32.1 C
Mumbai
June 7, 2026
Mumbai News Kannada
ಪ್ರಕಟಣೆ

ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್ – 2026ಕ್ಕೆ ಆಹ್ವಾನ





ಮುಂಬಯಿ, ಡಿ. 14: ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಮುಂಬಯಿ ವತಿಯಿಂದ ಸಮಾಜ ಬಾಂಧವರಿಗಾಗಿ ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಟೆನಿಸ್ ಬಾಲ್ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಆಯೋಜಿಸಲಾಗಿದೆ.

​ಈ ಪಂದ್ಯಾವಳಿಯು 2026ರ ಜನವರಿ 18ರಂದು ಅಂಧೇರಿ ಪೂರ್ವದ ಮರೋಲ್‌ನಲ್ಲಿರುವ ಪ್ರೈಮ್ ಟರ್ಫ್, ಮಿತ್ತಲ್ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

​ಈ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ವತಿಯಿಂದ ಆಹ್ವಾನ ನೀಡಲಾಗಿದೆ.

​ಪಂದ್ಯಾವಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳು, ಪ್ರವೇಶ ಪ್ರಕ್ರಿಯೆ ಹಾಗೂ ಇತರೆ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಮುಂಬಯಿಯ ಅಧ್ಯಕ್ಷ ಸಂತೋಷ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್, ಕ್ರೀಡಾ ಕಾರ್ಯದರ್ಶಿಗಳಾದ ರಘುರಾಮ್ ಮೆಂಡನ್ ಹಾಗೂ ಸುನಿಲ್ ಕುಂದರ್ ಮತ್ತು ಸಂಘದ ಇತರ ಪದಾಧಿಕಾರಿಗಳು ತಿಳಿಸಿದ್ದಾರೆ.

​ಹೆಚ್ಚಿನ ಮಾಹಿತಿಗಾಗಿ ಅಶೋಕ್ ಮೆಂಡನ್ (9870948305), ಸುನಿಲ್ ಕುಂದರ್ (8108062951), ಕೃಷ್ಣ ಮೂರ್ತಿ ನಾಯ್ಕ್ (9867508847) ಅವರನ್ನು ಸಂಪರ್ಕಿಸಬಹುದು.



Related posts

ಸೆ.7 ರಂದು ಡೊಂಬಿವಲಿಯಲ್ಲಿ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮಹೋತ್ಸವ: ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತ

Mumbai News Desk

ಆಗಸ್ಟ್ 3ರಂದು ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ಥಾಣೆ, ಆಶ್ರಯದಲ್ಲಿ ಮಂದಾರ್ತಿ ಮೇಳದ ಕಲಾವಿದರಿಂದ “ಜಗನ್ಮಾತೆ ಶ್ರೀ ವನದುರ್ಗಿ” ಯಕ್ಷಗಾನ ಪ್ರದರ್ಶನ

Mumbai News Desk

ಮಾ 9 ರಿಂದ 11 ರ ವರಗೆ ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯ 9ನೇ ವಾರ್ಷಿಕೋತ್ಸವ.

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk

ಡಿ.24 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ, ಅನ್ನ ಸಂತರ್ಪಣೆ.

Mumbai News Desk

ಫೆ. 22 ರಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ವಾರ್ಷಿಕ ಶನಿಗ್ರಂಥ ಪಾರಾಯಣ

Mumbai News Desk