
ಸೀತಾ ಪುತ್ರನ್ ಮೊಗವೀರ ಸಮಾಜಕ್ಕೆ ಆದರ್ಶ: ಸುರೇಶ್ ಕಾಂಚನ್.
ಚಿತ್ರ ವರದಿ : ದಿನೇಶ್ ಕುಲಾಲ್.
ದಹಿಸರ್ ಪೂರ್ವದ ಚೆಕ್ ನಾಕ ಬಳಿಯ ಜನಪ್ರಿಯ ಹೋಟೆಲ್ ಸಾಯಿ ಸನ್ನಿಧಿ ಹೋಟೆಲ್ ಮಾಲಕರಾದ ದಿವಂಗತ ಕೃಷ್ಣ ಪುತ್ರನ್ ವರ ಧರ್ಮಪತ್ನಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮೀರಾ ಭಾಯಂದರ್ ಸಮಿತಿಯ ಗೌರವ ಕಾರ್ಯಧ್ಯಕ್ಷ ಸಂತೋಷ್ ಪುತ್ರನ್ ಅವರ ಮಾತ್ರಶ್ರೀ ಸೀತಾ ಕೃಷ್ಣ ಪುತ್ರನ್ ಅವರ ನುಡಿ ನಮನ , ಏಪ್ರಿಲ್ 20 ರಂದು ಮಧ್ಯಾಹ್ನ ಬೊರಿವಲಿ ಪಶ್ಚಿಮ, ಪ್ಯಾರಡೈಸ್ ಬ್ಯಾಂಕ್ವೆಟ್ & ಲಾನ್ ನಲ್ಲಿ ನಡೆಯಿತು.



ಸಭೆಯಲ್ಲಿ ಉಪಸ್ತರಿದ್ದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಬಹಳ ಕಷ್ಟದ ದಿನಗಳಲ್ಲಿ ಮಕ್ಕಳನ್ನು ಬೆಳೆಸಿ ಉತ್ತಮ ಸಂಸ್ಕಾರವನ್ನು ನೀಡಿ, ಸಮಾಜಕ್ಕೆ ಆದರ್ಶರಾಗವಂತೆ ಮಾಡಿದ ಸೀತಾ ಪುತ್ರನ್ ಅವರ ಬದುಕು ಮೊಗವೀರ ಸಮಾಜಕ್ಕೆ ಆದರ್ಶ ಎಂದು ನುಡಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟಿ ಅಜಿತ್ ಸುವರ್ಣ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಮಾಜಿ ಅಧ್ಯಕ್ಷ ರಮೇಶ್ ಮೆಂಡನ್, ಮತ್ತು ಮೀರಾ ಭಯಂದರ್ ಶಾಸಕ ನರೇಂದ್ರ ಮೆಹ್ತಾ ಪುಷ್ಪ ನಮನ ಸಲ್ಲಿಸಿದರು.

ಸಭೆಯಲ್ಲಿ ಮೊಗವೀರ ಸಮಾಜದ ಬಂಧುಗಳು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮಾಜಿ ಅಧ್ಯಕ್ಷ ಗೋಪಾಲ್ ಪುತ್ರನ್, ಮಹಾಬಲ್ ಕುಂದರ್, ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ , ಬಂಟರ ಸಂಘದ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ರಾಜೇಶ್ ಎನ್.ಶೆಟ್ಟಿ (ಸಿಎಂಡಿ, ರಾಕ್ಷಿ ಡೆವಲಪರ್ಸ್) ತುಂಗಾ ಆಸ್ಪತ್ರೆಯ ನಿರ್ದೇಶಕ ಉಮೇಶ್ ಶೆಟ್ಟಿ ಮತ್ತಿತರ ಉದ್ಯಮಿಗಳು ಪಾಲ್ಗೊಂಡು ಸೀತಾ ಪುತ್ರನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಗಣೇಶ್ ಎರ್ಮಾಳ್ ತಂಡದವರಿಂದ ಭಜನೆ ನಡೆಯಿತು.
ಸೀತಾ ಕೃಷ್ಣ ಪುತ್ರನ್ ಪುತ್ರ ಸಂತೋಷ್ ಪುತ್ರನ್ , ಸುಚಿತ್ರ ಪುತ್ರನ್ (ಸೊಸೆ)ಯಶೋದಾ ನಾಯ್ಕ್ (ಮಗಳು) ಮೀನಾಕ್ಷಿ ಕರ್ಕೇರ (ಮಗಳು) ಶೇಖರ್ ಕರ್ಕೇರ (ಅಳಿಯ) ಮೊಮ್ಮಕ್ಕಳಾದ ಮನೀಶ್ ನಾಯ್ಕ್, ನೀಮಾ ನಾಯ್ಕ್, ನಿಶಾ ನಾಯ್ಕ್, ಶ್ರದ್ಧಾ ಕಾಂಚನ್, ನಿರ್ಮಿತ್ ಕರ್ಕೇರಾ, ಕೇಶಿಕಾ ಕರ್ಕೇರಾ, ಹರ್ಷವರ್ಧನ್ ಪುತ್ರನ್ ಮತ್ತು ಕೈರಾ ಪುತ್ರನ್ ಮತ್ತಿತರ ಕುಟುಂಬದ ಬಂಧುಗಳು ಉಪಸ್ತರಿದ್ದರು.