26 C
Mumbai
October 1, 2026
Mumbai News Kannada
ಸುದ್ದಿ

ಮಧೂರು ಕ್ಷೇತ್ರ ಮಹಾತ್ಮೆ” ಸಹಿತ ಅನೇಕ ಪ್ರಸಂಗ ಕಾವ್ಯ ಬರೆದ ಕಾಸರಗೋಡಿಮಧೂರು ವೆಂಕಟಕೃಷ್ಣ ನಿಧನ.




ಮಧೂರು ಜೂನ್ 29:
ಗಡಾನಾಡು ಕಾಸರಗೋಡಿನ ಹಿರಿಯ ಪ್ರಸಂಗಕರ್ತ ಯಕ್ಷಗಾನ ಅರ್ಥಧಾರಿ, ನಿವೃತ್ತ ಸೇಲ್ ಟೇಕ್ಸ್ ಅಧಿಕಾರಿ ಮಧೂರು
ವೆಂಕಟಕೃಷ್ಣ (87) ನಿಧನರಾಗಿದ್ದಾರೆ.
ಮೃತರು ಪತ್ಧಿ ಸುಮಿತ್ರಾ ಹಾಗೂ ಇಬ್ಬರು ಪುತ್ರರು ಸಹಿತ ಓರ್ವ ಮಗಳು ಹಾಗೂ ಅಪಾರ ಆಪ್ತ ವಲಯವನ್ನು ಅಗಲಿದ್ದಾರೆ.

ಕಾಸರಗೋಡಿನ ಮಾರಾಟ ತೆರಿಗೆ ಇಲಾಖೆ ಅಧಿಕಾರಿಯಾಗಿ ನಿವೃತ್ತರಾದ ಅವರು ಉಳಿಯ ಧನ್ವಂತರಿ ಯಕ್ಷಗಾನ ಸಂಘದ ನೆರಳಲ್ಲಿ ಅರ್ಥಧಾರಿ, ವೇಷಧಾರಿ, ಕಲಾವಿದನಾಗಿ ಮೆರೆದವರು. ತೆಂಕಣ ಯಕ್ಷಗಾನದ ದಂತಕಥೆ ಕೂಡ್ಲು ನಾರಾಯಣ ಬಲ್ಯಾಯರ ಶಿಷ್ಯನಾಗಿ ಯಕ್ಷಗಾನ ಶಿಕ್ಷಣ ಪಡೆದ ಅವರು ಪ್ರಸಂಗಕರ್ತನಾಗಿ ಮೆರೆದವರು. ಅವರ ಸಾಧನೆ ಮಾನಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರಿಗೆ ರಾಜ್ಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ.ಜನಪ್ರಿಯವಿದ ಮಧೂರು ಕ್ಷೇತ್ರಮಹಾತ್ಮೆ ಸಹಿ ವೖಶಾಲಿನಿ ಪರಿಣಯ, ಧನ್ವಂತರಿ ಮಹಾತ್ಮೆ, ಹಲವಾರು ಕ್ಷೇತ್ರ ಮಹಾತ್ಮೆ, ನದಿಯಾಗಿ ಹರಿದ ನಂದಿನಿ, ದುಂಬಿಯಾಗಿ ನೆಗೆದ ಭ್ರಾಮರಿ ಹೀಗೆ ಅನೇಕ ಪ್ರಸಂಗಗಳನ್ನು ರಚಿಸಿದ ಇವರ ಕೃತಿಗಳು ಮೇಳದ ಆಟ, ತಾಳಮದ್ದಳೆ ಕೂಟಗಳಲ್ಲಿ ಜನಪ್ರಿಯವಾಗಿವೆ. ಇವರ ಕಾವ್ಯ ರಚನೆಗಳು ವಿವಿಧ ಭಾಗವತರ ಕಂಠದಲ್ಲಿ ಹಾಡಲ್ಪಟ್ಟು ಜಾಲತಾಣದ ಮೂಲಕ ಸಹಸ್ರಾರು ಕೇಳುಗರನ್ನು ತಲುಪಿದೆ.

ಯಕ್ಷಗಾನದಲ್ಲಿ ಮೊದಲು ವಂದಿಸುವ ಮಧೂರು ಕ್ಷೇತ್ರದ ಮುಂಬಾಗಿಲಿನ ಬಳಿ ವಾಸಿಸುವ ಅವರು ಬರೆದ” ಮಧೂರು ಕ್ಷೇತ್ರ ಮಹಾತ್ಮೆ” ಇತ್ತೀಚಿನ ಮಧೂರು ಬ್ರಹ್ಮಕಲಶದ ವೇಳೆ ಪ್ರದರ್ಶನ ಕಂಡಿತ್ತು. ಆ ವೇದಿಕೆಯಲ್ಲಿ ಅವರನ್ನು ಸನ್ಮಾನಿಸಲಿಗಿತ್ತು.
ಶಿವಳ್ಳಿ ಧ್ವನಿ ಪತ್ರಿಕೆಯ. ಮಾಜಿ ಸಂಪಾದಕರೂ ಆಗಿದ್ದ ಅವರ ನಿಧನಕ್ಕೆ ಕಾಸರಗೋಡಿನ ಶಿವಳ್ಳಿ ಮಹಾಸಭಾ ಗಾಢ ಸಂತಾಪ ಪ್ರಕಟಿಸಿದೆ.
ತೆಂಕಣ ಯಕ್ಷಗಾನದ ಅನೂಭವಿಯಾಗಿದ್ದ ಅವರು ಅರ್ಥಗಾರಿಕೆ ಮೂಲಕ ಗತ ಕಾಲದ ಪ್ರಸಿದ್ಧರ ಹಾಡುಗಾರಿಕೆ ಆಲಿಸಿ, ಅರ್ಥವಿಸಿ ಬೆಳೆದವರು. ಅವರ ಪ್ರಸಂಗಗಳು ತೆಂಕಿನ ಎಲ್ಲಾ ಮೇಳಗಳಲ್ಲೂ ಜನಪ್ರಿಯವಾಗಿದೆ.



Related posts

ಮೂಲ್ಕಿ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಹರ್ಷರಾಜ್ ಶೆಟ್ಟಿ ಜಿ ಎಂ ಆಯ್ಕೆ

Mumbai News Desk

ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 15ಕ್ಕೂ ಹೆಚ್ಚು ವಾಹನದ ಮೇಲೆ ಹರಿದ ಟ್ರಕ್, ಐದು ಸಾವು ಹಲವರು ಗಂಭೀರ.

Mumbai News Desk

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (03/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ತುಳು ರಂಗಭೂಮಿ ಹಿರಿಯ ಕಲಾವಿದ, ಚಲನ ಚಿತ್ರ ನಟ ಚಿ.ರಮೇಶ್ ಕಲ್ಲಡ್ಕ ಇನ್ನಿಲ್ಲ

Mumbai News Desk

ಪಳ್ಳಿ “ಫಿಶ್ ಮೀಲ್“ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ, ತಹಶೀಲ್ದಾರ್ ರಿಂದ ಸೂಕ್ತ ಕ್ರಮದ ಭರವಸೆ.

Mumbai News Desk