
ರಕ್ತದಾನದಂತಹ ಜನಪರ ಸೇವೆಗೆ ಎಲ್ಲರೂ ಕೈಜೋಡಿಸೋಣ – ಹರಿದೀಶ್ ಕುಮರ್ ಬಿ.
ಮುಂಬಯಿ : ಧಾರ್ಮಿಕ ಸೇವೆಯೊಂದಿಗೆ ಬೊರಿವಲಿ ಪೂರ್ವದ ಶ್ರೀ ಜಗದೀಶ್ವರಿ ಬ್ರಹ್ಮ ಬೈದರ್ಕಳ ಗರಡಿಯ ವತಿಯಿಂದ ರಕ್ತದಾನ ಶಿಬಿರ ನಡೆಸಿ ಇಲ್ಲಿ ಸಂಗ್ರಹವಾದ ರಕ್ತವನ್ನು ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುತ್ತಿದ್ದು ನಿಜಕ್ಕೂ ಪುಣ್ಯ ಕಾರ್ಯ. ಇಂತಹ ಕಾರ್ಯದಲ್ಲಿ ಬಾಗವಹಿಸುವುದು ನನ್ನ ಸೌಬಾಗ್ಯ. ನಾವೆಲ್ಲರೂ ಸೇರಿ ಇಂತಹ ಜನಪರ ಕಾರ್ಯಕ್ಕೆ ಪ್ರೋತ್ಸಾಹಿಸೋಣ ಎಂದು ಐಬಿಪಿಎಸ್ ನಿರ್ದೇಶಕ ತುಳು-ಕನ್ನಡಿಗ ಹರಿದೀಶ್ ಕುಮರ್ ಬಿ. ನುಡಿದರು.



ಏ. 20ರಂದು ಬೊರಿವಲಿ ಪೂರ್ವ, ಶ್ರೀ ಜಗದೀಶ್ವರಿ ಬ್ರಹ್ಮ ಬೈದರ್ಕಳ ಗರಡಿಯ ವತಿಯಿಂದ ಗರಡಿಯ ಪ್ರಮುಖರಾದ ಶೇಖರ ಇಂದು ಸಾಲ್ಯಾನ್ ಇವರ ನೇತೃತ್ವದಲ್ಲಿ ಬೊರಿವಲಿ ಬ್ಲಡ್ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ನಗರ ಸೇವಕಿ ಆಸವರಿ ಪಾಟೀಲ್ ಉಪಸ್ಥಿತರಿದ್ದು ರಕ್ತದಾನ ಶಿಬಿರಕ್ಕೆ ಶುಭ ಹಾರೈಸುತ್ತಾ ಸಂತೋಷ ವ್ಯಕ್ತಪಡಿಸಿ ಶ್ರೀ ಜಗದೀಶ್ವರಿ ಕ್ಷೇತ್ರವನ್ನು ಜೀರ್ಣೋದ್ದಾರ ಮಾಡವ ಅಗತ್ಯವಿದ್ದು ಸಮಿತಿಯೊಂದಿಗೆ ನಾವೆಲ್ಲರೂ ಸಹರಿಸೋಣ ಎಂದರು.

ಆದಿತ್ಯ ಬಿರ್ಲಾ ಮನಿ ಲಿಮಿಟೆಡ್ ನ ಸಿ.ಇ.ಓ. ಅಶೋಕ್ ಸುವರ್ಣ ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುವ ರಕ್ತದಾನ ಶಿಬಿರವು ಈ ಧಾರ್ಮಿಕ ಕ್ಷೇತ್ರದಲ್ಲಿ ನಡೆಯುತ್ತಿರುವುದು ಕ್ಷೇತ್ರದ ಸಮಿತಿಯ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ರಕ್ತದಾನ ಶಿಬಿರ ನಡೆದಿದ್ದು ನೂರಾರು ಮಂದಿ ಬಾಗವಹಿಸಿ ರಕ್ತದಾನ ನೀಡಿ ಸಹಕರಿದರು.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ರಕ್ತದಾನ ಶಿಬಿರ ನಡೆದಿದ್ದು ನೂರಾರು ಮಂದಿ ಬಾಗವಹಿಸಿ ರಕ್ತದಾನ ನೀಡಿ ಸಹಕರಿದರು.
ಕ್ಷೇತ್ರದ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ್ ಸಾಲ್ಯಾನ್, ಕಾರ್ಯದರ್ಶಿ ಸಿ.ಎ. ಅಭಿಜಿತ್ ಶೆಟ್ಟಿ, ಕೋಶಾಧಿಕಾರಿ ಆಶಿಶ್ ಕೋಟ್ಯಾನ್, ಧನೀಶ್ ಕೋಟ್ಯಾನ್, ಕರುಣೇಶ್ ಕೋಟ್ಯಾನ್, ಖ್ಯಾತ ರಂಗ ನಿರ್ದೇಶಕ ಕರುಣಾಕರ ಕಾಪು, ಸದಾಶಿವ ಸಾಲ್ಯಾನ್ ವಾರಂಗ, ದಯಾನಂದ ಪೂಜಾರಿ ವಾರಂಗ, ವಿಶ್ವನಾಥ ಬಂಗೇರ, ರಾಘು ಕೋಟ್ಯಾನ್, ಮಹಿಳಾ ಸದಸ್ಯರು ಉಪಸ್ಥಿತರಿದ್ದು ರಕ್ತದಾನ ಶಿಬಿರದ ಯಶಸ್ಸಿಗೆ ಸಹಕರಿಸಿದರು.