September 6, 2026
Mumbai News Kannada
ಸುದ್ದಿ

ಕನ್ನಡದ ಮೊದಲ ಮಹಿಳಾ ಸೂಪರ್ಸ್ಟಾರ್ ಬಿ ಸರೋಜಾ ದೇವಿ ಇನ್ನಿಲ್ಲ





ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.
1955ರಲ್ಲಿ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆ ಬಳಿಕ ಆಫರ್​ಗಳು ಅವರನ್ನು ಹುಡುಕಿ ಬಂದವು. ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೋ ಸರೋಜಾ ದೇವಿ ಅವರು ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ಮೇರು ನಟರಾದ ರಾಜ್​ಕುಮಾರ್, ಕಲ್ಯಾಣ್​ ಕುಮಾರ್ ಮೊದಲಾದವರ ಜೊತೆ ಸರೋಜಾ ದೇವಿ ತೆರೆ ಹಂಚಿಕೊಂಡರು. ‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ಭಾಗ್ಯವಂತರು, ‘ಬಬ್ರುವಾಹನ’ ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನಲ್ಲಿ ‘ಪಾಟ್ಟಾಲಿ ಮುತ್ತು’, ‘ಪಡಿಕಥ ಮೇಥೈ’, ‘ಕಲ್ಯಾಣ ಪರಿಸು’, ತೆಲುಗಿನಲ್ಲಿ ‘ಪಂಡರಿ ಭಕ್ತಲು’, ‘ದಕ್ಷಯಜ್ಞಂ’, ಹಿಂದಿಯಲ್ಲಿ ‘ಆಶಾ’, ‘ಮೆಹಂದಿ ಲಗಾ ಕೆ ರಖನಾ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು.
ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.



Related posts

ಬಿಲ್ಲವರ ಎಸೋಸಿಯೇಶನ್ ನ ಸೇವಾದಳದ ಕಾರ್ಯಧ್ಯಕ್ಷ ನಾಗೇಶ್ ಎಂ ಕೋಟ್ಯಾನ್ ನಿಧನ.

Mumbai News Desk

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ ಡಿ. ದೇವರಾಜ್ ಅರಸು ರವರ ಜನ್ಮದಿನಾಚರಣೆ ಮತ್ತು ಪರಿಶಿಷ್ಟ ಪಂಗಡದ ಇಬ್ಬರು ಪಿ.ಹೆಚ್.ಡಿ ಪದವಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮ

Mumbai News Desk

ಕರ್ನಾಟಕ : ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಹೈಕೋರ್ಟ್ನಿಂದ ಷರತ್ತುಬದ್ಧ ಅನುಮತಿ

Mumbai News Desk

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ

Mumbai News Desk

ಪಕ್ಷಿಕೆರೆ : ಪತ್ನಿ ಮಗುವನ್ನು ಹತ್ಯೆಗೈದು ಪತಿ ರೈಲಿಗೆ ತಲೆಕಕೊಟ್ಟು ಅತ್ಮಹತ್ಯೆ

Mumbai News Desk

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.

Mumbai News Desk