April 14, 2025
ಪ್ರಕಟಣೆ

ಎ. 12 ರಿಂದ 21- ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾಗೇಟ್, ಶಹಾಡ್, 63 ನೇ, ಮಹಾಪೂಜೆ



ಕಲ್ಯಾಣ್ : ಕಲ್ಯಾಣ್ ಪರಿಸರದ ತುಳು ಕನ್ನಡಿಗರ ಶ್ರದ್ಧಾ ಕೇಂದ್ರ, ಮೂರು ವರ್ಷದ ಹಿಂದೆ ಅದ್ದೂರಿಯಾಗಿ ವಜ್ರ ಮಹೋತ್ಸವವನ್ನು ಅಚರಿಸಿ ದಾಖಲೆಯನ್ನು ನಿರ್ಮಿಸಿದ ಮಹಾನಗರದ ಪುರಾತನ ಧಾರ್ಮಿಕ ಕ್ಷೇತ್ರ  ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಶಹಾಡ್ ಇದರ 63ನೇ ವಾರ್ಷಿಕ ಮಹಾಪೂಜೆಯು ಎಪ್ರಿಲ್ 12-5-25 ರ ಶನಿವಾರದಿಂದ 21-4-2025 ರ ಸೋಮವಾರ ವರೆಗೆ ಪ್ರತಿನಿತ್ಯ ಬೆಳಿಗ್ಗೆ ನಿತ್ಯ ಪೂಜೆ, ಮಹಾ ಪೂಜೆ ಸಂಜೆ ಕುಂಕುಮಾರ್ಚನೆ, ಮಹಾಪೂಜೆ, ಸಂಜೆ 5.30 ರಿಂದ 8.30 ರ ತನಕ ಭಜನೆ ದೇವಸ್ಥಾನದಲ್ಲಿ ಜರಗಲಿದೆ.
ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ 63 ನೇ ವಾರ್ಷಿಕೋತ್ಸವ ಉತ್ಸವ ಹಾಗೂ 10 ನೇ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಭಜನಾ ಸಪ್ತಾಹ, ಹಾಗೂ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ಚಂಡಿಕಾಯಾ ಶ್ರೀ ಶಂಕರನಾರಾಯಣ ತಂತ್ರಿ ಇವರ ನೇತೃತ್ವದಲ್ಲಿ ನಡೆಯಲಿರುವುದು. ಶನಿವಾರ ದಿನಾಂಕ 12/4/25 ರ ಬೆಳಗ್ಗೆ 8.00 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯವಾಚನ ಮಹಾಸಂಕಲ್ಪ, ಭದ್ರ ದೀಪ ಪ್ರಜ್ವಲನೆ,ತೋರಣ ಮುಹೂರ್ತ. ಉಗ್ರಾಣ ಮುಹೂರ್ತ. ಮಹಾಗಣಪತಿ ಹೋಮ, ಮಹಾಪೂಜೆ. ಸಂಜೆ 5.30 ರಿಂದ 7.00 ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಶಹಾಡ್ ಮತ್ತು ಕುಲಾಲ ಸಂಘ ಮುಂಬಯಿ,ಗುರುವಂದನಾ ಭಜನಾ ಮಂಡಳಿ ತರಾಣೆ- ಕಸಾರ- ಭಿವಂಡಿ- ಕರ್ಜತ್ ಇವರಿಂದ, 13-4-25 ರ ರವಿವಾರ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ, ಯುವ ವಿಭಾಗ ಬಿರ್ಲಾಗೇಟ್ ಶಹಾಡ್ ಮತ್ತು ಓಂ ಶಕ್ತಿ ಮಹಿಳಾ ಸಂಸ್ಥಾ ಕಲ್ಯಾಣ್ ಇವರಿಂದ,
14/4/25 ರ ಸೋಮವಾರ ಸಂಜೆ 6.30 ರಿಂದ
ಶ್ರೀ ಗುರುನಾರಾಯಣ ಭಜನಾ ಮಂಡಳಿ, ಬಿಲ್ಲವರ ಅಸೋಸಿಯೇಷನ್ ಕಲ್ಯಾಣ್ ಸ್ಥಳೀಯ ಕಚೇರಿ ಇವರಿಂದ, 15/4/25 ರ ಮಂಗಳವಾರ  ಸಂಜೆ 6.30 ಕ್ಕೆ  ಶ್ರೀ ಸಾಯಿ ನಿತ್ಯಾನಂದ ಭಜನಾ ಮಂಡಳಿ ಭಿವಂಡಿ ಇವರಿಂದ16/4/25 ರ ಬುಧವಾರ ಸಂಜೆ 6.30 ರಿಂದ- 7.30 ವರದ ಸಿದ್ಧಿವಿನಾಯಕ ಸೇವಾ ಮಂಡಳಿ ಡೊಂಬಿವಲಿ, ಇವರಿಂದ , 7.30 ರಿಂದ. 8.30 ಶ್ರೀ ನಿತ್ಯಾನಂದ ಭಜನಾ ಮಂಡಳಿ ಬದ್ಲಾಪುರ ಇವರಿಂದ. 17-4-25 ರ ಗುರುವಾರ ಬೆಳಿಗ್ಗೆ 9.00 ರಿಂದ ಶ್ರೀ ವಿಷ್ಣು ಸಹಸ್ರನಾಮ ಅರ್ಚನೆ ಹೋಮ, ಪಂಚಕಲಶಾಭಿಷೇಕ ಪೂಜೆ, ಶ್ರೀ ಗುರುಪಾದುಕಾ ಪೂಜೆ, ಸಂಜೆ 6.30 ರಿಂದ 7.30 ಸ್ವರ ಕಲಾವೇದಿಕೆ ಕರ್ನಾಟಕ ಸಂಘ ಕಲ್ಯಾಣ್, ಇವರಿಂದ ಹಾಗೂ 7.30 ರಿಂದ 8.30  ದೇವಾನಂದ ಕೋಟ್ಯಾನ್ ಬಳಗ ಶ್ರೀ ನಿತ್ಯಾನಂದ ಭಜನಾ ಮಂಡಳಿ ಕಲ್ಯಾಣ್ ಇವರಿಂದ  18/4/25 ರ ಶುಕ್ರವಾರ ಬೆಳಿಗ್ಗೆ 8.00 ಗಂಟೆಗೆ ಕುಂಡ ಸಂಸ್ಕಾರ ಅಗ್ನಿ ಜನನ ಸಂಸ್ಕಾರ, ಮಹಾ ಗಣಪತಿ ಹೋಮ,  ನವಗೃಹಶಾಂತಿ, ಸಂಜೆ 5.00 ರಿಂದ ರಾಕ್ಷೋಘ್ನ ಹೋಮ, ವಾಸ್ತು ಬಲಿ,ದಿಕ್ಪಾಲ ಬಲಿ 6.30 ರಿಂದ 8.30 ಬಂಟರ ಸಂಘ ಮುಂಬಯಿ ಭಿವಂಡಿ– ಬದ್ಲಾಪುರ ಪ್ರಾದೇಶಿಕ ಸಮಿತಿಯ ಸದಸ್ಯರಿಂದ ಭಜನೆ, 19-4-25 ರ ಶನಿವಾರ ಬೆಳಿಗ್ಗೆ 9.00 ಗಂಟೆಗೆ ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, 108 ಸೀಯಾಳ ಅಭಿಷೇಕ, ತುಲಾಭಾರ ಸೇವೆ ಮಂಜುನಾಥ ಶೆಟ್ಟಿ ಕುಟುಂಬಿಕರಿಂದ, ನವಗ್ರಹ ಶಾಂತಿ, ಪಂಚವಿಶಾಂತಿ ಕಲಶರಾಧನೆ, ಪ್ರಾಧಾನ ಹೋಮ, ಪ್ರಸನ್ನ ಗಣಪತಿ ದೇವರಿಗೆ ನವಕಲಶರಾಧನೆ, ಅನ್ನ ಸಂತರ್ಪಣೆ, ಸಂಜೆ 25 ರ ಕಲಶಾಭಿಷೇಕ, ಪ್ರದಾನ ಹೋಮ, ಅವಶ್ರುತ ಬಲಿ, ಮಹಾ ಪೂಜೆ, ಪಲ್ಲ ಪೂಜೆ, ಅನ್ನ ಪ್ರಸಾದ ವಿತರಣೆ, ರಥೋತ್ಸವ ಕುಶಾಲ ಪಿ. ಶೆಟ್ಟಿ ಮತ್ತು ಕುಟುಂಬಸ್ಥರು, ಸಾಮೂಹಿಕ ರಂಗಪೂಜೆ, ಮಹಾ ಪೂಜೆ  ನಡೆಯಲಿದೆ. ರವಿವಾರ 20/4/2025 ರಂದು ಬೆಳಿಗ್ಗೆ 6.00 ರಿಂದ ಸಾಮೂಹಿಕ ಚಂಡಿಕಾ ಯಾಗ ಪ್ರಾರಂಭ ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ, ಪಲ್ಲಪೂಜೆ, ಬ್ರಾಹ್ಮಣ ಸುಹಾಸಿನಿ ಅರಾಧನೆ,ದಂಪತಿ ಪೂಜೆ,11.30 ರಿಂದ ಸಭಾಕಾರ್ಯಕ್ರಮ ಜರಗಲಿದೆ. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಜಯ ಶೆಟ್ಟಿ ವಹಿಸಲಿದ್ದು ಮುಖ್ಯ ಅತಿಥಿ ಯಾಗಿ ಮಹಾರಾಷ್ಟ್ರ ಫೆಡರೇಶನ್ ಅಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ನ ಅಧ್ಯಕ್ಷರಾದ ವಿರಾರ್ ಶಂಕರ ಶೆಟ್ಟಿ ಉಪಸ್ಥಿತಿತರಿರುವರು, ಅತಿಥಿಗಳಾಗಿ ರೈ ಎಜುಕೇಷನ್ ಟ್ರಸ್ಟ್ ಹಾಗೂ ಸೆಂಟ್ ಅಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ಬಾಯಂದರ್ ಇದರ ಕಾರ್ಯಾಧ್ಯಕ್ಷ ಅರುಣೋದಯ ಎಸ್.ರೈ, ಬಿಲ್ಲವರ ಅಸೋಸಿಯೇಷನ್ ಇದರ ಅಧ್ಯಕ್ಷ ಹರೀಶ್ ಜಿ. ಅಮೀನ್, ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ  ಸುಬ್ಬಯ್ಯ ಎ. ಶೆಟ್ಟಿ, ಎ.ಪಿ.ಎಂ.ಸಿ ಕಲ್ಯಾಣ್ ಇದರ ನಿರ್ದೇಶಕ ಸುಧಾಕರ ಡಿ. ಮೋಹಪೆ, ಎಶಿಯಾಟಿಕ್  ಕ್ರೇನ್ ಸರ್ವಿಸಸ್ ನ ಗಣೇಶ್ ಆರ್.ಪೂಜಾರಿ, ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಭೋದ್ ಡಿ. ಭಂಡಾರಿ, ಉಲ್ಲಾಸನಗರ ಶಿವಸೇನೆಯ ಶಹರ್ ಪ್ರಮುಖ್ ದಿಲೀಪ್ ಡಿ.ಗಾಯಕ್ವಾಡ್ ಉಪಸ್ಥಿತರಿರುವರು. ಈ ವೇದಿಕೆಯಲ್ಲಿ  ಮಂಡಳಿಯ ಸಲಹೆಗಾರ  ಸುಧೀರ್ ಶೆಟ್ಟಿ ವಂಡ್ಸೆ, ಹಿರಿಯ ಸದಸ್ಯ ಮೋಹನ್ ಮೂಲ್ಯ, ಹಿರಿಯ ಭಕ್ತೆ ಜಯಂತಿ ಶೆಟ್ಟಿ ಇವರನ್ನು  ವಿಶೇಷವಾಗಿ ಸನ್ಮಾನಿಸಲಾಗುವುದು.
ಮಧ್ಯಾಹ್ನ 1.00 ಗಂಟೆಯಿಂದ ಅನ್ನ ಸಂತರ್ಪಣೆ ( ಸ್ವಾತಿ ಮತ್ತು ವಿಶಾಲ್ ಸಾಂತ ಕುಟುಂಬಿಕರಿಂದ ) ಸಂಜೆ 4.00 ಗಂಟೆಗೆ ಬಲಿ ಉತ್ಸವ, ಶೋಭಾಯಾತ್ರೆ, ಅಷ್ಟವದನ ಸೇವೆ,ಕಟ್ಟೆ ಪೂಜೆ, ಪ್ರಸಾದ ವಿತರಣೆ ನಡೆದು ರಾತ್ರಿ 8.00 ಗಂಟೆಗೆ ಅನ್ನ ಸಂತರ್ಪಣೆ ( ಜಗದೀಶ್ ಬಂಜನ್ ಕುಟುಂಬಿಕರಿಂದ) ರಾತ್ರಿ ಗೀತಾಂಭಿಕಾ ಕೃಪಾಪೋಷೀತ ಯಕ್ಷಗಾನ ಮಂಡಳಿ ಅಸಲ್ಪ ಘಾಟ್ಕೋಪರ್ ಇವರ ನುರಿತ ಕಲಾವಿದರಿಂದ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಪರಿವಾರದ ಸೇವಾರೂಪದಲ್ಲಿ  ಕೊಲ್ಲೂರು ಕ್ಷೇತ್ರ ಮಹಾತ್ಮ ಯಕ್ಷಗಾನ ಜರಗಲಿದೆ. ಸೋಮವಾರ 21-4-25 ರ ಸೋಮವಾರ ಬೆಳಿಗ್ಗೆ ನವಕಲಶಾರಾಧನೆ,ಪ್ರಧಾನ ಹೋಮ, ಪಂಚಾಮೃತ ಅಭಿಷೇಕ,ಕಲಶಾಭಿಷೇಕ, ಮಹಾಪೂಜೆ, ಸಂಜೆ 5.00 ರಿಂದ ಕುಂಕುಮಾರ್ಚನೆ, ಲಲಿತ ಸಹಸ್ರ ನಾಮಾರ್ಚನೆ, ಸಪ್ತಶತಿ ಪಾರಾಯಣ, ಮಹಾ ಪೂಜೆ, ಋತ್ವಿಕ ಸಂಭಾವನೆ, ಮಂಗಳ  ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.
ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ 63 ನೇ ವಾರ್ಷಿಕ ಮಹಾ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರೆಲ್ಲರೂ ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಮೂಕಾಂಬಿಕಾ ದೇವಿ ಹಾಗೂ ಶ್ರೀ ನಿತ್ಯಾನಂದ ಸ್ವಾಮಿಯ ಕೃಪೆಗೆ ಪಾತ್ರರಾಗ ಬೇಕೆಂದು ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷ ಚಂದ್ರಕಾಂತ ಎಸ್. ಶೆಟ್ಟಿ, ಅಧ್ಯಕ್ಷ ರಾಜೇಶ್ ಜೆ. ಶೆಟ್ಟಿ, ಸಂಚಾಲಕ ಕರುಣಾಕರ ಜೆ. ಶೆಟ್ಟಿ, ಉಪಾಧ್ಯಕ್ಷ ಯುವರಾಜ ಪೂಜಾರಿ, ಗೌ.ಪ್ರ. ಕಾರ್ಯದರ್ಶಿ ಜಗದೀಶ್ ಎಂ. ಶೆಟ್ಟಿ ಬೆಳಂಜೆ,ಗೌ. ಕೋಶಾಧಿಕಾರಿ ಸಂತೋಷ ಎಚ್. ಶೆಟ್ಟಿ, ಜತೆ ಕಾರ್ಯದರ್ಶಿ ಗಣೇಶ್ ಶೆಟ್ಟಿ ನಂದ್ರೋಳಿ ಮತ್ತು ಪ್ರೇಮ್ ಕುಮಾರ್ ಎಸ್. ರೈ,  ಜತೆ ಕೋಶಾಧಿಕಾರಿ ಸದಾನಂದ ಐ. ಸಾಲ್ಯಾನ್ ಮತ್ತು ವಸಂತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾದ್ಯಕ್ಷ  ದೀಪಕ್ ಎಸ್. ಬಂಗೇರ, ಟ್ರಸ್ಟಿಗಳು,  ಉಪ ಸಮಿತಿಯ ಸದಸ್ಯರು, ಸಲಹೆಗಾರರು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು, ದೇವಸ್ಥಾನದ ತಂತ್ರಿಗಳು, ಪ್ರಧಾನ ಅರ್ಚಕರು ವಿನಂತಿಸಿದ್ದಾರೆ.

Related posts

ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರ, ಕಾಸರಗೋಡು, ಮುಂಬೈ ಘಟಕ ಡಿ 21.ಬ್ರಹ್ಮಕಲಶೋತ್ಸವದ ವಿಶೇಷ ಸಭೆ.

Mumbai News Desk

ದಹಿಸರ್ ಪೂರ್ವ. ರಾವಲ್ಪಾಡ   ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನ, ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆ.

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ. ಡಿ 7ರಂದು ಮುಂಬೈಯಲ್ಲಿ  ವಿಶ್ವಬಂಟರ ಸಮಾಗಮ  ಬಂಟರ  ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ: ಐಕಳ ಹರೀಶ್ ಶೆಟ್ಟಿ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ : ಮಾ. 9ರಂದು 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.

Mumbai News Desk