
ಮುಂಬಯಿ : ತುಳು ಬಾಷೆ ಇತರ ಬಾಷೆಗೆ ಹೋಲಿಸಿದಲ್ಲಿ ಅತೀ ಸುಂದರವಾದ ಬಾಷೆ. ತುಳು ಬಾಷೆ ಯ ರಕ್ಷಣೆ ಪ್ರತಿಯೊಬ್ಬ ತುಳುವರ ಕರ್ತವ್ಯ. ಯಾವುದೇ ಬಾಷೆ ಸತ್ತಲ್ಲಿ ಜನರು ಸುರಕ್ಷಿತರು ಎನ್ನಲಾಗುದಿಲ್ಲ. ಪರಶುರಾಮ ಶೃಷ್ಟಿಯ ತುಳುನಾಡಿನ ತುಳು ಬಾಷೆಯನ್ನು ಎಲ್ಲರೂ ಉಳಿಸಿ ಬೆಳೆಸುತ್ತಾ ಸರಕಾರವೂ ತುಳು ಬಾಷೆಗೆ ಮಹತ್ವ ನೀಡುವಂತಾಗಲಿ ಎಂದು ಪ್ರಶಸ್ತಿ ವೆಜೇತ ಹಿರಿಯ ಸಾಹಿತಿ ಶಿಮಂತೂರು ಚಂದ್ರಹಾಸ ಸುವರ್ಣ ನುಡಿದರು.

ಏ.20ರಂದು ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಯುವ ವಿಭಾಗದ ಜಂಟಿ ಆಶ್ರಯದಲ್ಲಿ ಸಂಘದ ನೂತನ ಸ್ಥಳಾಂತರಗೊಂಡ ಕಛೇರಿಯಲ್ಲಿ ದಿ.ಜಯಕರ ಪೂಜಾರಿ ವೇದಿಕೆಯಲ್ಲಿ ದಿ.ನಿಟ್ಟೆ ಸುಧಾಕರ ಶೆಟ್ಟಿ ಮತ್ತು ದಿ. ಎಸ್. ಜೆ .ಶೆಟ್ಟಿ ಸಂಸ್ಮರಣ ದತ್ತಿನಿಧಿಯ ಅಂಗವಾಗಿ ನಡೆದ ತುಳು ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಮಾತೃಬಾಷೆ ತುಳು ಎಂಬುದಾಗಿ ನಮೂದಿಸುವುದು ಅತೀ ಅಗತ್ಯ. ತುಳು ಬಾಷೆ ಸಂಸ್ಕೃತಿಯು ಕರಾವಳಿಯ ಶ್ರೀಮಂತ ಸಂಸ್ಕೃತಿಯಾಗಿದ್ದು ನಮ್ಮ ನಾಡಿನ ಕೆಲವೆಡೆ ನಡೆಯುತ್ತಿರುವ ದೈವಾರಾಧನೆ ಹಾಗೂ ಭೂತಾರಾದನೆ ಸಂದರ್ಭದಲ್ಲಿ ನಮ್ಮವರ ಕೆಲವು ಪದ್ದತಿ ಯನ್ನು ನೋಡುವಾಗ ಅಸಮಾಧಾನವಾಗುತ್ತಿದೆ. ಆದರೆ ಮುಂಬಯಿ ಮಹಾನಗರದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದಂತಹ ಸಂಘಟನೆಗಳು ಕನ್ನಡದೊಂದಿದೆ ತುಳು ಬಾಷೆಗೂ ಮಹತ್ವ ನೀಡುತ್ತಿವುದು ಸ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಉಳವಾರ ಅವರು ಬಹಳ ಸುಂದರವಾಗಿ ತುಳು ಬಾಷೆಯಲ್ಲಿ ಮಾತನಾಡಿ ಉಪಸ್ಥಿತರಿದ್ದ ಎಲ್ಲಾ ತುಳು ಕನ್ನಡಿಗರ ಮನ ಸೆಳೆಯುತ್ತಾ ತುಳು ಬಾಷೆ ಹಾಗೂ ತುಳು ಸಂಸೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಪ್ರಸ್ತಾವನೆಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಮೆಂಡನ್, ಮಾಜಿ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ, ಹಿರಿಯರಾದ ಚಿತ್ರಾಪು ಕೆ. ಎಂ.ಕೋಟ್ಯಾನ್, ಹರಿಶ್ಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್, ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶಾಂತಾ ಏನ್ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಆಚಾರ್ಯ, ಅತಿಥಿ ಕರುಣಾಕರ ಶೆಟ್ಟಿ, ಸಂಘದ ಕೋಶಾಧಿಕಾರಿ ಆನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯುವ ವಿಭಾಗದ ಮಧುರಾ ಆಚಾರ್ಯ ನಿರ್ವಹಿಸಿದರು. ಶಕುಂತಲಾ ಆಚಾರ್ಯ, ವಿದ್ಯಾ ಆಚಾರ್ಯ ಮತ್ತು ಪ್ರಮಿಳಾ ಆಚಾರ್ಯ ಪ್ರಾರ್ಥನೆ ಮಾಡಿದರು. ವಿದ್ಯಾ ಆಚಾರ್ಯ ವಂದನಾರ್ಪಣೆ ಮಾಡಿದರು.
ಕಾರ್ಯಕಾರಿ ಸಮಿತಿ, ಯುವ ವಿಭಾಗ, ಗ್ರಂಥಾಯನ ವಿಭಾಗ ಹಾಗೂ ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು.