
ಪ್ರತಿಷ್ಠಾನದ ಕಾರ್ಯದಿಂದ ಸಮಾಜ ಒಗ್ಗಟ್ಟು : ಮಾಣಿಲ ಶ್ರೀ
ಒಗ್ಗಟ್ಟು ಸಮಾಜದ ಶಕ್ತಿಿ. ಅಂತೆಯೇ ಕುಲಾಲ ಸಮುದಾಯ ಕೂಡ ಒಗ್ಗಟ್ಟಿಿನಿಂದ ಮುನ್ನಡೆದು ಬೆಳೆಯಬೇಕು ಎಂದು ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಾಮೀಜಿ ಹೇಳಿದ್ದಾಾರೆ.
ಕುಲಾಲ ಪ್ರತಿಷ್ಠಾಾನ ಮಂಗಳೂರು ವತಿಯಿಂದ ಮಂಗಳೂರಿನ ಅಂಬೇಡ್ಕರ್ ಭವನದ ದಿ ಸುಮಿತ್ರ ರಾಜು ಸಾಲ್ಯಾಾನ್ ವೇದಿಕೆಯಲ್ಲಿ ರವಿವಾರ ಜರಗಿದ ‘ಕುಲಾಲ ಪರ್ಬ’ವನ್ನು ಉದ್ಘಾಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಒಗ್ಗಟ್ಟು ಕಳೆದುಕೊಂಡರೆ ನಮ್ಮತನವನ್ನು ಕಳೆದುಕೊಂಡಂತೆ. ಯಾವುದೇ ವ್ಯತ್ಯಾಾಸ, ಭಿನ್ನಾಾಭಿಪ್ರಾಾಯಗಳಿದ್ದರೂ ಅದನ್ನು ಪ್ರೀತಿ, ಬಾಂಧವ್ಯ ಮತ್ತು ಐಕಮತ್ಯದಿಂದ ಎದುರಿಸಿ ಮುನ್ನಡೆಯಬೇಕು. ರಾಜಕೀಯವಾಗಿಯೂ ಸಮುದಾಯ ಬೆಳೆಯಬೇಕು. ಆ ನಿಟ್ಟಿಿನಲ್ಲಿ ನಾಯಕರನ್ನು ಬೆಳೆಸಬೇಕು. ರಾಜಕೀಯ ಶಕ್ತಿಿಯೂ ದೊರೆತಾಗ ಸಮಾಜದ ಅಭಿವೃದ್ಧಿಿಗೆ ಅನುಕೂಲವಾಗುತ್ತದೆ. ಕುಲಾಲ ಸಮಾಜ ಮಾನವೀಯ ಮೌಲ್ಯ, ಸ್ವಾಾಮಿನಿಷ್ಠೆೆ, ಭಕ್ತಿಿಗೆ ಹೆಸರುವಾಸಿಯಾದ ಸಜ್ಜನರ ಸಮಾಜ. ಅನೇಕ ಶೋಷಣೆಗಳನ್ನು ಎದುರಿಸಿಕೊಂಡು ಬಂದು ಸಮಾಜದ ಎಲ್ಲ ಜಾತಿಯವರೊಂದಿಗೂ ಅನ್ಯೋೋನ್ಯತೆಯಿಂದ ಬೆರೆತು ಐಕ್ಯತೆಯ ಸಂದೇಶ ಸಾರಿದೆ ಎಂದು ಮಾಣಿಲ ಶ್ರೀಗಳು ಹೇಳಿದರು.

ಸಾಧಕರು ಪ್ರೇರಣೆಯಾಗಲಿ
ಸಂಘ ಅಥವಾ ಜಾತಿಗೆ ಸಂಬಂಧಿಸಿದ ಯಾವುದೇ ವ್ಯವಸ್ಥೆೆಗೆ ಸಂಬಂಧಿಸಿ ವೈಪರೀತ್ಯ, ಅಭಿಪ್ರಾಾಯ ಬೇಧ, ವ್ಯತ್ಯಾಾಸ ಬರುವುದು ಸಹಜ. ಆದರೆ ಅದನ್ನು ಮೀರಿ ಒಂದಾಗುವ ಶಕ್ತಿಿಯನ್ನು ದೇವರು ನೀಡಿದ್ದಾಾರೆ. ಹಿರಿಯರು ಅನೇಕ ಕಠಿನ ಸ್ಥಿಿತಿಗಳನ್ನು ನಿಭಾಯಿಸಿಕೊಂಡು ಬಂದಿದ್ದಾಾರೆ. ಅಂತೆಯೇ ಇಂದಿಗೂ ಸಮಾಜವನ್ನು ಬೆಳೆಸುವ ಜವಾಬ್ದಾಾರಿ ಪ್ರತಿಯೋರ್ವರದ್ದಾಾಗಿದೆ. ಅಭಿಪ್ರಾಾಯ ಬೇಧ ಮರೆತು ಒಂದಾಗಬೇಕು. ಮಕ್ಕಳಿಗೆ ಸಾಧಕರ ಬಗ್ಗೆೆ ತಿಳಿಸಬೇಕು. ಅವರು ಪ್ರೇರಣೆ ಪಡೆಯುವಂತಾಗಬೇಕು. ಈ ಜವಾಬ್ದಾಾರಿ ಹೆತ್ತವರ ಮೇಲಿದೆ. ಸಾಧಕರನ್ನು ಸಮ್ಮಾಾನಿಸುವ ಕಾರ್ಯಕ್ರಮ ಶ್ಲಾಾಘನೀಯ ಎಂದು ಸ್ವಾಾಮೀಜಿ ಹೇಳಿದರು.
ನಿವೃತ್ತ ಪ್ರಾಾಚಾರ್ಯ, ದ.ಕ ಜಿಲ್ಲಾಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಮಾಜಿ ಅಧ್ಯಕ್ಷ ಎಂ.ಪಿ.ಬಂಗೇರ ಅವರು ಮಾತನಾಡಿ, ಪ್ರತಿಭೆಗಳ ಅನಾವರಣಕ್ಕೆೆ ವೇದಿಕೆ ಕಲ್ಪಿಿಸಿಕೊಟ್ಟಿಿರುವುದು, ಅಶಕ್ತ ಬಂಧುಗಳಿಗೆ ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸಮ್ಮಾಾನಿಸಿರುವುದು ಶ್ಲಾಾಘನೀಯ ಎಂದು ಹೇಳಿದರು.
ನ್ಯಾಾಯವಾದಿ, ಕುಲಶೇಖರ ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್‌ಟ್‌ನ ಅಧ್ಯಕ್ಷ ರಾಮಪ್ರಸಾದ್ ಎಸ್. ಅವರು ಮಾತನಾಡಿ, ಪ್ರತಿಷ್ಠಾಾನವು ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆೆ ನೀಡಿ ಸಮಾಜದ ಶ್ರೇಯಸ್ಸಿಿಗಾಗಿ ಅದ್ಭುತ ಕೆಲಸ ಮಾಡುತ್ತಿಿದೆ ಎಂದು ಹೇಳಿದರು.

ಬೆಳ್ಮಣ್ ಕುಂಭ ನಿಧಿ ಕ್ರೆೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಕುಶ ಆರ್. ಮೂಲ್ಯ ಅವರು ಮಾತನಾಡಿ, ಇದು ಸಮಾಜಮುಖಿ ಕಾರ್ಯಕ್ರಮ. ಸಮಾಜ ಮುಂದುವರೆಯಬೇಕಾದರೆ, ಸರ್ವತೋಮುಖವಾಗಿ ಬೆಳೆಯಬೇಕಾದರೆ ಇಂತಹ ಟ್ರಸ್‌ಟ್‌ಗಳ ಮೂಲಕ ನಿರಂತರ ಪ್ರೋೋತ್ಸಾಾಹದ ಅಗತ್ಯವಿದೆ. ಪ್ರತೀ ವರ್ಷ ನಿರಂತರವಾಗಿ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿದರು.
ಕುಲಾಲ ಪ್ರತಿಷ್ಠಾಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಅಧ್ಯಕ್ಷತೆ ವಹಿಸಿದ್ದರು. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾಾನದ ಪ್ರಧಾನ ಅರ್ಚಕ ಶಿವಾನಂದ ಕನಡ, ದ.ಕ ಜಿಲ್ಲಾಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಹಿಳಾ ವಿಭಾಗದ ಅಧ್ಯಕ್ಷೆೆ ಮಮತಾ ಅಣ್ಣಯ್ಯ ಕುಲಾಲ್, ಓಲ್‌ಡ್‌ಕೆಂಟ್ ರೋಡ್ ಶ್ರೀ ದೇವಿ ದೇವಸ್ಥಾಾನದ ಅಧ್ಯಕ್ಷ ಸದಾಶಿವ ಕುಲಾಲ್ ಅತ್ತಾಾವರ, ಕುಲಾಲ ಕುಂಬಾರರ ಯುವ ವೇದಿಕೆಯ ರಾಜ್ಯಾಾಧ್ಯಕ್ಷ ಗಂಗಾಧರ ಬಂಜನ್, ಕಾಸರಗೋಡು ಜಿಲ್ಲಾಾ ಕುಲಾಲ ಸಂಘದ ಅಧ್ಯಕ್ಷ ನ್ಯಾಾಯವಾದಿ ರವೀಂದ್ರ ಮುನ್ನಿಿಪ್ಪಾಾಡಿ, ಸುರತ್ಕಲ್ ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್, ಶ್ರೀ ವೀರ ನಾರಾಯಣ ದೇವಸ್ಥಾಾನದ ಶ್ರೀ ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್ ಅಟ್ಲೂರು, ಸುನಿಲ್ ಸಾಲ್ಯಾಾನ್, ದೇವಕಿ ಸಾಲ್ಯಾಾನ್, ಕುಲಾಲ ಪ್ರತಿಷ್ಠಾಾನದ ಆಡಳಿತ ಟ್ರಸ್ಟಿಿ ಬಿ.ಸುರೇಶ್ ಕುಲಾಲ್, ಟ್ರಸ್ಟಿಿಗಳಾದ ಮಾಸ್ಟರ್ ಬಿ.ಸೀತಾರಾಮ ಕುಲಾಲ್, ಬಿ.ನಾಗೇಶ್ ಕುಲಾಲ್, ಬಿ.ದಿನೇಶ್ ಕುಲಾಲ್, ಬಿ.ಪ್ರೇಮಾನಂದ ಕುಲಾಲ್ ಉಪಸ್ಥಿಿತರಿದ್ದರು. ಟ್ರಸ್ಟಿಿ ನ್ಯಾಾಯವಾದಿ ಲಕ್ಷ್ಮಣ್ ಕುಂದರ್ ಸ್ವಾಾಗತಿಸಿದರು.
ಕುಲಾಲ ಸಮಾಜದ 25 ಸಾಧಕರಿಗೆ ‘ಕುಲಾಲ ಸಾಧಕ ಪ್ರಶಸ್ತಿಿ’ ನೀಡಿ ಗೌರವಿಸಲಾಯಿತು. ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದವು. ನವೀನ್ ಪುತ್ತೂರು ಮತ್ತು ಪ್ರವೀಣ್ ಬಸ್ತಿಿ ಕಾರ್ಯಕ್ರಮ ನಿವಹಿಸಿದರು. ಸುಧಾ ಪುರುಷೋತ್ತಮ್ ವಂದಿಸಿದರು
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
B. Dinesh Kulal
Mob.: 9821868674