September 6, 2026
Mumbai News Kannada
ಸುದ್ದಿ

ಶೆರೋನ್ ಶೆಟ್ಟಿ ಐಕಳರವರ ಮಹಾಕುಂಭಾಶ್ವಮೇಧ ಕೃತಿ ಬಿಡುಗಡೆ ಸಮಾರಂಭ







ಮೂಲ್ಕಿ : ಮಹಿಳೆಯರು ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿ ಸಾಹಿತ್ಯ ಕೃತಿಗಳನ್ನು ಬರೆದು ಸಮಾಜಕ್ಕೆ ನೀಡಿದ್ದಾರೆ. ಅದರಂತೆ ಐಕಳ ಶೆರೋನ್ ಶೆಟ್ಟಿಯವರು ಪ್ರಚಲಿತ ವಿಷಯಗಳ ಬಗ್ಗೆ ಲೇಖನಗಳನ್ನು ಎಲ್ಲಾ ಪತ್ರಿಕೆಗಳಿಗೆ ಬರೆದು ಜನಪ್ರೀಯರಾಗಿದ್ದಾರೆ. ಇವರಿಗೆ ನಾವೆಲ್ಲರೂ ಉತ್ತೇಜನವನ್ನು ಕೊಟ್ಟು ಅವರಿಂದ ಸಾಹಿತ್ಯಕ್ಕೆ ಒಳ್ಳೆಯ ಕೃತಿಗಳು ಮೂಡಿಬರಲಿ ಎಂದು ಖ್ಯಾತ ಯುವ ಲೇಖಕಿ ಶೆರೋನ್ ಶೆಟ್ಟಿ ಐಕಳ ಅವರ ಮಹಾಕುಂಭಾಶ್ವಮೇಧ ಕೃತಿಯನ್ನು ಬಿಡುಗಡೆ ಮಾಡಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್ ಶೆಟ್ಟಿಯವರು ಮಾತನಾಡಿದರು.
ಯುವ ಮಹಿಳಾ ಲೇಖಕರಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದರೆ ಮಾತ್ರ ಸಮಾಜದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ. ಅವರ ಕೃತಿಗಳನ್ನು ಕೊಂಡು ಓದಿ ಅವರನ್ನು ಬೆಳೆಸಬೇಕು ಎಂದು ಮಹಾಕುಂಭಾಶ್ವಮೇಧ ಕೃತಿಯನ್ನು ಬಿಡುಗಡೆ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿಯ ಖ್ಯಾತ ವೈದ್ಯರಾದ ಡಾ| ಅರುಣ್ ಕುಡ್ಡರವರು ಸಾಹಿತಿಗಳು ಆದಷ್ಟು ಕೃತಿಗಳನ್ನು ಬರೆದು ಸಮಾಜಕ್ಕೆ ನೀಡಿದರೆ ಸಾಹಿತ್ಯ ಅಭಿರುಚಿ ಜಾಸ್ತಿಯಾಗುತ್ತದೆ ಎಂದು ಅತಿಥಿಯಾಗಿ ಮಾತನಾಡುತ್ತಾ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ಅತಿಥಿಯಾಗಿ ಮಾತನಾಡಿ ಶೆರೋನ್ ಶೆಟ್ಟಿಯವರ ಲೇಖನವನ್ನು ನಾನು ಓದುತ್ತಾ ಇದ್ದಾನೆ. ಜನರಿಗೆ ಬೇಕಾಗುವಂತಹ ಲೇಖನವನ್ನೇ ಬರೆದು ಜನಪ್ರೀಯರಾಗಿದ್ದಾರೆ ಇವರಿಗೆ ನಾವೆಲ್ಲರೂ ಸಹಕಾರ ನೀಡುವ ಎಂದು ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷರಾದ ನಿಶಾಂತ್ ಶೆಟ್ಟಿ ಕೀಲೆಂಜೂರು, ರವರು ಅತಿಥಿಯಾಗಿ ಮಾತನಾಡುತ್ತಾ ಮಹಿಳಾ ಲೇಖಕರ ಸಂಖ್ಯೆ ಕಡಿಮೆ ಆಗುತ್ತಾ ಇದೆ ನಾವು ಮಹಿಳೆಯರ ಕೃತಿಗಳನ್ನು ಪಡೆದು ಅವರಿಗೆ ಪ್ರೋತ್ಸಾಹಿಸಬೇಕು ಎಂದರು. ಇನೋರ್ವ ಅತಿಥಿ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಪಿ.ವಿ ಪ್ರದೀಪ್ ಕುಮಾರ್ ಹಾಗೂ ಹೊಸ ಅಂಗಣ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ವಾಸು ಪೂಜಾರಿ ಚಿತ್ರಾಪು, ಕೇಶವಾನಂದ ಸ್ವಾಮೀಜಿ, ಬಂಕಿನಾಯಕರು, ಜಯಪಾಲ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.
ದಿನೇಶ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕಿಲ್ಪಾಡಿ ನಿರೂಪಿಸಿದರು ರವಿಚಂದ್ರ ಧನ್ಯವಾದ ಅರ್ಪಿಸಿದರು.



Related posts

ತಂತ್ರಜ್ಞಾನ ಮತ್ತು ಭರವಸೆಯ ಸಮ್ಮಿಲನ: ಭಾರತ್ ಬ್ಯಾಂಕ್‌ನಿಂದ ಹೊಸ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್ ಸೇವೆಗಳಿಗೆ ಚಾಲನೆ.

Mumbai News Desk

ಮತ ಸೌಹರ್ದತೆಗೆ ಸಾಕ್ಷಿಯಾದ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರ ಸಮಿತಿ

Mumbai News Desk

ತೀಯಾ ಫ್ಯಾಮಿಲಿ (ತೀಯಾ ಸಮಾಜ) ಯು.ಎ.ಇ. ಅಧ್ಯಕ್ಷರಾಗಿ ಜಸ್ಮಿತಾ ವಿವೇಕಾನಂದ್

Mumbai News Desk

ಕೊಂಕಣ ರೈಲು ಮಾರ್ಗ ದ್ವಿಗುಣಗೊಳಿಸುವಂತೆ ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

Mumbai News Desk

  ಬಿಲ್ಲವ ಸಮಾಜದ  ಜನನಾಯಕ  ಜಯ ಸಿ. ಸುವರ್ಣ ಸಂಸ್ಮರಣೆ

Mumbai News Desk

ಸತತ 12 ಗಂಟೆ ಚರ್ಚೆ, ವಾಗ್ವಾದ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Mumbai News Desk