July 22, 2026
Mumbai News Kannada
ಪ್ರಕಟಣೆ

ಜೂ. 21ರಂದು ವಸಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಯೋಗ ದಿನಾಚರಣೆ







ವಸಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಯೋಗ ದಿನಾಚರಣೆ ಜೂನ್ 21ರಂದು ಸಾಯಂಕಾಲ 6:00 ಗಂಟೆಗೆ ವಸಯಿ ಪಶ್ಚಿದ ಸಾಯಿ ನಗರದ ಶ್ರೀ ಸ್ವಾಮಿ ನಾರಾಯಣ ಸಭಾಂಗಣದ 2ನೇ ಮಹಡಿಯಲ್ಲಿ ಸಂಘದ ಅಧ್ಯಕ್ಷರಾದ ದೇವೇಂದ್ರ ಬನ್ನಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಯೋಗ ಗುರು ಶ್ರೀ ಮಿಲನ್ ಠಕ್ಕರ್ ಮತ್ತು ಶ್ರೀಮತಿ ಸುಮತಿ ಓ ಪೂಜಾರಿ ಅವರು ಮಾರ್ಗದರ್ಶನ ನೀಡಲಿದ್ದಾರೆ. ಇವರಿಬ್ಬರು ಸುಮಾರು 25 ವರ್ಷಗಳಿಂದ ಯೋಗಾಭ್ಯಾಸದಲ್ಲಿ ತಮ್ಮನ್ನು ಅಳವಡಿಸಿಕೊಂಡಿದ್ದಾರೆ.
ಯೋಗವು ಸುಮಾರು 5000 ವರ್ಷಗಳಿಗೂ ಹೆಚ್ಚು ಹಳೆಯದಾದ ಭಾರತೀಯ ಸಾಂಪ್ರದಾಯವಾಗಿದೆ. ಇದನ್ನು ಋಷಿ-ಮುನಿಗಳು ಆಧ್ಯಾತ್ಮಿಕ ಮತ್ತು ದೈಹಿಕ ಶಿಸ್ತಿನ ರೂಪದಲ್ಲಿ ಅಭಿವೃದ್ಧಿಪಡಿಸಿದರು. ಯೋಗ ವಿದ್ಯೆಯು ಇಡೀ ಜಗತ್ತಿಗೆ ಭಾರತದ ಬಹುದೊಡ್ಡ ಕೊಡುಗೆಯಾಗಿದೆ. ಇಂದು ವಿಶ್ವ ಯೋಗ ದಿನವನ್ನು 190ಕ್ಕೂ ಹೆಚ್ಚು ದೇಶದಲ್ಲಿ ಆಚರಿಸಲಾಗುತ್ತಿದೆ. ಈ ದಿನ ಅನೇಕ ಕಡೆಗಳಲ್ಲಿ ಶಿಬಿರಗಳು, ಸಾಮೂಹಿಕ ಯೋಗ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ.
ಆಧುನಿಕ ಜೀವನ ಶೈಲಿಯ ಒತ್ತಡದಿಂದ ಯುವಜನತೆಗೆ ಯೋಗವು ಶಾಂತಿ, ಏಕಾಗ್ರತೆಯನ್ನು ಒದಗಿಸುವ ಒಂದು ಶಕ್ತಿಶಾಲಿ ಸಾಧನವಾಗಿದೆ.
ಪ್ರತಿಯೊಬ್ಬರೂ ವಿಶ್ವ ಯೋಗ ದಿನವನ್ನು ಆಚರಿಸಿ ಯೋಗದ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕು, ಯೋಗ ದಿನದ ಕಾರ್ಯಕ್ರಮ ಒಳ್ಳೆ ರೀತಿಯಲ್ಲಿ ನಡೆಯಲಿದ್ದು, ಎಲ್ಲಾ ತುಳು- ಕನ್ನಡಿಗರು ಭಾಗವಹಿಸಬೇಕಾಗಿ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಜ.27 ರಂದು ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ‘ಅರಿಶಿನ ಕುಂಕುಮ’: ಜಾನಪದ ಸಮೂಹ ಗೀತೆ ಸ್ಪರ್ಧೆ ಗೆ ಅರ್ಜಿ ಆಹ್ವಾನ

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಡಿ.10 ರಂದು ಬಿಲ್ಲವ ಭವನದಲ್ಲಿ ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಆಶ್ರಯದಲ್ಲಿ “ಪಿರಾವುಡು ಒರಿ ಉಲ್ಲೆ”ನಾಟಕ ಪ್ರದರ್ಶನ  

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ಅ.21, ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 55ನೇ ವಾರ್ಷಿಕ ಮಹಾಪೂಜೆ.

Mumbai News Desk