
ಸಮಾಜ ಸೇವೆಗೆ ಹೆಸರಾಗಿರುವ ಸಾಫಲ್ಯ ಸೇವಾ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಮೀ ಮೆಂಡನ್ ಅವರ ನೇತೃತ್ವದಲ್ಲಿ ವಿಭಾಗದ ಸದಸ್ಯೆಯರು ತಾ.12/04/2025ರಂದು ಬೆಳಿಗ್ಗೆ 11:30ಕ್ಕೆ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮ ಮತ್ತು ಬಾಲಗೃಹಕ್ಕೆ ಭೇಟಿ
ನೀಡಿದರು.




ಈ ಸಂದರ್ಭದಲ್ಲಿ ಮಾತನಾಡಿದ ಗೌ. ಪ್ರ. ಕಾರ್ಯದರ್ಶಿ ಶ್ರೀ ಭಾಸ್ಕರ್ ಸಪಲಿಗ ಅವರು ಸಾಫಲ್ಯ ಸೇವಾ ಸಂಘವು ಕಳೆದ ಕೆಲವು ವರ್ಷಗಳಿಂದ ಅನಾಥಾಶ್ರಮಕ್ಕೆ ನಗದು ರೂಪದಲ್ಲಿ ಮತ್ತು ಅವಶ್ಯಕ ವಸ್ತುಗಳ ರೂಪದಲ್ಲಿ ಸಹಾಯ ಹಸ್ತವನ್ನು ನೀಡುತ್ತಾ ಬಂದಿದೆ. ಇಂದು ಕೂಡ
₹ 65,000/-( ಮಹಿಳಾ ವಿಭಾಗದ ಸದಸ್ಯರು ಹಾಗೂ ದಾನಿಗಳ ಕೊಡುಗೆ) ಮತ್ತು CSR ಫಂಡಿನಿಂದ ₹ 2,50,000/- ಗಳನ್ನು ಅನಾಥಾಶ್ರಮಕ್ಕೆ ನೀಡಿ ಉದಾರತೆ, ದಯೆ ಮತ್ತು ದಾನದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. 30 ಬಾಲಕರು ಮತ್ತು 200ರಷ್ಟು ಹಿರಿಯ ನಾಗರಿಕರನ್ನು ಸಲಹುತ್ತಿರುವ ಈ ಅನಾಥಾಶ್ರಮದ ಕಾರ್ಯ ಸ್ತುತ್ಯರ್ಹವಾಗಿದೆ. ಇನ್ನು ಮುಂದೆಯೂ ಈ ಅನಾಥಾಶ್ರಮಕ್ಕೆ ಸಂಘವು ಕೈಲಾದ ಸಹಾಯ ಮಾಡುವುದೆಂದು ಭರವಸೆ ನೀಡಿದರು.






ಅನಾಥಾಶ್ರಮದ ವತಿಯಿಂದ ದಾನವನ್ನು ಹಾಗೂ ಅತ್ಯಾವಶ್ಯಕ ವಸ್ತುಗಳನ್ನು (100 ಬೆಡ್ ಶೀಟ್ 50 ಬಾಕ್ಸ್ ಡೈಪರ್ ಗಳನ್ನು ಸ್ವೀಕರಿಸಿದ ಶ್ರೀ ವಸಂತ್ ಕುಂಜಾರು ಅವರು ಸಂಘದ ಕಡೆಯಿಂದ ಮಾಡುತ್ತಿರುವ ಇಂತಹ ಪ್ರಯತ್ನಕ್ಕೆ ಕೃತಜ್ಞತೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಎಲ್ಲಾ ಚಟುವಟಿಕೆಗಳನ್ನು ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಗೌ. ಪ್ರ.ಕಾರ್ಯದರ್ಶಿ ಶ್ರೀ ಭಾಸ್ಕರ್ ಸಪಲಿಗ, ಮಾಜಿ ಕಾರ್ಯದರ್ಶಿ ಶ್ರೀಮತಿ ಶೋಭಾ ಬಂಗೇರ ಮತ್ತು ಆಡಳಿತ ಸಮಿತಿ ಸದಸ್ಯ ಶ್ರೀ ಕಿರಣ್ ಸಪಲಿಗ, ‘ಸಾಫಲ್ಯ’ ಪತ್ರಿಕೆಯ ಸಂಪಾದಕಿ ಡಾ.ಜಿ.ಪಿ.ಕುಸುಮ ಹಾಗೂ ಆಡಳಿತ ಸಮಿತಿ ಮತ್ತು ಯುವ ವಿಭಾಗದವರ ಸಹಕಾರದೊಂದಿಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮೆಂಡನ್ ಮತ್ತು ವಿಭಾಗದ ಇತರ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.