30.9 C
Mumbai
June 8, 2026
Mumbai News Kannada
ಕ್ರೀಡೆ

ಉಡುಪಿ ಮೂಲದ ಕನ್ನಡತಿ, ದುಬಾಯಿಯ ಗುಲ್ಶನ್ ಬಾನು ಕಾಜಿಯಿಂದ ಜಪಾನ್‌ನಲ್ಲಿ ಐತಿಹಾಸಿಕ ದಾಖಲೆ





ದುಬಾಯಿ : ದುಬಾಯಿ ನಿವಾಸಿ ಮತ್ತು ಟೀಂ ಇಂಡಿಯಾದ ಶಕ್ತಿಶಾಲಿ ಪವರ್‌ಲಿಫ್ಟರ್ ಗುಲ್ಶನ್ ಬಾನು ಕಾಜಿ ಅವರು, 47 ವರ್ಷದ ಮಾಸ್ಟರ್-1 ವಿಭಾಗದಲ್ಲಿ ಸ್ಪರ್ಧಿಸಿ, ಜಪಾನ್‌ನ ಹಿಮೆಜಿಯಲ್ಲಿ ಜುಲೈ 5ರಿಂದ 13ರವರೆಗೆ ನಡೆದ ಏಷ್ಯಾ, ಆಫ್ರಿಕಾ ಮತ್ತು ಪೆಸಿಫಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇವರು 84 ಕಿಲೋ ತೂಕ ವರ್ಗದಲ್ಲಿ ಸ್ಪರ್ಧಿಸಿ, ಸ್ಕ್ವಾಟ್, ಡೆಡ್‌ಲಿಫ್ಟ್ ಮತ್ತು ಒಟ್ಟು ತೂಕದಲ್ಲಿ ಮೂರು ಹೊಸ ಏಷ್ಯನ್ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರಿಂದ ಈ ಸ್ಪರ್ಧೆಯಲ್ಲಿ ಅತ್ಯಂತ ಪ್ರಭಾವಶಾಲಿ ಅಥ್ಲೀಟ್‌ಗಳ ಪೈಕಿ ಒಬ್ಬರಾಗಿದ್ದರು. ವಿಶೇಷವಾಗಿ, 208 ಕಿಲೋಗ್ರಾಂ ಡೆಡ್‌ಲಿಫ್ಟ್ ಎತ್ತುವುದರ ಮೂಲಕ ಅವರು ಚಿನ್ನದ ಪದಕವನ್ನು ಜಯಿಸಿದ ಇವರು ಪವರ್‌ಲಿಫ್ಟಿಂಗ್‌ನಲ್ಲಿ ಏಷ್ಯಾದ ಅತ್ಯಂತ ಶಕ್ತಿಶಾಲಿ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ತಾಯಿಯಾಗಿ, ಉದ್ಯೋಗ ಮತ್ತು ಅಥ್ಲೀಟ್ ಮೂರು ಜವಾಬ್ದಾರಿಗಳನ್ನು ಸಮತೋಲನದಲ್ಲಿ ನಿಭಾಯಿಸುತ್ತಿರುವ ಗುಲ್ಶನ್, ತಮ್ಮ ಸಾಧನೆಯಲ್ಲಿ ಇತರ ಮಹಿಳೆಯರನ್ನು ಮೀರಿಸಿದ್ದಾರೆ,

“ಇದು ನನ್ನ ಜಯ ಮಾತ್ರವಲ್ಲ. ಈ ಸಾಧನೆ, ತನ್ನ ಶಕ್ತಿಯನ್ನು ಅರಿಯಲು ಧೈರ್ಯವಿರುವ ಪ್ರತಿಯೊಬ್ಬ ಮಹಿಳೆಯದ್ದೂ ಆಗಿದೆ – ವಯಸ್ಸು ಏನೇ ಆಗಿರಲಿ, ಪರಿಸ್ಥಿತಿಗಳು ಹೇಗಿದ್ದರೂ ದುಬಾಯಿ ನನ್ನು ಬೆಳೆಸಿದ್ದರೆ, ಭಾರತ ಹೋರಾಟದ ಶಕ್ತಿ ನೀಡಿದೆ.” ಎಂಬುದು ಉಡುಪಿ ಮೂಲದ ಕನ್ನಡತಿಯ ಅಭಿಪ್ರಾಯ. ಮುಂದೆ ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಗೆ ಸ್ಪರ್ಧಿಸುವ ಗುರಿಯೊಂದಿಗೆ ಗುಲ್ಶನ್ ಬಾನು ಸಜ್ಜಾಗುತ್ತಿದ್ದಾರೆ.



Related posts

ಕರುನಾಡ ಸಿರಿ ಸಂಸ್ಥೆ : ಯಶಸ್ವಿಯಾಗಿ ಸಂಪನ್ನಗೊಂಡ ಕ್ರಿಕೆಟ್ ಮಹೋತ್ಸವ

Mumbai News Desk

ಡಬ್ಲ್ಯೂ ಐಎಫ್ ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಆಯ್ಕೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಇಂಟರ್ನ್ಯಾಷನಲ್ ಶಾಲೆಯ ಆಶ್ರಯದಲ್ಲಿ ರಾಷ್ಟ್ರಮಟ್ಟದ  ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿಗಳಿಗೆ  ವಾಲಿಬಾಲ್‌ ಪಂದ್ಯಾಟ

Mumbai News Desk

ಸಿಂಹ ಘರ್ಜನೆ 2025 : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮಂಗಳಾದೇವಿ ಕ್ಲಬ್

Mumbai News Desk

ಏಷ್ಯನ್ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌; ಉದಯ ಎಸ್. ಶೆಟ್ಟಿ ತಂಡಕ್ಕೆ ದೇಶದ ವಿವಿದೆಡೆ ಜಯಬೇರಿ.

Mumbai News Desk

ಪ್ಯಾರಿಸ್ ಒಲಿಂಪಿಕ್ಸ್ – ಭಾರತಕ್ಕೆ ಮೊದಲ ಪದಕ, ಶೂಟಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಮನು ಭಾಕರ್

Mumbai News Desk