30 C
Mumbai
September 19, 2026
Mumbai News Kannada
ಪ್ರಕಟಣೆ

ಸಾಂತಾಕ್ರೂಜ್ ಬಿಲ್ಲವ ಭವನದಲ್ಲಿ ಸೆ. 20ರಂದು ‘ಶ್ರೀ ಪಾಂಡವಾಶ್ವಮೇಧ’ ಯಕ್ಷಗಾನ ಪ್ರದರ್ಶನ





​ಮುಂಬಯಿ: ಬಿಲ್ಲವರ ಅಸೋಸಿಯೇಷನ್ ಮುಂಬಯಿ ಪ್ರಾಯೋಜಿತ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ (ರಿ.) 2026-2027ನೇ ಸಾಲಿನ ತಿರುಗಾಟದ ಪ್ರಥಮ ಸೇವೆಯಾಗಿ ‘ಶ್ರೀ ಪಾಂಡವಾಶ್ವಮೇಧ’ ಎಂಬ ಪೌರಾಣಿಕ ಪ್ರಸಂಗದ ಯಕ್ಷಗಾನ ಪ್ರದರ್ಶನವು ಸೆಪ್ಟಂಬರ್ 20ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜರುಗಲಿದೆ. ಉದ್ಯಮಿ ದಿವಂಗತ ಈಶ್ವರ್ ಹೆಜಮಾಡಿ ಅವರ ಸತ್ಪತ್ನಿ ಹಾಗೂ ಮಕ್ಕಳ ಸೇವಾರ್ಥವಾಗಿ ಈ ಪ್ರದರ್ಶನ ಆಯೋಜನೆಗೊಂಡಿದ್ದು, ಅಂದು ಮಧ್ಯಾಹ್ನ 2.30ಗಂಟೆಗೆ ಪ್ರದರ್ಶನ ಆರಂಭಗೊಳ್ಳಲಿದೆ. ಸುಂದರ ರಂಗಪ್ರಸಂಗ ಹಾಗೂ ವೈಭವೋಪೇತ ಕಲಾ ಪ್ರದರ್ಶನದೊಂದಿಗೆ ಮೂಡಿಬರಲಿರುವ ಈ ಯಕ್ಷಗಾನ ಸೇವೆಗೆ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಲಾಪೋಷಣೆ ಮಾಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಗೌರವಾಧ್ಯಕ್ಷರಾದ ಎಲ್. ವಿ. ಅಮೀನ್, ಅಧ್ಯಕ್ಷರಾದ ಹರೀಶ್ ಜಿ. ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್, ಗೌರವ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್ ಹಾಗೂ ಸಾಂಸ್ಕೃತಿಕ ಉಪಸಮಿತಿಯ ಕಾರ್ಯಾಧ್ಯಕ್ಷರಾದ ನವೀನ್ ಪೂಜಾರಿ ಪಡು ಇನ್ನಾ ಮತ್ತು ಗೌರವ ಕಾರ್ಯದರ್ಶಿ ಗೋಪಾಲಕೃಷ್ಣ ಆರ್. ಸಾಲ್ಯಾನ್ ಅವರು ವಿನಂತಿಸಿಕೊಂಡಿದ್ದಾರೆ.



Related posts

ಮೂಲ ಸಿರಿ ಕುಮಾರ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ, ಪಾಂಗಾಳ, ವಾರ್ಷಿಕ ಪಾಂಗಾಳ ಆಯನ ಸಿರಿಜಾತ್ರೆ

Mumbai News Desk

ಎ. 12 ರಿಂದ 18 ರ ವರಗೆ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವ.

Mumbai News Desk

ಕುಲಾಲ ಸಂಘ ಮುಂಬಯಿ: ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ – ಪೆ 15.: ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ

Mumbai News Desk

*11 ನೇ ವರ್ಷದ ಪಟ್ಲ ಸಂಭ್ರಮ 2026**ಮೇ 30 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಕಾರ್ಯಕ್ರಮ**ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ  ಯಕ್ಷಧ್ರುವ ಪಟ್ಲ ಪ್ರಶಸ್ತಿ*

Mumbai News Desk

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ

Mumbai News Desk