33 C
Mumbai
October 5, 2026
Mumbai News Kannada
ಪ್ರಕಟಣೆ

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಅ. 11ರಿಂದ 12ನೇ ವರ್ಷದ ಶರನ್ನವರಾತ್ರಿ ಮಹೋತ್ಸವ



ಡೊಂಬಿವಲಿ: ಇಲ್ಲಿನ ನ್ಯೂ ದೇವೀಚಪಾಡಾ, ಜಗದಂಬಾ ರೋಡ್, ಗೋಪಿನಾಥ ಚೌಕ್‌ನಲ್ಲಿರುವ ಶ್ರೀ ಜಗದಂಬಾ ಮಂದಿರದಲ್ಲಿ ಯಕ್ಷಕಲಾ ಸಂಸ್ಥೆಯ (ರಿ.) ಸಂಚಾಲಕತ್ವದಲ್ಲಿ 12ನೇ ವರ್ಷದ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಅಕ್ಟೋಬರ್ 11 ರಿಂದ 21ರವರೆಗೆ ವೈಭವದಿಂದ ಜರುಗಲಿದೆ.

ಸ್ವಸ್ತಿ ಶ್ರೀ ಶಾಲಿವಾಹನ ಶಕೆ 1949ರ ಪರಾಭವ ನಾಮ ಸಂವತ್ಸರದ ಅಶ್ವಯುಜ ಮಾಸ ಶುಕ್ಲಪಕ್ಷ ಶರದ್‌ಋತುವಿನಲ್ಲಿ ಜರುಗುವ ಈ ಮಹೋತ್ಸವವು ಶ್ರೀಕ್ಷೇತ್ರ ತಂತ್ರಿಯವರ ಶುಭ ಆಶೀರ್ವಾದದೊಂದಿಗೆ, ಪ್ರಧಾನ ಅರ್ಚಕರಾದ ಶ್ರೀ ಸುಬ್ರಮಣ್ಯ ಭಟ್ (ಮೀರಾ ರೋಡ್) ಹಾಗೂ ಶ್ರೀ ಜಗದೀಶ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ.

ದೈನಂದಿನ ಪೂಜಾ ಕಾರ್ಯಕ್ರಮಗಳ ವಿವರ:

  • ಅಕ್ಟೋಬರ್ 11 (ಭಾನುವಾರ): ಮುಂಜಾನೆ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ ಹಾಗೂ ತೋರಣ ಮುಹೂರ್ತ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
  • ಅಕ್ಟೋಬರ್ 12 (ಸೋಮವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 13 (ಮಂಗಳವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ರಂಗಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಮತ್ತು 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 14 (ಬುಧವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 15 (ಗುರುವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಮತ್ತು 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 16 (ಶುಕ್ರವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 7.00ಕ್ಕೆ ರಂಗಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 17 (ಶನಿವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ / ರಂಗಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಮತ್ತು 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 18 (ಭಾನುವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00 / 7.00ಕ್ಕೆ ರಂಗಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 19 (ಸೋಮವಾರ): ಮುಂಜಾನೆ 9.00ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 20 (ಮಂಗಳವಾರ): ಮುಂಜಾನೆ 9.00ಕ್ಕೆ ದುರ್ಗಾಹೋಮ (ಸಂಪೂರ್ಣ ಆಹುತಿ), ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಮತ್ತು 8.30ಕ್ಕೆ ಅನ್ನಸಂತರ್ಪಣೆ.
  • ಅಕ್ಟೋಬರ್ 21 (ಬುಧವಾರ – ವಿಜಯದಶಮಿ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ 1.00 ಗಂಟೆಗೆ ಪಲ್ಲ ಪೂಜೆ ಮತ್ತು ಅನ್ನಸಂತರ್ಪಣೆ ನೆರವೇರಲಿದೆ.

ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾ ಸೇವೆ:

ಮಹೋತ್ಸವದ ಪ್ರಯುಕ್ತ ಪ್ರತಿದಿನ ಮುಂಜಾನೆ ಹಾಗೂ ಸಾಯಂಕಾಲ ವಿವಿಧ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾಮೃತ ಸೇವೆ ಜರುಗಲಿದೆ:

  • ಅಕ್ಟೋಬರ್ 11: ಶ್ರೀ ಜಗದಂಬಾ ಮಂದಿರ (ಬೆಳಿಗ್ಗೆ 10.00-11.30), ಮಾತಾ ಅಮೃತಾನಂದಮಯಿ ಸತ್ಸಂಗ ಡೊಂಬಿವಲಿ ಪಶ್ಚಿಮ (11.30-12.30), ಚಿಣ್ಣರ ಬಿಂಬ ಡೊಂಬಿವಲಿ ಪಶ್ಚಿಮ ಮತ್ತು ಪೂರ್ವ (ಮಧ್ಯಾಹ್ನ 1.30-2.30), ದೇವಾಡಿಗ ಸಂಘ ಡೊಂಬಿವಲಿ (2.30-3.30), ಶ್ರೀ ರಾಧಾಕೃಷ್ಣ ಶನೇಶ್ವರ ಮಂದಿರ ಡೊಂಬಿವಲಿ (ಸಂಜೆ 6.45-8.00).
  • ಅಕ್ಟೋಬರ್ 12: ಅಯ್ಯಪ್ಪ ಭಕ್ತ ಮಂಡಳಿ ಅಜದೇವ್‌‌ಪಾಡಾ ಡೊಂಬಿವಲಿ (ಮಧ್ಯಾಹ್ನ 1.30-2.30).
  • ಅಕ್ಟೋಬರ್ 13: ಬ್ರಹ್ಮ ಮಹಾಲಿಂಗೇಶ್ವರ ಭಜನಾ ಮಂಡಳಿ ಭಾಂಡೂಪ್ (ಬೆಳಿಗ್ಗೆ 11.30-12.30), ನಿತ್ಯಾನಂದ ಭಜನಾ ಮಂಡಳಿ ಭಾಂಡೂಪ್ (ಮಧ್ಯಾಹ್ನ 1.30-2.30), ಮಹಾಲಕ್ಷ್ಮಿ ಸನ್ನಿಧಿ ಭಜನಾ ಮಂಡಳಿ (2.30-3.30), ದುರ್ಗಾಪರಮೇಶ್ವರಿ ಭಜನಾ ಮಂಡಳಿ ಡೊಂಬಿವಲಿ (ಸಂಜೆ 5.30-6.30).
  • ಅಕ್ಟೋಬರ್ 14: ತುಳು ವೆಲ್‌ಫೇರ್ ಲಕ್ಷ್ಮೀ ಭಜನಾ ಮಂಡಳಿ (ಬೆಳಿಗ್ಗೆ 10.30-11.30), ಸಿರಿನಾಡ ವೆಲ್‌ಫೇರ್ ಅಸೋಸಿಯೇಷನ್ ಡೊಂಬಿವಲಿ (ಮಧ್ಯಾಹ್ನ 1.30-2.30), ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ (3.30-4.30), ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ (ರಾತ್ರಿ 7.00-8.00).
  • ಅಕ್ಟೋಬರ್ 15: ಸಪ್ತ ಸ್ವರ ಭಜನಾ ಮಂಡಳಿ ಡೊಂಬಿವಲಿ (ಬೆಳಿಗ್ಗೆ 11.30-12.30), ಜೈ ಭವಾನಿ ಶನೇಶ್ವರ ಮಂದಿರ ಡೊಂಬಿವಲಿ (ಮಧ್ಯಾಹ್ನ 1.30-2.30), ಸ್ವಾವಲಂಬ ಭಜನಾ ಮಂಡಳಿ ಡೊಂಬಿವಲಿ (ಸಂಜೆ 6.00-7.00), ಭಕ್ತಿ ಭಜನಾಮೃತ ಮತ್ತು ಜಾನಪದ ಸಂಗಮ (ರಾತ್ರಿ 7.00-8.00).
  • ಅಕ್ಟೋಬರ್ 16: ಭ್ರಮರಿ ಭಜನಾ ಮಂಡಳಿ ಡೊಂಬಿವಲಿ (ಬೆಳಿಗ್ಗೆ 11.30-12.30), ವರದ ಸಿದ್ಧಿ ವಿನಾಯಕ ಸೇವಾ ಮಂಡಲ ಡೊಂಬಿವಲಿ (ಮಧ್ಯಾಹ್ನ 1.30-2.30), ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ (3.30-4.30), ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಮಹಿಳಾ ವಿಭಾಗ (ಸಂಜೆ 5.30-6.30).
  • ಅಕ್ಟೋಬರ್ 17: ಆದಿಶಕ್ತಿ ಓಲ್ಡ್ ಡೊಂಬಿವಲಿ (ಬೆಳಿಗ್ಗೆ 11.30-12.30), ಕರ್ನಾಟಕ ಸಂಘ ಡೊಂಬಿವಲಿ (ಮಧ್ಯಾಹ್ನ 1.30-2.30), ಪದ್ಮಶಾಲಿ ಭಜನಾ ಮಂಡಳಿ ಠಾಣೆ (3.30-4.30), ವೆಂಕಟರಮಣ ಭಜನಾ ಮಂಡಳಿ ಡೊಂಬಿವಲಿ (ಸಂಜೆ 6.00-7.00).
  • ಅಕ್ಟೋಬರ್ 18: ಮಹಾವಿಷ್ಣು ಮುಂಬ್ರಾ ಮಿತ್ರ ಭಜನಾ ಮಂಡಳಿ (ಸಂಜೆ 7.00-8.00), ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ (ಬೆಳಿಗ್ಗೆ 11.30-12.30), ಸರಸ್ವತಿ ಸಂಗೀತ ವಿದ್ಯಾಲಯ (ಮಧ್ಯಾಹ್ನ 1.30-2.30), ಅಮೃತೇಶ್ವರಿ ಭಜನಾ ಮಂಡಳಿ ನವಿ ಮುಂಬೈ ಸಾನಪಾಡಾ (2.30-3.30), ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ (3.30-4.30).
  • ಅಕ್ಟೋಬರ್ 19: ನಾರಿ ಶಕ್ತಿ ಭಜನಾ ಮಂಡಳಿ ಪನ್ವೇಲ್ (ಸಂಜೆ 5.30-6.30), ಕುಲಾಲ ಸಂಘ ಡೊಂಬಿವಲಿ (ಬೆಳಿಗ್ಗೆ 11.30-12.30), ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ (ಮಧ್ಯಾಹ್ನ 1.30-2.30), ದುರ್ಗಾಪರಮೇಶ್ವರಿ ಭಕ್ತ ವೃಂದ (2.30-3.30), ರಜಕ ಸಂಘ ಡೊಂಬಿವಲಿ (ರಾತ್ರಿ 7.00-8.00).
  • ಅಕ್ಟೋಬರ್ 20: ಜಗದಂಬಾ ಮಂದಿರ ಭಜನಾ ತಂಡ (ಬೆಳಿಗ್ಗೆ 10.30-11.30).

ವಿಶೇಷ ಸೇವೆಗಳು ಹಾಗೂ ಹರಕೆ ವಿವರ:

ನವರಾತ್ರಿಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಪ್ರತಿದಿನ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಮಲ್ಲಿಗೆ ಸೇವೆ, ಹೂವಿನ ಪೂಜೆ, ದೀಪಾರಾಧನೆ, ಕುಂಕುಮಾರ್ಚನೆ, ಕರ್ಪೂರ ಆರತಿ ಹಾಗೂ ಅನ್ನಸಂತರ್ಪಣೆಗಾಗಿ ಹಸಿರು ಹೊರೆಕಾಣಿಕೆಗಳನ್ನು, ಹರಕೆಗಳನ್ನು ಮತ್ತು ಧನಸಹಾಯವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಲಾಗುತ್ತದೆ. ದೇವಿಯ ಸಪ್ತಶತಿ ಪಾರಾಯಣ ಹಾಗೂ ದುರ್ಗಾಹೋಮ ಮಾಡಿಸಲಿಚ್ಛಿಸುವ ಭಕ್ತರು ಒಂದು ವಾರ ಮುಂಚಿತವಾಗಿ ತಿಳಿಸಬೇಕಾಗಿದೆ. ಶನಿಪೂಜೆ ನೆರವೇರಿಸಲು ಇಚ್ಛಿಸುವವರು ಕಾರ್ಯಕಾರಿ ಸಮಿತಿಯನ್ನು ಸಂಪರ್ಕಿಸಲು ಕೋರಲಾಗಿದೆ.

ದೇಣಿಗೆ ನೀಡಲು ಬ್ಯಾಂಕ್ ಖಾತೆ ವಿವರ:

  • ಖಾತೆಯ ಹೆಸರು: Yaksha Kala Sanstha
  • ಬ್ಯಾಂಕ್: HDFC Bank Ltd.
  • ಖಾತೆ ಸಂಖ್ಯೆ: 50100914689783
  • IFSC ಕೋಡ್: HDFC0005411

2025ರ ಉತ್ಸವಕ್ಕೆ ಸಹಕರಿಸಿದ ಎಲ್ಲಾ ದಾನಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ಸಂಸ್ಥೆಯು ಕೃತಜ್ಞತೆ ಸಲ್ಲಿಸಿದ್ದು, ಮುಂಬರುವ ಮಹೋತ್ಸವದಲ್ಲಿ ಭಕ್ತಾದಿಗಳು ತನು, ಮನ, ಧನಗಳಿಂದ ಸಹಕರಿಸಿ ಶ್ರೀ ಜಗದಂಬೆಯ ಕೃಪೆಗೆ ಪಾತ್ರರಾಗಬೇಕಾಗಿ ಸಂಸ್ಥೆಯ ಅಧ್ಯಕ್ಷರು, ಆಡಳಿತ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಶನಿಪೂಜಾ ಸಮಿತಿ ಹಾಗೂ ಸರ್ವ ಸದಸ್ಯರು ಕೋರಿದ್ದಾರೆ.

ಸಂಪರ್ಕಕ್ಕೆ ಮೊಬೈಲ್ ಸಂಖ್ಯೆಗಳು: 9611226544, 8828680320, 9821321978, 9930026134, 9820875894, 9004662484.



Related posts

ಸಾಂತಾಕ್ರೂಜ್ ಪೇಜಾವರ ಮಠ : ಡಿ. 23ಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ವರ್ಷದ ಸಮಾರಾಧನೆ

Mumbai News Desk

ಮಾ7:   ಒಕ್ಕಲಿಗರ ಸಂಘ ಮಹಾರಾಷ್ಟ್ರ, (ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ) ವತಿಯಿಂದ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪುಸ್ತಕ ವಿತರಣೆ,

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ: ಆಗಸ್ಟ್ 9ರಂದು 125ನೇ ಸಂಸ್ಥಾಪನಾ ದಿನಾಚರಣೆ ಮತ್ತು 125ನೇ ವಾರ್ಷಿಕೋತ್ಸವಕ್ಕೆ ಚಾಲನೆ

Mumbai News Desk

ಸಾಂತಾಕ್ರೂಸ್ :  ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಅ 3 ರಿಂದ 11 ವರೆಗೆ ನವರಾತ್ರಿ ಉತ್ಸವ.

Mumbai News Desk

ಏ. 13 ರಂದು ಮಂಗಳೂರಲ್ಲಿ ನಡೆಯಲಿರುವ ಕುಲಾಲ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಏ.20 ರಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ವಾರ್ಷಿಕ ನಡಾವಳಿ ಮಹೋತ್ಸವ.

Mumbai News Desk