30.9 C
Mumbai
June 8, 2026
Mumbai News Kannada
ತುಳುನಾಡು

ಮುಲ್ಕಿ : ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರಿಗೆ ಸನ್ಮಾನ





ಮುಲ್ಕಿಯ ಹೊಸ ಅಂಗಣ ಮಾಸಪತ್ರಿಕೆಯ ಆಶ್ರಯದಲ್ಲಿ ತಿಂಗಳ ಬೆಳಕು ಕಾರ್ಯಕ್ರಮ ಇತ್ತೀಚೆಗೆ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ನ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭ ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶ್ರೀನಿವಾಸ ಪೂಜಾರಿ ಅವರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಅರ್ಚಕರ ಪಾತ್ರ ಮಹತ್ತರವಾಗಿದ್ದು, ದೇವರ ಮತ್ತು ಭಕ್ತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಅರ್ಚಕರು ಸಮಾಜದ ಆಸ್ತಿಯಾಗಿದ್ದಾರೆ. ಇವರನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ ಎಂದು ನುಡಿದರು.


ಮುಖ್ಯ ಅತಿಥಿ ವಾಮನ್ ಇಡ್ಯಾ ಅವರು ಮಾತನಾಡುತ್ತಾ ಹೊಸ ಅಂಗಣ ಮಾಸ ಪತ್ರಿಕೆಯಲ್ಲಿ ಒಳ್ಳೆಯ ಲೇಖನಗಳು ಪ್ರಕಟವಾಗುತ್ತಿದ್ದು, ಇದು ಜನರು ಕೇಳಿ ಪಡೆದು ಓದುವಂತಹ ಪತ್ರಿಕೆ,ಎಂಟು ವರ್ಷಗಳಿಂದ ನಿರಂತರ ಪತ್ರಿಕೆಯನ್ನು ಪತ್ರಿಕೆ ಸಂಪಾದಕರಾದ ಹರಿಶ್ಚಂದ್ರ ಸಾಲ್ಯಾನ್ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕ್ರಷ್ಣ ಪುನರೂರು ಮಾತನಾಡುತ್ತಾ ಯಾವುದೇ ಫಲಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಅರ್ಚಕರು ಸಮಾಜದ ಆಸ್ತಿಯಾಗಿದ್ದು, ಅವರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ವಾಮನ್ ಇಡ್ಯಾ, ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಉಮೇಶ್ ವಾನಂಪಾಡಿ, ಕಥಾ ಬಿಂದುವಿನ ಪಿ.ವಿ ಪ್ರದೀಪ್ ಕುಮಾರ್, ತೋಕೂರು ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಕೇಶವಾನಂದ ಗುರೂಜಿ, ವಾಸು ಪೂಜಾರಿ ಚಿತ್ರಾಪು, ಹಬೀಬುಲ್ಲ, ಏ ಜಯಪಾಲ ಶೆಟ್ಟಿ, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಹೊಸ ರಂಗಣ್ಣ ಮಾಸ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು, ವೈ ಎನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರೆ, ದಿನೇಶ್ ಶೆಟ್ಟಿ ಕೊನೆಯಲ್ಲಿ ವಂದಿಸಿದರು.



Related posts

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ, ಅ. 29ರ ತನಕ ಸ್ವರ್ಣ ಸಮರ್ಪಣೆಗೆ ಭಕ್ತರಿಗೆ ಅವಕಾಶ

Mumbai News Desk

ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ : ಕಾಪು ಬಂಟರ ಸಂಘದಿಂದ ಸನ್ಮಾನ

Mumbai News Desk

ಉಡುಪಿಯಲ್ಲಿ ನಡೆದ ಕುಣಿತ ಭಜನಾ ಸೇವೆಯಲ್ಲಿ ಎಲ್ಲರ ಗಮನ ಸೆಳೆದ ಲಕ್ಷ್ಮಿ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ತಂಡದ ಪುಟಾಣಿಗಳು

Mumbai News Desk

ಅಕ್ಷತಾ ಪೂಜಾರಿ ಮನೆಗೆ ನುಗ್ಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

Mumbai News Desk

ಮೂಲ್ಕಿ: “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಸಸಿಹಿತ್ಲು: ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧನ್ಯೋತ್ಸವ ಕಾರ್ಯಕ್ರಮ

Mumbai News Desk