
‘ಕರುನಾಡ ಸಿರಿ’ ಸಂಸ್ಥೆಯು ದಿನಾಂಕ 20 ಏಪ್ರಿಲ್ 2025 ರಂದು ಸ್ಯಾಂತಾಕ್ರೂಜ್ ನ ಮಿಲನ್ ಸಬ್ ವೇ ಬಳಿಯ ಲಯನ್ಸ್ ಕ್ಲಬ್ ಮೈದಾನದಲ್ಲಿ ಕ್ರಿಕೆಟ್ ಮಹೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಿತ್ತು. ಮಕ್ಕಳಿಗೆ ಹಾಗೂ ಹಿರಿಯರಿಗಾಗಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದ್ದ ಕ್ರಿಕೆಟ್ ಮಹೋತ್ಸವ ಬೆಳಿಗ್ಗೆ 09.30 ಯಿಂದ ಸಂಜೆ 05.30 ವರೆಗೆ ನಡೆಯಿತು. ಇದರಲ್ಲಿ ಹಿರಿಯರ ಒಟ್ಟು 08 ತಂಡಗಳು ಭಾಗವಹಿಸಿದರೆ, ಮಕ್ಕಳ 10 ತಂಡಗಳು ಭಾಗವಹಿಸಿದವು. ಹಾಗೂ ಹುಡುಗಿಯರ ಹಾಗು ಹುಡುಗರ 02 ತಂಡಗಳು ಭಾಗವಹಿಸಿದ್ದವು.
ಮೊದಲಿಗೆ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ”ನಮಸ್ಟಟ್ಸ್ ಕೋಚಿಂಗ್ ಕ್ಲಾಸ್’ನ ಮಾಜಿ ಹಾಗೂ ಹಾಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಜೊತೆಗೆ, ಧಾರವಿಯ ‘ದಿ ಹೋಪ್ ಫೌಂಡೇಷನ್’ನ ಮಕ್ಕಳೂ ಬಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಜೆಪಿ ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುನೀತ ಶರ್ಮ ಮಾತನಾಡುತ್ತ “ನಾನು ಯಾವುದೇ ಜಾತಿ ಪಾತಿ ನಂಬುವುದಿಲ್ಲ, ನಾನು ಮಾನವಿಯತೆಯನ್ನು ನಂಬುತ್ತೇನೇ, ನಾನು ಯವಾಗಲು ನಿಮಗೆ ಸಹಕಾರ ನೀಡುತೇನೆ ಎಂದರು.
ಇನ್ನೊರ್ವ ಆತಿಥಿಯಾಗಿ ಉಪಸ್ಥಿತರಿದ್ದ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷೆ ಶ್ರೀದೇವಿ ರಾವ್ ಅವರು ಕರುನಾಡ ಸಿರಿಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅತಿಥಿಗಳಿಗೆ ಕರುನಾಡ ಸಿರಿಯ ಮಹಿಳ ವಿಭಾಗದ ಸದಸ್ಯರಾದ ಲಲಿತ ಗೌಡ, ಮಮತ ಗೌಡ, ಅಮ್ರತ ಗೌಡ ಅವರು ಸನ್ಮಾನ ಮಾಡಿ, ತುಳಸಿ ಗಿಡವನ್ನು ನೀಡಿದರು.




ಹಿರಿಯರ ವಿಭಾಗದಲ್ಲಿ ಲಲಿತ ಏಸ್. ಕೆ ಫೌಂಡೇಷನ್ ದ್ವಿತಿಯ ಸ್ಥಾನ ಪಡೆದರೆ, ಪ್ರೀತಮ 11 ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಮಕ್ಕಳ ವಿಭಾಗದಲ್ಲಿ ಶ್ಯಡೋ ಸ್ಟ್ರೈಕರ್ಸ ದ್ವಿತಿಯ ಸ್ಥಾನ ಪಡೆದರೆ, NS ಟೋಕೋ ರೈಡರ್ಸ ಮೊದಲ ಸ್ಥಾನ ಪಡೆಯಿತು.
ಬಾಲಚಂದ್ರ ದೇವಾಡಿಗ ಪ್ರಾರಂಭದಲ್ಲಿ ಸ್ವಾಗತಿಸಿದರು.
ಭೀಮರಾಯ ಚಿಲ್ಕ ಕೊನೆಗೆ ವಂದಿಸಿದರು.
ದುರ್ಗಪ್ಪ ಸಾರ್, ಭೀಮರಾಯ ಚಿಲ್ಕ ಪಂದ್ಯಾಟದ ವೀಕ್ಷಕ ವಿವರಣೆ ಮಾಡಿದರು.
ಕಾರ್ಯಕ್ರಮದ ಯಶಸ್ಸಿಗೆ ‘ಕರುನಾಡ ಸಿರಿ’ ತಂಡದ ಅಧ್ಯಕ್ಷರಾದ ಬಾಲಚಂದ್ರ ದೇವಾಡಿಗ ಮತ್ತು ಪ್ರಮುಖ ಸದಸ್ಯರಾದ ಅನಿಲ್ ಗೌಡ, ಯೋಗೇಶ್ ಸುಪೆಕರ, ಮಂಗೇಶ್ ರಾಯಪನೋರ್ ಅವರು ಶ್ರಮಿಸಿದರು. ಅವರ ಸಮರ್ಪಣೆ ಮತ್ತು ಸಂಘಟನಾ ಕೌಶಲ್ಯದ ಫಲವಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.