌಭಾಗ್ಯ 2014ರಲ್ಲಿ 8 ಪುಟದ ಪ್ರತಿಕೆ ಪ್ರಾರಂಭ ಮಾಡುವಾಗ ಗುರುದೇವ್ ಭಾಸ್ಕರ್ ಶೆಟ್ಟಿಯವರ ಮೊದಲ ಹತ್ತು ಸಾವಿರ ಪತ್ರಿಕೆಯನ್ನು ಹತ್ತು ವರ್ಷದತ್ತ ಕೊಂಡೊಯ್ಯಿತು ಎನ್ನುಲು ಅಭಿಮಾನವಾಗುತ್ತದೆ . ನಾನು ಯಾವುದೇ ಜಾತಿ, ಮತಕ್ಕೆ ಸೀಮಿತನಾದನಲ್ಲ .ಆದರೂ ಬಹಳಷ್ಟು ಜನರು ಅದರಲ್ಲೂ ಬಿವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಹಕಾರ ಪತ್ರಿಕೆಗೆ ಬಹಳ ಇದೆ . ಕಳೆದ 30 ವರ್ಷದಲ್ಲಿ ಯಾವುದೇ ಬೇರೆ ಉದ್ಯೋಗ ಮಾಡದೆ ಪತ್ರಿಕೆ ಮಾಧ್ಯಮವನ್ನೇ ಮುಖ್ಯವಾಗುರಿಸಿ ಕೊಂಡಿದ್ದೇವೆ. ನಗರದ ವಿವಿಧ ಪತ್ರಿಕೆಯಲ್ಲಿ ದುಡಿದು ಅನುಭವವನ್ನು ಪಡೆದು ಈ ಪತ್ರಿಕೆಯನ್ನು ಎಲ್ಲರ ಪ್ರೋತ್ಸಾಹದದಿಂದ ಪ್ರಾರಂಬಿಸಿದ್ದೇನೆ. ಎಲ್ಲರ ಸಹಕಾರದಿಂದ ಸಾಗಿ ಬಂದ ಛಾಯಕಿರಣ ಪತ್ರಿಕೆ ದಶಮಾನೋತ್ಸವ ಅಚರಿಸುತ್ತಿದೆ ಎಂದರು
ಇದೇ ಸಂದರ್ಬದಲ್ಲಿ ಕರ್ನಾಟಕ ಮಲ್ಲದ ಅಶೋಕ್ ದೇವಾಡಿಗ, ರಮೇಶ್ ಮರೋಳಿ, ಅನಂದ ದೇವಾಡಿಗ, ಚೆನ್ನವೀರ ಅವರ ಪರವಾಗಿ ಅವರ ಸಂಭಂದಿಯನ್ನು ಶಾಲು ನೆನಪಿನ ಕಾಣಿಕೆ ಫಲ- ಪುಷ್ಪ ಗೌರವ ಧನ ನೀಡಿ ಸನ್ಮಾನಿಸಿದರೆ, ಸರಳ ಶೆಟ್ಟಿ, ಉಳ್ತೂರು ಮೋಹನದಾಸ ಶೆಟ್ಟಿ, ಅಣ್ಣಪೂರ್ಣರನ್ನು ವಿಶೇಷವಾಗಿ ಸನ್ಮಾನಿಸಲಾಯಿತು ಹಾಗೂ ಜಯ ಶೆಟ್ಟಿ, ಸುಧೀರ್ ಶೆಟ್ಟಿ, ಭಾಸ್ಕರ ಶೆಟ್ಟಿ, ಚಿತ್ರಾ ಅರ್. ಶೆಟ್ಟಿ, ಪ್ರಕಾಶ್ ನಾಯ್ಕ್, ರವೀಂದ್ರ ಶೆಟ್ಟಿ, ಪ್ರಕಾಶ್ ಶೆಟ್ಟಿ ಮತ್ತು ಪ್ರವೀಣಾ ಶೆಟ್ಟಿ ದಂಪತಿ, ಶ್ರೀನಿವಾಸ ಜೋಕಟ್ಟೆ, ದಯಾಸಾಗರ ಚೌಟ, ರಾಜೇಶ್ ಜಯ ಶೆಟ್ಟಿ ಮತ್ತಿತರರನ್ನು ಸತ್ಕರಿಸಲಾಯಿತು.
ಇದಕ್ಕೂ ಮೊದಲು ಕಾರ್ಯಕ್ರಮದ ಅಧ್ಯಕ್ಷರಿಗೆ ಪ್ರಕಾಶ್ ಹೆಗ್ಡೆ ಕುಂಠಿನಿ, ಜ್ಯೋತಿ ಕುಂಠಿನಿ, ಸಿಎ ಶ್ರೇಯಾ ಶೆಟ್ಟಿ, ಶಾಲಿನಿ ಶೆಟ್ಟಿ ಅಜೆಕಾರ್, ಮೋಹನದಾಸ್ ಹೆಗ್ಡೆ, ದೇವದಾಸ್ ಹೆಗ್ಡೆ, ಡಾ. ಶಿಶಿರ್ ಹರಿವಾಣದಲ್ಲಿ ಮಲ್ಲಿಗೆ ಹೂ ವನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಕೋರಿದರು.
ಶೋಬಾ ಸುರೇಂದ್ರ ಶೆಟ್ಟಿ ಮತ್ತು ಪ್ರವೀಣಾ ಪ್ರಕಾಶ್ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ಹತ್ತು ದೀಪಗಳನ್ನು ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅದಿತಿ ದಾಮೋದರ ಶೆಟ್ಟಿ ಯವರಿಂದ ಭರತನಾಟ್ಯ ನಡೆಯಿತು, ಸಮೂಹ ಗಾಯನ ಸ್ಪರ್ಧೆ ಜರಗಿತು .
ಸಾಂಸ್ಕೃತಿಕ ಕಾರ್ಯಕ್ರಮವನ್ನು ಸರೋಜ ಅಮಾತಿ ನಿರೂಪಿಸಿದರು, ಸಭಾಕಾರ್ಯಕ್ರಮವನ್ನು ದಯಾಸಾಗರ ಚೌಟ ನಿರೂಪಿಸಿದರೆ ಕೊನೆಗೆ ಶಾಲಿನಿ ಶೆಟ್ಟಿ ಅಜೆಕಾರ್ ವಂದಿಸಿದರು
ಸಮಾರಂಭದ ಅಧ್ಯಕ್ಷರ ಮಾತು
ಕನ್ನಡಕ್ಕಾಗಿ ಮಾಡುವ ಕೆಲಸ ಕೇವಲ ಕನ್ನಡಕ್ಕೆ ಸೀಮಿತವಲ್ಲ .ಅದು ಮುಂದಿನ ಜಾನಂಗಕ್ಕೆ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ತಲುಪಿಸುವ ಕೆಲಸವಾಗಿದೆ . ಯುವ ಜನಾಂಗವನ್ನು ತಿದ್ದುವ ಕೆಲಸವಾಗಿದೆ . ಇಂತಹ ಸಾಧನೆಯನ್ನು ಪ್ರಕಾಶ್ ಹೆಗ್ಡೆ ಕುಂಠಿನಿ ದಂಪತಿಯವರು ಛಾಯಾ ಕಿರಣ ಪತ್ರಿಕೆಯ ಮೂಲಕ ಮಾಡಿದ್ದಾರೆ. ಒಂದು ಉತ್ತಮ ಗುಣ ಮಟ್ಟದ ಪ್ರತಿಕೆಯನ್ನು ಹುಟ್ಟು ಹಾಕಿ ನಮಗಮ ಭಾಷೆ, ಸಾಹಿತ್ಯವನ್ನು ಹತ್ತು ವರ್ಷದಿಂದ ಉಳಿಸಿ ಬೆಳೆಸುತ್ತಾ ಬಂದಿದ್ದಾರೆ .ಈ ಪತ್ರಿಕಾ ಬಳಕ್ಕೆ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಭಿನಂದಿಸಿ ಶುಭವನ್ನು ಕೋರುತ್ತಿದ್ದೇನೆ ( ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾದ್ಯರವರು ತಮ್ಮ ಮೆಚ್ಚುಗೆ ನುಡಿಗಳು)